ಆ್ಯಪ್ನಗರ

'ಪೈಲ್ವಾನ್' ಸಿನಿಮಾವನ್ನೂ ಬಿಡಲಿಲ್ಲ ಕಿರಾತಕರು; ಪರಿಹಾರವೇನು?

'ಪೈಲ್ವಾನ್' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ರಿಲೀಸ್ ಆಗಿ ಇಪ್ಪತ್ನಾಲ್ಕು ಗಂಟೆ ಕಳೆಯುವುದರೊಳಗಡೆ 'ಪೈಲ್ವಾನ್' ಸಿನಿಮಾಕ್ಕೆ ಒಂದು ಶಾಕಿಂಗ್ ಸುದ್ದಿ ಸಿಕ್ಕಿದೆ.

Vijaya Karnataka Web 13 Sep 2019, 9:10 am
'ಪೈಲ್ವಾನ್' ಸಿನಿಮಾದಲ್ಲಿ ಕಿಚ್ಚನನ್ನು ಕುಸ್ತಿಪಟುವಾಗಿ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದುಕುಳಿತಿದ್ದರು. ಅವರ ಕುತೂಹಲಕ್ಕೆ ನಿನ್ನೆ ತೆರೆ ಬಿದ್ದಿತ್ತು. 'ಪೈಲ್ವಾನ್' ಕಥೆ ಹಾಗಿರಲಿದೆ, ಹೀಗಿರಲಿದೆ, 'ಸುಲ್ತಾನ್', 'ದಂಗಲ್' ಚಿತ್ರಗಳಂತೆ ಇರಬಹುದಾ ಎಂಬೆಲ್ಲ ಪ್ರಶ್ನೆಗಳಿಗೆ, ಗೊಂದಲಕ್ಕೆ ಉತ್ತರ ಸಿಕ್ಕಿತ್ತು.
Vijaya Karnataka Web sudeep-pailwaan


'ಪೈಲ್ವಾನ್' ಸಿನಿಮಾ ನೋಡಿ ಕಿಚ್ಚನ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಕಣ್ಣೀರು ಹಾಕಿದ್ದರು. ಜೊತೆಗೆ ಚಿತ್ರಕ್ಕೆ ಸಿಕ್ಕ ಭರ್ಜರಿ ಓಪನಿಂಗ್ಸ್ ನೋಡಿ ಸ್ವತಃ ಸುದೀಪ್, ನಿರ್ಮಾಪಕಿ ಸ್ವಪ್ನಾ ಕೃಷ್ನ, ನಿರ್ದೇಶಕ ಎಸ್.ಕೃಷ್ಣ ಕೂಡ ಖುಷಿಯಿಂದ ಕಣ್ಣೀರು ಹಾಕಿದ್ದರು.
'ಪೈಲ್ವಾನ್' ನೋಡಿ ಕಣ್ಣೀರಿಟ್ಟ ಕಿಚ್ಚನ ಮಗಳು, ಪತ್ನಿ: ಪುತ್ರಿ ಸಾನ್ವಿ ಹೇಳಿದ್ದೇನು?

ಸಿನಿಮಾಕ್ಕೆ ದೊಡ್ಡ ಸಂಕಷ್ಟ ಅಂದರೆ ಪೈರಸಿ. ತಮಿಳ್‌ರಾಕರ್ಸ್, 3movierulz ವೆಬ್‌ಸೈಟ್‌ಗಳಲ್ಲಿ ಚಿತ್ರ ಲೀಕ್ ಆಗಿದೆ. ತಮಿಳು, ತೆಲುಗು ಭಾಷೆಯ ಚಿತ್ರಗಳನ್ನು ಪೈರಸಿ ಮಾಡಲಾಗಿದೆ. ಆದರೆ ಕನ್ನಡ ಭಾಷೆಯ ಚಿತ್ರವನ್ನು ಪೈರಸಿ ಮಾಡಲಾಗಿಲ್ಲ.
ನಿರ್ದೇಶಕ ಎಸ್.ಕೃಷ್ಣ"ಪೈರಸಿ ಆಗಿರುವುದು ನಿಮಗೆ ಕಂಡು ಬಂದರೆ antipiracy@aiplex ಮೇಲ್ ಐಡಿಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದರು. ಹೀಗಿದ್ದರೂ ಕೂಡ 'ಪೈಲ್ವಾನ್' ಪೈರಸಿಯಾಗುವುದು ತಪ್ಪಲಿಲ್ಲ.

ಕಿಚ್ಚನ 'ಪೈಲ್ವಾನ್' ಅವತಾರದ ಬಗ್ಗೆ ಸೆಲೆಬ್ರಿಟಿಗಳು ಹೇಳಿದ್ದೇನು?

ಇದೊಂದೇ ಚಿತ್ರ ಇಲ್ಲ. ಕಿರಾತಕರು ಯಾವ ಸಿನಿಮಾವನ್ನು ಬಿಟ್ಟಿಲ್ಲ. ನಟಸಾರ್ವಭೌಮ, ಯಜಮಾನ, ಕೆಜಿಎಫ್ ಮುಂತಾದ ಸಿನಿಮಾಗಳನ್ನು ಕೂಡ ಪೈರಸಿ ಮಾಡಿದ್ದರು. ಆದರೆ ಇದು ನಿಜಕ್ಕೂ ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡುತ್ತದೆ, ನಿರ್ಮಾಪಕರ ಹಣ, ಕಲಾವಿದರ, ನಿರ್ದೇಶಕರ ಪರಿಶ್ರಮಕ್ಕೆ ಮುಳ್ಳಾಗುತ್ತದೆ. ಆದಷ್ಟು ಬೇಗ ಪೈರಸಿ ಕಾಟ ನಿಲ್ಲಬೇಕು ಎಂಬುದು ಹಲವರ ಅಭಿಪ್ರಾಯ
ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್ ಮುಂತಾದವರು ನಟಿಸಿದ್ದರು. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌