ಆ್ಯಪ್ನಗರ

ಅವೆಂಜರ್ಸ್‌ಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಸ್ಫೂರ್ತಿ

ಪ್ರಸಕ್ತ ತಮ್ಮ ಅವೆಂಜರ್ಸ್‌-ಎಂಡ್‌ ಗೇಮ್‌ ಸಿನಿಮಾದ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿರುವ ಅವರು, 2015ರಲ್ಲಿ ಬಿಡುಗಡೆಯಾದ ತಮ್ಮ ಈ ಹಿಂದಿನ ಚಿತ್ರಕ್ಕೆ ರಜನಿ-ಐಶ್ವರ್ಯಾ ರೈ ಅಭಿನಯದ ರೊಬೋಟ್‌ ಯಾವ ರೀತಿ ಸ್ಫೂರ್ತಿಯಾಗಿತ್ತು ಎಂದು ವಿವರಿಸಿದ್ದಾರೆ.

Vijaya Karnataka 3 Apr 2019, 8:57 pm
ಏಪ್ರಿಲ್‌ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಬಹು ನಿರೀಕ್ಷೆಯ ಅವೆಂಜರ್ಸ್‌-ಎಂಡ್‌ ಗೇಮ್‌ನ ಹಿಂದಿನ ಅವತರಣಿಕೆ ಅವೆಂಜರ್ಸ್‌-ಏಜ್‌ ಆಫ್‌ ಅಲ್ಟ್ರಾನ್‌ಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ರೊಬೋಟ್‌ ಸಿನಿಮಾವೇ ಸ್ಫೂರ್ತಿಯಂತೆ. ಈ ವಿಷಯವನ್ನು ಅವೆಂಜರ್ಸ್‌ನ ನಿರ್ದೇಶಕರಲ್ಲೊಬ್ಬರದಾ ಜೋ ರುಸೋ ಅವರೇ ಬಹಿರಂಗ ಪಡಿಸಿದ್ದಾರೆ. ಅವೆಂಜರ್ಸ್‌-ಏಜ್‌ ಆಫ್‌ ಅಲ್ಟ್ರಾನ್‌ 2015ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು.
Vijaya Karnataka Web rajinikanth


ಪ್ರಸಕ್ತ ತಮ್ಮ ಅವೆಂಜರ್ಸ್‌-ಎಂಡ್‌ ಗೇಮ್‌ ಸಿನಿಮಾದ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿರುವ ಅವರು, 2015ರಲ್ಲಿ ಬಿಡುಗಡೆಯಾದ ತಮ್ಮ ಈ ಹಿಂದಿನ ಚಿತ್ರಕ್ಕೆ ರಜನಿ-ಐಶ್ವರ್ಯಾ ರೈ ಅಭಿನಯದ ರೊಬೋಟ್‌ ಯಾವ ರೀತಿ ಸ್ಫೂರ್ತಿಯಾಗಿತ್ತು ಎಂದು ವಿವರಿಸಿದ್ದಾರೆ.

'ಅವೆಂಜರ್ಸ್‌-ಏಜ್‌ ಆಫ್‌ ಅಲ್ಟ್ರಾನ್‌ನ ಕ್ಲೈಮ್ಯಾಕ್ಸ್‌ಗೆ ರೊಬೋಟ್‌ ಸಿನಿಮಾ ಬಹುತೇಕ ಸ್ಫೂರ್ತಿಯಾಗಿತ್ತು. ಕೊನೆಯ ದೃಶ್ಯದಲ್ಲಂತೂ ಎಲ್ಲಾ ಆಲ್ಟ್ರಾನ್‌ಗಳು ಹೊಡೆದಾಡುವ ದೃಶ್ಯವಿತ್ತು. ಇದನ್ನು ಎಡಿಟಿಂಗ್‌ ಟೇಬಲ್‌ನಲ್ಲಿ ಕಟ್‌ ಮಾಡಲಾಯಿತು. ಆದರೂ ಆ ದೃಶ್ಯ ರೊಬೋಟ್‌ನಿಂದ ನೇರವಾಗಿ ಪ್ರಭಾವಿತವಾಗಿತ್ತು' ಎಂದು ಹೇಳಿದ್ದಾರೆ.

ಇದೇ ವೇಳೆ, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವ ಕುರಿತಂತೆ ನಟಿ ಪ್ರಿಯಾಂಕ ಚೋಪ್ರಾ ಜತೆ ಮಾತುಕತೆ ನಡೆಸುವ ಇಚ್ಛೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಪಿಗ್ಗಿ ಜತೆ ಕೆಲಸ ಮಾಡುವುದು ನನಗೆ ತುಂಬಾ ಇಷ್ಟ. ಆದರೆ ಈಗಲೇ ಆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಕೇವಲ ಈ ಕುರಿತು ಕೇಳುವ ಪ್ರಶ್ನೆಗೆ ನಗುವಿನ ಮೂಲಕ ಮಾತ್ರ ಉತ್ತರಿಸಲು ಸಾಧ್ಯ ಎಂದು ಹೇಳಿದ್ದಾರೆ.

ಬಾಲಿವುಡ್‌ ಚಿತ್ರಗಳ ಬಗ್ಗೆಯೂ ಹೊಗಳಿಕೆಯ ಸುರಿಮಳೆಯನ್ನುಗೈದಿರುವ ಅವರು, ಸಲ್ಮಾನ್‌ ಖಾನ್‌ ಅಭಿನಯದ ದಬಾಂಗ್‌ ಮತ್ತು ದಬಾಂಗ್‌-2 ಸಿನಿಮಾಗಳನ್ನು ಬಹಳ ಹಿಂದೆಯೇ ವೀಕ್ಷಿಸಿದ್ದೇನೆ. ಈ ಸಿನಿಮಾಗಳಲ್ಲಿ ಕ್ಯಾಮರಾ ವರ್ಕ್‌ ಅತ್ಯದ್ಭುತವಾತ್ತು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌