ಆ್ಯಪ್ನಗರ

ವಿಜಯ್‌ಗೆ ನನ್ನ 'ಮುತ್ತು' ನಾನು ಕೊಟ್ಟಿದ್ದೇನೆ; ನಿಮಗೇನು ಕಷ್ಟ ಎಂದ ರಶ್ಮಿಕಾ

"ಕಿಸ್ಸಿಂಗ್‍ ಸೀನ್‍ನಿಂದ 'ಗೀತ ಗೋವಿಂದಂ' ಹಿಟ್ ಆಯ್ತು ಅಂತಾ 'ಡಿಯರ್ ಕಾಮ್ರೆಡ್' ಚಿತ್ರದಲ್ಲೂ ಮತ್ತೆ 'ಲಿಪ್‍ ಲಾಕ್‍' ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿಗೆ "ನನ್ನ ಮುತ್ತು; ನನ್ನ ಇಷ್ಟ... ಸಿನಿಮಾಗೆ ಆ ದೃಶ್ಯದ ಅವಶ್ಯಕತೆ ಇತ್ತು, ಅದಕ್ಕಾಗಿ ಅಭಿನಯಿಸಿದ್ದೇನೆ" ಎಂದು ನೇರವಾಗಿ ಹೇಳಿದ್ದಾರೆ.

Vijaya Karnataka Web 27 Mar 2019, 6:39 pm
ನಟಿ ರಶ್ಮಿಕಾ ಮಂದಣ್ಣ ಅವರು ನೇರವಾಗಿ ಮಾತನಾಡುತ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಲೇ 'ಕರ್ನಾಟಕ ಕ್ರಶ್' ಎಂಬ ಬಿರುದು ಸಂಪಾದಿಸಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಈಗ 'ಸೌತ್ ಇಂಡಿಯನ್ ಕ್ರಶ್' ಆಗಿ ಬದಲಾಗಿದ್ದಾರೆ. ಇಂಥ ನಟಿ ರಶ್ಮಿಕಾ ಅವರು ತಮ್ಮ ಅಭಿಮಾನಿಯೊಬ್ಬರು ಕಾಲೆಳೆದಿದ್ದಕ್ಕೆ ನೇರವಾಗಿಯೇ ಸತ್ಯವನ್ನು ಹೇಳಿದ್ದಾರೆ.
Vijaya Karnataka Web rashmika2703


ಕಳೆದ ವರ್ಷ ತೆಲುಗಿನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿದ್ದ 'ಗೀತ ಗೋವಿಂದಂ' ಚಿತ್ರದ ನಂತರ, ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ 'ಡಿಯರ್ ಕಾಮ್ರೇಡ್' ಎಂಬ ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಆ ಟ್ರೈಲರ್‌ನಲ್ಲಿ ವಿಜಯ್ ಜೊತೆ ರಶ್ಮಿಕಾ ಮತ್ತೆ ಲಿಪ್‍ ಲಾಕ್ ಮಾಡಿರುವ ಸೀನ್‍ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

"ಕಿಸ್ಸಿಂಗ್‍ ಸೀನ್‍ನಿಂದ 'ಗೀತ ಗೋವಿಂದಂ' ಹಿಟ್ ಆಯ್ತು ಅಂತಾ 'ಡಿಯರ್ ಕಾಮ್ರೆಡ್' ಚಿತ್ರದಲ್ಲೂ ಮತ್ತೆ 'ಲಿಪ್‍ ಲಾಕ್‍' ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿಗೆ "ನನ್ನ ಮುತ್ತು ...ನನ್ನ ಇಷ್ಟ...ಸಿನಿಮಾಗೆ ಆ ದೃಶ್ಯದ ಅವಶ್ಯಕತೆ ಇತ್ತು, ಅದಕ್ಕಾಗಿ ಅಭಿನಯಿಸಿದ್ದೇನೆ" ಎಂದು ನೇರವಾಗಿ ಹೇಳಿದ್ದಾರೆ. ಆ ಮೂಲಕ ತಮ್ಮ ವೃತ್ತಿಗೆ ಅಗತ್ಯವಿರುವುದನ್ನು ಮಾಡಲು ತಾನು ಸ್ವತಂತ್ರ ಎಂಬ ಮೆಸೇಜ್ ಕೊಟ್ಟಿದ್ದಾರೆ ನಟಿ ರಶ್ಮಿಕಾ. ಅವರ ಈ ಜಾಣತನ ಹಾಗೂ ನೇರವಂತಿಕೆಯ ಉತ್ತರವನ್ನು ಹಲವರು ಮೆಚ್ಚಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ, ಸೌತ್ ಇಂಡಿಯನ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಕುಳಿತರೂ, ನಿಂತರೂ, ಮಾತನಾಡಿದರೂ ಎಲ್ಲಾ ಕಡೆ ಸುದ್ದಿ ಹರಡುತ್ತದೆ. ಆದರೆ, ರಶ್ಮಿಕಾ ಮಾತ್ರ ಸೌತ್ ಇಂಡಿಯಾದ ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡುವುದರಲ್ಲಿ ನಿರತರಾಗಿದ್ದಾರೆ. ಆದರೆ, ತಮ್ಮ ಕಾಲೆಳೆದ ಯಾರಿಗಾದರೂ ರಶ್ಮಿಕಾ 'ಬಿಸಿ' ಮುಟ್ಟಿಸದೇ ಬಿಡುವುದಿಲ್ಲ.

ಅಂದಹಾಗೆ, ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿಯ 'ಡಿಯರ್ ಕಾಮ್ರೆಡ್' ಚಿತ್ರೀಕರಣ ಇತ್ತೀಚಿಗಷ್ಟೇ ಮುಗಿದಿದೆ, ಕನ್ನಡದಲ್ಲಿ ಧ್ರುವ ಸರ್ಜಾ ನಾಯಕತ್ವದ 'ಪೊಗರು' ಚಿತ್ರದಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾ, ತಮಿಳಿನಲ್ಲಿ ಕಾರ್ತಿ ಜೊತೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌