ಆ್ಯಪ್ನಗರ

ಉದ್ಧಟತನ ಬೇಡ: ಕಿಚ್ಚನ ಅಭಿಮಾನಿಗಳ ಎಚ್ಚರಿಕೆ

ಸುದೀಪ್‌ ಚಿತ್ರ ಬ್ಯಾನ್‌ ಮಾಡಿ ಎಂಬ ಟಾಲಿವುಡ್‌ನವರ ಟ್ರೋಲ್‌ ಬಗ್ಗೆ ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಉದ್ಧಟತನ ಮುಂದುವರಿದರೆ ತೆಲುಗು ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್‌ ಮಾಡಲು ಬಿಡುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

Vijaya Karnataka Web 19 Apr 2017, 9:00 am

*ಶರಣು ಹುಲ್ಲೂರು

ಸುದೀಪ್‌ ಚಿತ್ರ ಬ್ಯಾನ್‌ ಮಾಡಿ ಎಂಬ ಟಾಲಿವುಡ್‌ನ ಕೆಲವರ ಹೇಳಿಕೆಗೆ ಕಿಚ್ಚನ ಅಭಿಮಾನಿಗಳು ಮತ್ತು ಕನ್ನಡ ಪರ ಸಂಘಟನೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಧಾರಿ ತಮಿಳು ನಟ ಸತ್ಯರಾಜ್‌ರ ಹೇಳಿಕೆ ವಿವಾದಕ್ಕೂ ಸುದೀಪ್‌ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಸುಖಾಸುಮ್ಮನೆ ತಮ್ಮ ನೆಚ್ಚಿನ ನಟನನ್ನು ಎಳೆತಂದಿದ್ದಕ್ಕೆ ಸುದೀಪ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಖಡಕ್‌ ಸಂದೇಶ ರವಾನಿಸಿದ್ದಾರೆ. ಕನ್ನಡಿಗರ ಬಗ್ಗೆ ಹಗುರವಾಗಿ ಮಾತಾಡಿದರೆ ಮತ್ತು ಕನ್ನಡದ ನಟರ ಬಗ್ಗೆ ಅಣಕ ಮಾಡಿದರೆ, ತೆಲುಗು ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್‌ ಮಾಡಲು ಬಿಡುವುದಿಲ್ಲವೆಂದು ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆಯಲ್ಲಿ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಟ್ರೋಲ್‌ ಟಾಲಿವುಡ್‌ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳು ಸುದೀಪ್‌ ಬಗ್ಗೆ ಅಣಕವಾಡಿದ್ದವು. ಸತ್ಯರಾಜ್‌ ಜತೆ ಸುದೀಪ್‌ ನಟಿಸಿದ್ದರಿಂದ ಸುದೀಪ್‌ ಸಿನಿಮಾಗಳನ್ನೂ ಬ್ಯಾನ್‌ ಮಾಡಿ ಎಂದು ವ್ಯಂಗ್ಯವಾಡಿದ್ದವು. ಈ ಕುರಿತು ಲವಲವಿಕೆಯು ವಿವರವಾದ ಸುದ್ದಿ ಪ್ರಕಟಿಸಿತ್ತು.

ಇದನ್ನು ಓದಿದ ಸೌತ್‌ ಇಂಡಿಯಾ ಕಿಚ್ಚ ಫ್ಯಾನ್ಸ್‌, ಕಿಚ್ಚನ ಹುಡುಗ್ರು, ಬೆಂಗಳೂರು ಕಿಚ್ಚ ಫ್ಯಾನ್ಸ್‌, ಕಿಚ್ಚನ ಅಡ್ಡ ಹೀಗೆ ನೂರಾರು ಫೇಸ್‌ಬುಕ್‌, ಟ್ವಿಟರ್‌ ಖಾತೆಗಳು ಮತ್ತು ಸುದೀಪ್‌ ಅವರ ಅಭಿಮಾನಿಗಳು ಟ್ರೋಲ್‌ ಮಾಡಿದವರ ವಿರುದ್ಧ ಹರಿಹಾಯ್ದಿದ್ದಾರೆ. ಜತೆಗೆ ಸುದೀಪ್‌ ಅವರ ಟ್ವಿಟರ್‌ ಖಾತೆಗೂ ಟ್ಯಾಗ್‌ ಮಾಡಿದ್ದಾರೆ. ಆದರೆ, ಈ ಕುರಿತು ಸುದೀಪ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌