ಆ್ಯಪ್ನಗರ

ಭರ್ಜರಿ ಮೊತ್ತಕ್ಕೆ ಸೇಲ್‌ ಆದ 'ದಿ ವಿಲನ್‌' ರೈಟ್ಸ್

ಶಿವರಾಜ್‌ಕುಮಾರ್‌, ಸುದೀಪ್‌ ನಟನೆಯ ದಿ ವಿಲನ್‌ ಸಿನಿಮಾದ ವಿತರಣಾ ಹಕ್ಕು 50 ಕೋಟಿ ರೂಪಾಯಿಗೆ ಸೇಲ್‌ ಆಗಿದ ಎಂಬ ಸುದ್ದಿ ವಿಲನ್‌ ಖಾಂದನ್‌ನಿಂದ ಹೊರ ಬಿದ್ದಿದೆ.

Vijaya Karnataka 21 Sep 2018, 9:55 am
ಶಿವರಾಜ್‌ಕುಮಾರ್‌, ಸುದೀಪ್‌ ನಟನೆಯ ದಿ ವಿಲನ್‌ ಸಿನಿಮಾದ ವಿತರಣಾ ಹಕ್ಕು 50 ಕೋಟಿ ರೂಪಾಯಿಗೆ ಸೇಲ್‌ ಆಗಿದ ಎಂಬ ಸುದ್ದಿ ವಿಲನ್‌ ಖಾಂದನ್‌ನಿಂದ ಹೊರ ಬಿದ್ದಿದೆ. ಚಿತ್ರರಂಗದ ಇತಿಹಾಸದಲ್ಲಿ ಬಿಡುಗಡೆಗೂ ಮುನ್ನವೇ ಯಾವ ಸಿನಿಮಾನೂ ಇಷ್ಟೊಂದು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿಲ್ಲ, ಇದು ಸ್ಯಾಂಡಲ್‌ವುಡ್‌ ಮಟ್ಟಕ್ಕೆ ದೊಡ್ಡ ದಾಖಲೆಯೇ ಸರಿ.
Vijaya Karnataka Web the-villain


ಮೂಲಗಳ ಪ್ರಕಾರ ಈಗಾಗ್ಲೇ ದಿ ವಿಲನ್‌ ಸಿನಿಮಾದ ವಿತರಣೆಯ ಹಕ್ಕು ಸೋಲ್ಡೌಟ್‌ ಆಗಿದ್ದು, ಎಲ್ಲಾ ಏರಿಯಾದ ವಿತರಣೆಯ ಹಕ್ಕು ದಾಖಲೆಯ ಬೆಲೆಗೆ ಮಾರಾಟವಾಗಿದೆ. ಚಿತ್ರತಂಡದ ಮೂಲಗಳು ಹೇಳೋ ಪ್ರಕಾರ ದಿ ವಿಲನ್‌ ಚಿತ್ರದ ವಿತರಣೆಯ ಹಕ್ಕು, ಸ್ಯಾಟಲೈಟ್‌ ರೈಟ್ಸ್, ಡಿಜಿಟಲ್‌ ರೈಟ್ಸ್, ಡಬ್ಬಿಂಗ್‌ ರೈಟ್ಸ್‌, ಆಡಿಯೋ, ವೀಡಿಯೋ ರೈಟ್ಸ್‌ ಎಲ್ಲವೂ ಸೇರಿ 50 ಕೋಟಿ ಗಡಿ ದಾಟಿದೆಯಂತೆ. ಒಟ್ಟಿನಲ್ಲಿ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮೊತ್ತದ ಬಿಝಿನೆಸ್‌ ಮಾಡಿರುವುದು, ಇಂಡಸ್ಟ್ರಿ ಮಟ್ಟಕ್ಕೆ ಒಳ್ಳೆಯ ಬೆಳವಣಿಗೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌