ಆ್ಯಪ್ನಗರ

ಥ್ರಿಲ್ಲರ್ ಚಿತ್ರಗಳಲ್ಲಿ ಕಿಚ್ಚ ನಟಿಸಲಿ ಎಂದ ವಿಕ ಓದುಗರು

ಸದ್ಯ ಪೈಲ್ವಾನ್ ಸೇರಿ ಮೂರು ಚಿತ್ರಗಳಲ್ಲಿ ಬಿಝಿ ಇರುವ ಕಿಚ್ಚ ಸುದೀಪ್ ಥ್ರಿಲ್ಲರ್ ಮಾದರಿಯ ಚಿತ್ರದಲ್ಲಿ ನಟಿಸಬೇಕು ಎಂದು ವಿಕ-ಲವಲವಿಕೆ ಓದುಗರು ಇಷ್ಟಪಟ್ಟಿದ್ದಾರೆ.

Vijaya Karnataka 30 Aug 2018, 5:00 am
ಲವಲವಿಕೆ ತನ್ನ ಟ್ವಿಟರ್ ಖಾತೆಯಲ್ಲಿ ಪ್ರತಿ ದಿನ ನಡೆಸುವ ಪೋಲ್‌ನಲ್ಲಿ ಮೊನ್ನೆ ಸುದೀಪ್ ಯಾವ ಮಾದರಿಯ ಚಿತ್ರದಲ್ಲಿ ನಟಿಸಬೇಕು ಎಂಬ ಪ್ರಶ್ನೆ ಕೇಳಲಾಗಿತ್ತುಘಿ, ಇದಕ್ಕೆ ಸಾವಿರಾರು ಮಂದಿ ಸ್ಪಂದನೆ ನೀಡಿ ಸುದೀಪ್ ಥ್ರಿಲ್ಲರ್ ಮಾದರಿಯ ಸಿನಿಮಾಗಳಲ್ಲಿ ಹೆಚ್ಚು ನಟಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web SUDEEP  (1)

ಸಿನಿಮಾ ರಂಗದ ಬೆಳವಣಿಗೆ ದೃಷ್ಟಿಯಿಂದ ಲವಲವಿಕೆ (ಔ್ಖಓ ಉಈಐಣ್ಕ) ಪ್ರತಿದಿನ ವಿವಿಧ ಸಂಗತಿಗಳ ಬಗ್ಗೆ ಪೋಲ್ ಹಾಕಲಾಗುತ್ತದೆ. ಈ ಪೋಲ್‌ಗೆ ಸಾಕಷ್ಟು ಓದುಗರು ರಿಯಾಕ್ಟ್ ಮಾಡುತ್ತಾರೆ. ಸೋಮವಾರ ಹಾಕಿದ ಪೋಲ್‌ನಲ್ಲಿ ಸುದೀಪ್ ಯಾವ ರೀತಿಯ ಚಿತ್ರಗಳಲ್ಲಿ ನಟಿಸಬೇಕು ಎಂದು ಕೇಳಿ, ಪೌರಾಣಿಕ, ಥ್ರಿಲ್ಲರ್, ಸಾಮಾಜಿಕ, ಐತಿಹಾಸಿಕ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಅದರಲ್ಲಿ ಸಾಕಷ್ಟು ಜನ ಥ್ರಿಲ್ಲರ್ ಮಾದರಿಯ ಸಿನಿಮಾಗಳಲ್ಲಿ ಸುದೀಪ್ ನಟಿಸಲಿ ಎಂದಿದ್ದಾರೆ.
ಸುದೀಪ್ ಈಗ ಪೈಲ್ವಾನ್, ಕೋಟಿಗೋಬ್ಬ 3, ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕೋಟಿಗೊಬ್ಬ 3 ಅಂತಾರಾಷ್ಟ್ರೀಯ ಕ್ರೈಂ ಕಥಾನಕವನ್ನು ಹೊಂದಿದೆ. ಇದೆಲ್ಲದರ ಜತೆಗೆ ಹಾಲಿವುಡ್‌ನ ಸಿನಿಮಾ, ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಹಿಂದೆ ಸುದೀಪ್ ದರ್ಶನ್ ಒಟ್ಟಿಗೆ ನಟಿಸಲಿ ಎಂಬ ಆಶಯವನ್ನು ಓದುಗರು ವ್ಯಕ್ತಪಡಿಸಿದ್ದರು.
‘ಸುದೀಪ್ ಅವರು ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅದಕ್ಕೆ ಅವರಿಗೆ ನಾವು ಅಭಿನಯ ಚಕ್ರವರ್ತಿ ಎನ್ನುತ್ತೇವೆ. ಜತೆಯಲ್ಲಿ ಥ್ರಿಲ್ಲರ್ ಸಿನಿಮಾಗಳ ಪಾತ್ರ ನೋಡುಗನಿಗೆ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತವೆ. ಹಾಗಾಗಿ ಅಂತಹ ಸಬ್ಜೆಕ್ಟ್‌ಗಳನ್ನು ಅವರಿಂದ ಜಾಸ್ತಿ ನಿರೀಕ್ಷೆ ಮಾಡುತ್ತೇವೆ’ ಎನ್ನುತ್ತಾರೆ ಓದುಗ ಸುನೀಲ್.
ಐತಿಹಾಸಿಕ ಪಾತ್ರಗಳಿಗೆ ಒಲವು
ಸಾಕಷ್ಟು ಓದುಗರು ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿಯೂ ಅವರು ನಟಿಸಲಿ ಎಂದು ಆಸೆ ಪಟ್ಟಿದ್ದಾರೆ. ‘ಸುದೀಪ್ ಅವರ ಹೈಟ್‌ಗೆ ಐತಿಹಾಸಿಕ ಪಾತ್ರಗಳು ಸೂಟ್ ಆಗುತ್ತವೆ ಹಾಗಾಗಿ ಅಂತಹ ಪಾತ್ರಗಳಲ್ಲಿ ನಟಿಸಲಿ ಎಂದು ನಾವು ಆಸೆಪಡುತ್ತೇವೆ’ ಎಂದಿದ್ದಾರೆ ಸುನೀಲ್.
--------------------
ಸುದೀಪ್ ಸರ್ ಯಾವ ರೀತಿಯ ಪಾತ್ರ ನಿರ್ವಹಿಸಿದರೂ ನಾವು ನೋಡುತ್ತೇವೆ. ಆದರೆ ಅತಿ ಹೆಚ್ಚು ಜನ ಥ್ರಿಲ್ಲರ್ ಮಾದರಿಯ ಸಿನಿಮಾವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅಂತಹ ಸಿನಿಮಾಗಳು ಮುಂದಿನ ದಿನದಲ್ಲಿ ಮೂಡಿ ಬರಲಿ.
-ನವೀನ್ ಗೌಡ, ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌