ಆ್ಯಪ್ನಗರ

ಸುದೀಪ್ 'ಪೈಲ್ವಾನ್' ಹಾಡುಗಳ ರಿಲೀಸ್‌ಗೆ ಸಜ್ಜಾದ ಕೋಟೆ ನಾಡು

ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಚಿತ್ರ ಪೈಲ್ವಾನ್ ಆಡಿಯೋ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಇದೇ ಆಗಸ್ಟ್ 9ರಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆಯಾಗಲಿದ್ದು ನಟ ಸುನೀಲ್ ಶೆಟ್ಟಿ ಸಹ ಭಾಗಿಯಾಗಲಿದ್ದಾರೆ.

TIMESOFINDIA.COM 2 Aug 2019, 2:18 pm
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್'. ಚಿತ್ರದ ಪಾತ್ರವರ್ಗದಲ್ಲಿ ಸುನೀಲ್ ಶೆಟ್ಟಿ ಸೇರಿದಂತೆ ಹಲವಾರು ತಾರೆಗಳು ಇರುವುದರಿಂದ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. ಇದೀಗ ಪೈಲ್ವಾನ್ ಹಾಡುಗಳ ಸಂಭ್ರಮ ಶುರುವಾಗಿದ್ದು ಆಗಸ್ಟ್ 9ರಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಅನಾವರಣಗೊಳ್ಳಲಿದೆ.
Vijaya Karnataka Web pailwaan


ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು, "ಆಡಿಯೋ ಲಾಂಚ್‌ನಲ್ಲಿ ಮತ್ತೆಮ್ಮೆ ಪೈಲ್ವಾನ್ ತಂಡದ ಜತೆಗೆ ಬರುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ. ಚಿತ್ರದುರ್ಗದಲ್ಲಿ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ. ಅಷ್ಟೊತ್ತಿಗೆ ಫಿಟ್ ಅಂಡ್ ಫೈನ್ ಆಗಿರುತ್ತೇನೆ ಎಂದುಕೊಂಡಿದ್ದೇನೆ" ಅಂತ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ನಟ ಸುನೀಲ್ ಶೆಟ್ಟಿ ಪ್ರತಿಕ್ರಿಯಿಸಿದ್ದು, "ಸೂಪರ್ ಎಕ್ಸೈಟ್ ಆಗಿದ್ದೇನೆ. ಆಗಸ್ಟ್ 9ರಂದು ನಿಮ್ಮನ್ನೆಲ್ಲಾ ಭೇಟಿಯಾಗುತ್ತೇನೆ" ಎಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ಕಿಚ್ಚ ಸುದೀಪ್ ಅವರಿಗೆ ಈಗ ಬೆನ್ನು ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಡಿಯೋ ಬಿಡುಗಡೆ ವೇಳೆಗೆ ಫಿಟ್ ಆಗಿರುತ್ತೇನೆ ಎಂದಿರುವುದು. [ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಸುದೀಪ್ 'ಪೈಲ್ವಾನ್' ಹೊಸ ಸಾಂಗ್]

ಸುದೀಪ್ ಬೆನ್ನು ನೋವಿಗೆ ಹೈದರಾಬಾದ್‌ನಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಶೂಟಿಂಗ್ ಒತ್ತಡದಿಂದ ಬೆನ್ನು ನೋವು ಕಾಣಿಸಿಕೊಂಡಿದ್ದು, ಹಲವು ದಿನಗಳು ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. [ಕಿಚ್ಚ ಸುದೀಪ್‌ಗೆ ಭಾರೀ ಬೆನ್ನು ನೋವು: ವಿಶ್ರಾಂತಿಗೆ ವೈದ್ಯರ ಸೂಚನೆ]


ಕಳೆದ ಹಲವು ತಿಂಗಳುಗಳಿಂದ ಸುದೀಪ್ ವಿಶ್ರಾಂತಿಯಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರಗಳು ಮಾತ್ರವಲ್ಲದೇ ಬಾಲಿವುಡ್ ಮತ್ತು ತೆಲುಗು ಸಿನಿಮಾರಂಗದಲ್ಲೂ ಸುದೀಪ್ ಸಕ್ರಿಯರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌