ಆ್ಯಪ್ನಗರ

ಗೋಲ್ಡನ್ ಸ್ಟಾರ್ ಗಣೇಶ್ ಹೋರಾಟಕ್ಕೆ ಬೆಂಬಲ ನೀಡಿದ ಕಿಚ್ಚ ಸುದೀಪ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗೀತಾ' ಚಿತ್ರ ನಾಳೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಹಾಡು, ಟ್ರೇಲರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಈ ಬಗ್ಗೆ ಸುದೀಪ್ ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.

Vijaya Karnataka Web 26 Sep 2019, 12:28 pm
'ಗೀತಾ' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ತುಂಬ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಅವರೇ ಹೇಳಿರುವಂತೆ 'ಗೀತಾ' ಚಿತ್ರ ಅವರ ಮನಸ್ಸಿಗೆ ತುಂಬ ಹತ್ತಿರವಾದ ಚಿತ್ರ. ಹೋರಾಟಗಾರನ ಪಾತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಗಣೇಶ್ ಪ್ರೇಕ್ಷಕರೆದುರಿಗೆ ಬರುತ್ತಿದ್ದಾರೆ.
Vijaya Karnataka Web ganesh geetha


ಗಣೇಶ್ ಮತ್ತು ಕಿಚ್ಚ ಸುದೀಪ್ ಆತ್ಮೀಯರು. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಗಣೇಶ್ ಕೂಡ ಭಾಗಿಯಾಗಿದ್ದರು. ಈಗ ಗೀತಾ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ. "ಟ್ರೇಲರ್ ಮತ್ತು ಕಾನ್ಸೆಪ್ಟ್ ತುಂಬ ಕುತೂಹಲಕಾರಿಯಾಗಿದೆ. 27ರಂದು ಗೀತಾ ಚಿತ್ರ ರಿಲೀಸ್ ಆಗುತ್ತಿದೆ. ಗೀತಾ ತಂಡಕ್ಕೆ ಮತ್ತು ಗಣೇಶ್ ಅವರಿಗೆ ಒಳ್ಳೆಯದಾಗಲಿ, ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಗೋಕಾಕ್‌ ಚಳವಳಿಯಲ್ಲಿ ಅಣ್ಣಾವ್ರು ಮಾಡಿದ ಭಾಣದಿಂದ ಪ್ರೇರೇಪಿತರಾದ ಗಣೇಶ್‌

'ಗೀತಾ' ಗೋಕಾಕ್ ಚಳವಳಿ, ಕನ್ನಡ ಭಾಷೆ, ಸ್ಥಾನಮಾನಕ್ಕೆ ಸಂಬಂಧಪಟ್ಟ ಸಿನಿಮಾ. ಎರಡು ಜನರೇಶನ್‌ನ ಲವ್‌ಸ್ಟೋರಿ ಕೂಡ ಇಲ್ಲಿದೆ. ಕಾಮಿಡಿ, ಎಮೋಶನ್ಸ್, ಲವ್, ಆ್ಯಕ್ಷನ್ಸ್ ಆಧಾರಿತ ಚಿತ್ರ 'ಗೀತಾ'. ಇದೇ ಮೊದಲ ಬಾರಿಗೆ ಗಣೇಶ್ ಅವರನ್ನು ಈ ರೀತಿಯಲ್ಲಿ ಪ್ರೇಕ್ಷಕರು ನೋಡಬಹುದಾಗಿದೆ. 80ರ ದಶಕದ ಶಂಕರನ ಪಾತ್ರವನ್ನು ಗಣಿ ಇಲ್ಲಿ ನಿಭಾಯಿಸಿದ್ದಾರೆ. ಕನ್ನಡ ಪ್ರಥಮ ಭಾಷೆಯಾಗಬೇಕು, ಅದಕ್ಕೆ ಆದ್ಯತೆ ಸಿಗಬೇಕು ಎಂದು ಈಗಾಗಲೇ ಸಾಕಷ್ಟು ಹೋರಾಟಗಳು ಆಗಿವೆ. ಕನ್ನಡಿಗರಿಗೆ ಸೂಕ್ತವಾದ ಸ್ಥಾನಮಾನ ನೀಡಬೇಕು ಎಂಬ ಒತ್ತಾಯ ಕೂಡ ಸಾಕಷ್ಟು ಬಾರಿ ಕೇಳಿ ಬರುತ್ತಿದೆ. ಆದರೆ ನಾವು ಇವತ್ತು ಯಾವ ಸ್ಥಾನದಲ್ಲಿದ್ದೇವೆ ಎನ್ನೋದು ಈ ಚಿತ್ರದ ಸಂದೇಶ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು ಗೋಲ್ಡನ್ ಸ್ಟಾರ್ ಗಣೇಶ್.


ಆ್ಯಂಗ್ರಿ ಯಂಗ್‌ಮ್ಯಾನ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ 'ಗೀತಾ' ಸಿನಿಮಾ ಬಗ್ಗೆ ಬಿಚ್ಚಿಟ್ಟ ಗುಟ್ಟೇನು?

ಶಾನ್ವಿ ಶ್ರೀವಾತ್ಸವ, ಸುಧಾರಾಣಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಣ್ಣಾವ್ರು ಅಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ ಒರಿಜಿನಲ್ ಫೂಟೇಜ್‌ಗಳನ್ನು ಕೂಡ ಈ ಚಿತ್ರದಲ್ಲಿ ಬಳಸಲಾಗಿದೆ. ಒಂದು ಗೋಕಾಕ್‌ ಚಳವಳಿಯ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಚಿತ್ರ ಇದಾಗಿದೆ. ಕನ್ನಡ ಪರವಾಗಿ ಮಾಡಿದ ಚಿತ್ರವಿದು. ಹೀಗಾಗಿ ಈ ಚಿತ್ರವನ್ನು ಜನರು ಮೆಚ್ಚುತ್ತಾರೆ ಎಂಬ ಆಶಯ ಗಣೇಶ್ ಅವರಿಗಿದೆ.

ನನ್ನ ಸಿನಿಮಾ ತಂಟೆಗೆ ಬರಬೇಡಿ, ಚೆನ್ನಾಗಿರಲ್ಲ; ಪರಭಾಷಾ ಸಿನಿಮಾಗಳಿಗೆ ಗೋಲ್ಡನ್ ಹುಡುಗ ಗಣೇಶ್ ವಾರ್ನಿಂಗ್ ಕೊಟ್ಟಿದ್ದೇಕೆ?

ಸ್ಯಾಂಡಲ್‌ವುಡ್‌ನಲ್ಲಿ ಪೈರಸಿ ಕಾಟ ಹೆಚ್ಚುತ್ತಿದೆ. ಈ ಬಗ್ಗೆ ಈ ಮೊದಲೇ 'ಗೀತಾ' ಚಿತ್ರತಂಡ ಕ್ರಮ ಕೈಗೊಂಡಿದೆ. ಈ ಚಿತ್ರಕ್ಕೆ ವಿಜಯ್ ನಾಗೇಂದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂತೋಷ್ ಆನಂದ್‌ರಾಮ್ ಕೂಡ ಈ ಚಿತ್ರದ ಕೆಲವೊಂದು ದೃಶ್ಯಗಳಿಗೆ ಚಿತ್ರಕಥೆ ಬರೆದಿದ್ದಾರೆ. ಶ್ರೀಶ ಛಾಯಾಗ್ರಹಣ ಮಾಡಿದ್ದಾರೆ. ಅನುಪ್ ರೂಬಿನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. 'ಕನ್ನಡಿಗ, ಕನ್ನಡಿಗ' ಹಾಡು ಕನ್ನಡಿಗರ ಮನಸ್ಸು ಗೆದ್ದಾಗಿದೆ. ಆನಂದ್ ಆಡಿಯೋ ಈ ಸಿನಿಮಾದ ಹಾಡುಗಳ ಹಕ್ಕು ಪಡೆದಿದ್ದಾರೆ. ಜಾಕ್ ಮಂಜು ಈ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಡುಗಡೆಯಾದ ಮೂರು ವಾರಗಳ ನಂತರ ವಿದೇಶದಲ್ಲಿ ಗೀತಾ'ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ಇದೆ ಎಂದು ಚಿತ್ರತಂಡ ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌