ಆ್ಯಪ್ನಗರ

ಮದುವೆ ಬಗ್ಗೆ ಮೌನ ಮುರಿದ ಮಿಲ್ಕಿ ಬ್ಯೂಟಿ ತಮನ್ನಾ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ ಬಗ್ಗೆ ಸಾಕಷ್ಟು ಗಾಸಿಪ್‌ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಎಲ್ಲಾ ಅಂತೆಕಂತೆ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

Vijaya Karnataka Web 28 Jul 2018, 2:47 pm
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ ಬಗ್ಗೆ ಸಾಕಷ್ಟು ಗಾಸಿಪ್‌ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಎಲ್ಲಾ ಅಂತೆಕಂತೆ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
Vijaya Karnataka Web tamannaha


"ಒಂದು ದಿನ ನಟ ಎಂದರು, ಇನ್ನೊಂದು ದಿನ ಕ್ರಿಕೆಟರ್ ಹೆಸರು ಕೇಳಿಬಂತು, ಈಗ ಡಾಕ್ಟರ್ ಅಂತಿದ್ದಾರೆ. ಈ ಎಲ್ಲಾ ವದಂತಿಗಳನ್ನು ನೋಡುತ್ತಿದ್ದರೆ ನಾನೇನೋ ಗಂಡನನ್ನು ಶಾಪಿಂಗ್ ಮಾಡುತ್ತಿದ್ದೇನೋ ಎಂಬಂತೆ ಬಿಂಬಿಸಲಾಗುತ್ತಿದೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ತಲೆಬುಡ ಇಲ್ಲದ ಸುದ್ದಿಗಳನ್ನು ನಾನು ಬೆಂಬಲಿಸಲ್ಲ" ಎಂದಿದ್ದಾರೆ.

"ನಮ್ಮ ತಂದೆತಾಯಿ ಏನು ವರಾನ್ವೇಷಣೆಯಲ್ಲಿಲ್ಲ. ಸದ್ಯಕ್ಕೆ ನಾನು ಸಿಂಗಲ್ ಆಗಿಯೇ ಸಂತೋಷವಾಗಿದ್ದೇನೆ. ನನ್ನ ಮದುವೆ ಬಗ್ಗೆ ಸುಳ್ಳು ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ಸಿನಿಮಾಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.


"ಒಬ್ಬರ ಬಗ್ಗೆ ಅಗೌರವಯುತವಾಗಿ ಪೂರ್ವಾಗ್ರಹಣ ಪೀಡಿತರಾಗಿ ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಮದುವೆಯಾಗುವ ದಿನ ನಾನು ಇಡೀ ಜಗತ್ತಿಗೆ ತಿಳಿಸುತ್ತೇನೆ. ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಸದ್ಯಕ್ಕೆ ಮದುವೆಯಾಗುವ ಆಲೋಚನೆ ಇಲ್ಲ. ನನ್ನ ಮದುವೆ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಸುದಿಗಳಿಗೆ ಬೆಲೆ ಕೊಡಬೇಡಿ" ಎಂದಿದ್ದಾರೆ ತಮನ್ನಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌