ಆ್ಯಪ್ನಗರ

#MeToo: ನಾನಾ ಪಾಟೇಕರ್‌ಗೆ ಮಂಪರು ಪರೀಕ್ಷೆ ಮಾಡುವಂತೆ ತನುಶ್ರೀ ಆಗ್ರಹ

ನಾನಾ ಪಾಟೇಕರ್‌ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸತ್ಯ ಹೊರ ಬರಲು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ತನುಶ್ರೀ ಆಗ್ರಹಿಸಿದ್ದಾರೆ.

Vijaya Karnataka Web 14 Oct 2018, 3:52 pm
ಭಾರತದಲ್ಲಿ #MeToo ಅಭಿಯಾನದ ಕಿಚ್ಚು ಹಬ್ಬಿಸಿದ ತನುಶ್ರೀ ದತ್ತಾ ಇದೀಗ ನಟ ನಾನಾ ಪಾಟೇಕರ್‌ ಅವರನ್ನು ನರ್ಕೋ ಅನಾಲಿಸಿಸ್‌ (ಮಂಪರ್‌ ಪರೀಕ್ಷೆ)ಗೆ ಒಳಪಡಿಸಬೇಕೆಂದು ಹೇಳಿದ್ದಾರೆ.
Vijaya Karnataka Web tanushree


10 ವರ್ಷದ ಹಿಂದೆ 'ಹಾರ್ನ್‌ ಓಕೆ ಪ್ಲೀಸ್‌' ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ತನ್ನೊಡನೆ ತಪ್ಪಾಗಿ ನಡೆದುಕೊಂಡರು ಎಂದು ಪೊಲೀಸ್‌ ದೂರು ನೀಡಿದ್ದು, 67 ವರ್ಷ ನಾನಾ ಪಾಟೇಕರ್‌ ಮೇಲೆ ಕಾಯ್ದೆ 354ರ ಅಡಿಯಲ್ಲಿ ದೂರು ದಾಖಲಾಗಿದೆ.

ನಾನಾ ಪಾಟೇಕರ್‌ ಜತೆಗೆ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀರ್‌ ಸಿದ್ದಿಕ್, ನಿರ್ದೇಶಕ ರಾಕೇಶ್ ಸಾರಂಗ್‌ ಮೇಲೆ ಸುಳ್ಳು ಸಾಕ್ಷಿ ಹೇಳಿರುವುದಕ್ಕೆ ಇವರ ಮೇಲೂ ಕೇಸ್‌ ದಾಖಲಿಸಲಾಗಿದೆ.

ತನುಶ್ರೀ ದತ್ತಾ ವಕೀಲರಾದ ನಿತಿನ್‌ ಸಾಟ್ಪುಟೆ 'ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕೀಯ ವ್ಯಕ್ತಿಗಳ ಬೆಂಬಲವೂ ಅವರಿಗಿದೆ. ಅವರ ಪ್ರಭಾವ ಹಾಗೂ ಭಯದ ಕಾರಣದಿಂದ ಮಾರ್ಚ್‌ 26, 2008ರಂದು ನಡೆದ ಘಟನೆಯನ್ನು ಕಣ್ಣಾರೆ ಕಂಡವರು ಕೂಡ ಸಾಕ್ಷಿ ಹೇಳುತ್ತಿಲ್ಲ. ಆರೋಪಿಯನ್ನು ಬಂಧಿಸಿದರೆ ಕೆಲವರು ಸಾಕ್ಷಿ ಹೇಳಲು ಮುಂದೆ ಬರಬಹುದು' ಎಂದಿದ್ದಾರೆ.

ನಾನಾ ಪಾಟೇಕರ್ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿದ್ದಂತೆ ಅವರ ಜತೆ ಕೆಲಸ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದು, ಅವರ ವೃತ್ತಿ ಜೀವನದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌