ಆ್ಯಪ್ನಗರ

ಮಹರ್ಷಿಗೆ 'ಯು/ಎ' ಸರ್ಟಿಫಿಕೆಟ್: ಸಂಭ್ರಮಕ್ಕೆ ಸಜ್ಜಾದ ಮಹೇಶ್ ಬಾಬು!

ರೈತರಾಗಿ ನಟ ಮಹೇಶ್ ಬಾಬು ಕಾರ್ಯಕ್ಷಮತೆ ಮತ್ತು ರೈತರ ಅವಸ್ಥೆಯನ್ನು ತೆರೆಯ ಮೇಲೆ ಪ್ರತಿಬಿಂಬಿಸುವಲ್ಲಿ ನಿರ್ದೇಶಕ ವಂಶಿ ಪೈಡಿಪಲ್ಲಿ ಸಾಕಷ್ಟು ಪ್ರಬುದ್ಧತೆ ತೋರಿಸಿದ್ದಾರೆ ಎನ್ನಲಾಗುತ್ತಿದೆ. ರೈತರ ಸಂಕಷ್ಟದ ಪರಿಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಮಹರ್ಷಿ ಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.

Vijaya Karnataka Web 4 May 2019, 7:13 pm
ಸದ್ಯಕ್ಕೆ ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ 'ಮಹರ್ಷಿ' ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್ 'U/A'ಸರ್ಟಿಫಿಕೇಟ್ ನೀಡಿದೆ. ಈ ಚಿತ್ರದ ಸಮಯ 2 ಗಂಟೆ 55 ನಿಮಿಷಗಳಾಗಿವೆ. ಮಹೇಶ್ ಬಾಬು ರಿಷಿ ಪಾತ್ರದಲ್ಲಿ ಮಿಂಚಲಿದ್ದಾರೆ. ವಿದ್ಯಾರ್ಥಿನಿಯ ದಿನಗಳಿಂದ ರಿಷಿ ಪ್ರಯಾಣವು ಅಮೇರಿಕಾದಲ್ಲಿ ಯಶಸ್ವಿ ವ್ಯವಹಾರ ಜೀವನವನ್ನು ತ್ಯಜಿಸಿ ತನ್ನ ಸ್ವ-ಗ್ರಾಮಕ್ಕೆ ಹಿಂತಿರುಗಿ, ಇಲ್ಲಿ ನಾಯಕ ಮಹತ್ವದ ಕೆಲಸ ಪೂರ್ಣಗೊಳಿಸುವಲ್ಲಿಗೆ ಚಿತ್ರವು ಮುಗಿಯುತ್ತದೆ.
Vijaya Karnataka Web maheshbabu0405


ಈ ಚಿತ್ರದಲ್ಲಿ ಮೂರು ಶೇಡ್ ಗಳಿದ್ದು ಮಹೇಶ್ ಬಾಬು ಅಭಿಮಾನಿಗಳಿಗೆ ಸಿನಿಮಾ ಒಂದು ಮಹಾ ಹಬ್ಬವಾಗಲಿದೆ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ, ವಿದ್ಯಾರ್ಥಿಯಾಗಿ ಮಹೇಶ್ ಪಾತ್ರವು ಬಹಳ ಮನರಂಜನೆ ಮತ್ತು ಆಕರ್ಷಕವಾಗಿದೆ ಎನ್ನಲಾಗಿದೆ. ಈ ವಯಸ್ಸಿನಲ್ಲಿ ಅವರು ವಿದ್ಯಾರ್ಥಿ ಪಾತ್ರವನ್ನು ಮಾಡಿರುವ ರೀತಿ ಮಹರ್ಷಿ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಪಾತ್ರವು ನಿಜವಾಗಿಯೂ 'ಪ್ರಿನ್ಸ್‌' ಅಭಿಮಾನಿಗಳಿಗೆ ಹಬ್ಬವಾಗಿದೆ ಎನ್ನಲಾಗಿದೆ.

ರೈತರಾಗಿ ನಟ ಮಹೇಶ್ ಬಾಬು ಕಾರ್ಯಕ್ಷಮತೆ ಮತ್ತು ರೈತರ ಅವಸ್ಥೆಯನ್ನು ತೆರೆಯ ಮೇಲೆ ಪ್ರತಿಬಿಂಬಿಸುವಲ್ಲಿ ನಿರ್ದೇಶಕ ವಂಶಿ ಪೈಡಿಪಲ್ಲಿ ಸಾಕಷ್ಟು ಪ್ರಬುದ್ಧತೆ ತೋರಿಸಿದ್ದಾರೆ ಎನ್ನಲಾಗುತ್ತಿದೆ. ರೈತರ ಸಂಕಷ್ಟದ ಪರಿಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಮಹರ್ಷಿ ಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ, ಮಹೇಶ್ ಬಾಬು ಮತ್ತು ಪ್ರಕಾಶ್ ರಾಜ್ ನಡುವಿನ ತಂದೆ-ಮಗ ಭಾಂದವ್ಯ ಚೆನ್ನಾಗಿ ಮೂಡಿಬಂದಿದೆ ಎನ್ನಲಾಗಿದೆ.

ರಿಷಿ (ಮಹೇಶ್) ಮತ್ತು ರವಿ (ಅಲ್ಲರಿ ನರೇಶ್) ನಡುವಿನ ಸ್ನೇಹ ಸಂಬಂಧವು ಮಹರ್ಷಿ ಚಿತ್ರದಲ್ಲಿನ ಇನ್ನೊಂದು ಪ್ರಮುಖ ಅಂಶ ಎನ್ನಲಾಗಿದೆ. ಮಹರ್ಷಿಯ ಮೊದಲಾರ್ಧವು ಆಕರ್ಷಕವಾಗಿ ಮತ್ತು ಮನರಂಜನೆಯನ್ನು ಹೊಂದಿದ್ದು, ದ್ವಿತೀಯಾರ್ಧವು ಭಾವನಾತ್ಮಕ ಮತ್ತು ಹೃದಯಕ್ಕೆ ಮುಟ್ಟುಂವಂತಿದೆ ಎಂದು ಹೇಳಲಾಗುತ್ತದೆ. ಹಿನ್ನೆಲೆ ಸಂಗೀತವನ್ನು ದೇವಿ ಶ್ರೀ ಪ್ರಸಾದ್ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌