ಆ್ಯಪ್ನಗರ

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಸುದೀಪ್ 'ಪೈಲ್ವಾನ್' ಹೊಸ ಸಾಂಗ್

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಎರಡನೇ ಹಾಡು ಬಾರೋ ಪೈಲ್ವಾನ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ.

Vijaya Karnataka Web 30 Jul 2019, 3:30 pm
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ.
Vijaya Karnataka Web pailwaan1


ಕನ್ನಡದಲ್ಲಿ ಬಾರೋ ಪೈಲ್ವಾನ ಎಂಬ ಸಾಹಿತ್ಯ ಇರುವ ಹಾಡನ್ನು ಗಾಯಕರಾದ ವಿಜಯ್ ಪ್ರಕಾಶ್, ಕೈಲಾಶ್ ಖೇರ್ ಹಾಗೂ ಚಂದನ್ ಶೆಟ್ಟಿ ಹಾಕಿದ್ದಾರೆ. ಮಾಸ್ ಆಗಿರುವ ಈ ಹಾಡಿನಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಹ ಹೆಜ್ಜೆ ಹಾಕಿರುವುದು ವಿಶೇಷ. [ಯಾವುದೇ ಹೀರೋಗೆ ನಾನು 'ಪ್ರತಿಸ್ಪರ್ಧಿ' ಅಲ್ಲವೇ ಅಲ್ಲ: ಕಿಚ್ಚ ಸುದೀಪ್]

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಇರುವ ಹಾಡು ಅಭಿಮಾನಿಗಳನ್ನು ರಂಜಿಸುತ್ತಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಮೂರೇ ಗಂಟೆಗಳಲ್ಲಿ ಹಾಡು 3 ಲಕ್ಷಕ್ಕೂ ಅಧಿಕ ಹೆಚ್ಚಿನ ಕ್ಲಿಕ್ಸ್ ಪಡೆದಿದೆ.

ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್ ಮುಂತಾದವರಿದ್ದಾರೆ. "ಹಾಡು ಸೂಪರ್ ಆಗಿದೆ. ಸಿನಿಮಾದ ನಿರೀಕ್ಷೆಯಲ್ಲಿದ್ದೇವೆ. ಚಂದನ್ ಶೆಟ್ಟಿ ಎನರ್ಜಿಟಿಕ್ ವಾಯ್ಸ್ ಈ ಹಾಡಿನ ಹೈಲೈಟ್. ಸೂಪರ್ ಹಾಡು ಹಿನ್ನೆಲೆ ಸಂಗೀತ ಅದ್ಭುತ" ಎಂಬ ಕಾಮೆಂಟ್‌ಗಳು ಹರಿದುಬಂದಿವೆ. [ಸೆಪ್ಟೆಂಬರ್ 12ಕ್ಕೆ ಕಿಚ್ಚ ಸುದೀಪ್ 'ಪೈಲ್ವಾನ್' ರಿಲೀಸ್?]

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌