ಆ್ಯಪ್ನಗರ

#MeToo ನಟಿಯರು ಗಾಂಜಾ ಸೇದುತ್ತಾರೆ: ಹರ್ಷಿಕಾ ಪೂಣಚ್ಚ

ಒಟ್ಟಾರೆ #MeToo ಆರೋಪ ಮಾಡಿರುವ ನಟಿಯರ ವಿರುದ್ಧ ಹರ್ಷಿಕಾ ಪೂಣಚ್ಚ ಹೊಸ ಬಾಂಬ್ ಸಿಡಿಸಿದ್ದಾರೆ. ಆದರೆ ಅವರು ಯಾರೊಬ್ಬ ನಟಿಯ ಹೆಸರು ಹೇಳದೆ ಈ ರೀತಿ ಆರೋಪ ಮಾಡಿರುವುದು ಇನ್ನೊಂದಿಷ್ಟು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

Vijaya Karnataka Web 23 Oct 2018, 4:28 pm
ಸದ್ಯಕ್ಕೆ ಸ್ಯಾಂಡಲ್‍ವುಡ್‌ನಲ್ಲಿ #MeToo ಆರೋಪಗಳ ಸುರಿಮಳೆಯಾಗುತ್ತಿದೆ. ಈ ಬಗ್ಗೆ ಚರ್ಚೆ, ವಾದ ವಿವಾದವೂ ಕಾವೇರಿದೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಸಹ ಅರ್ಜುನ್ ಸರ್ಜಾ ಪರ ತಮ್ಮ ವಾದ ಮಂಡಿಸಿದ್ದಾರೆ.
Vijaya Karnataka Web harshika-poonacha


ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪತ್ರವನ್ನೂ ಬರೆದಿದ್ದಾರೆ ಹರ್ಷಿಕಾ. "ಇತ್ತೀಚೆಗೆ ಆರಂಭವಾದ #MeToo ಅಭಿಯಾನದ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ನಾನೂ ದಿಟ್ಟ ಮಹಿಳೆಯಾಗಿದ್ದು ಚಿತ್ರರಂಗವನ್ನು ತುಂಬ ಹತ್ತಿರದಿಂದ ಕಂಡಿದ್ದೇನೆ. ಮಹಿಳೆಯರನ್ನು ಅಗೌರವವಾಗಿ ನೋಡುವ, ಅವರನ್ನು ವೈಯಕ್ತಿಕವಾಗಿ ಹೀಗಳೆಯುವ, ಅವರ ಮನಸ್ಸಿಗೆ ಇಷ್ಟವಾಗದಿದ್ದರೂ ಇದನ್ನು ಮಾಡು ಎಂದು ಒತ್ತಡ ಹೇರುವುದನ್ನು ನಾನು ಸಹಿಸಲ್ಲ. ಆದರೆ ಕೆಲವು ನಟಿಯರು ಈ ಅಭಿಯಾನವನ್ನು ತಮ್ಮ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಪಬ್ಲಿಸಿಟಿ ಒಳ್ಳೆಯದೇ ಆದರೆ ಈ ರೀತಿ ಒಬ್ಬ ವ್ಯಕ್ತಿಯ ಸಂಸಾರ ಮುರಿಯುವ ಮಟ್ಟಕ್ಕಾ? ಅವರ ಪತ್ನಿ ಮತ್ತು ಮಕ್ಕಳಿಗೆ ಅವಮಾನವಾಗುವಷ್ಟೇ? ಅವರ ವೃತ್ತಿಬದುಕನ್ನು ನಾಮಾವಶೇಷ ಮಾಡುವಷ್ಟೇ?" ಎಂದಿದ್ದಾರೆ.

ಸುಮಾರು 15-20 ವರ್ಷಗಳಿಂದ ಹೆಣಗಾಡಿ ಕಟ್ಟಿಕೊಂಡ ವೃತ್ತಿಬದುಕನ್ನು ಒಂದೇ ಒಂದು ಹೇಳಿಕೆಯಿಂದ ಹಾಳುಗೆಡವ ಪ್ರಯತ್ನ ಮಾಡುವುದು ಸರಿಯಲ್ಲ. ಈ ರೀತಿಯ ಹೋರಾಟಗಾರ್ತಿ ನಟಿಯರು ಆರಂಭದ ಹಂತದಲ್ಲಿ ತಮಗೆ ಬೇಕಾದದ್ದನ್ನೆಲ್ಲಾ ಪಡೆದಿದ್ದಾರೆ (ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ, ಹಣ ಮಾಡಿದ್ದಾರೆ, ನೆಟ್‍ವರ್ಕ್, ಪ್ರವಾಸ, ಐಶಾರಾಮಿ ಜೀವನ) ಹೀಗೆ ಎಲ್ಲ ಸ್ವಾತಂತ್ರ್ಯವನ್ನೂ ಪುರುಷರಿಂದಲೇ ಪಡೆದಿದ್ದಾರೆ. ಕೈಕೈ ಹಿಡಿದು ಓಡಾಡಿದ್ದಾರೆ. ಈಗ ಪ್ರಚಾರಕ್ಕಾಗಿ ಈ ರೀತಿಯ ಆರೋಪ ಮಾಡುವುದು ಎಷ್ಟು ಸರಿ ಎಂದಿದ್ದಾರೆ ಹರ್ಷಿಕಾ.

ಈ ರೀತಿಯ ಹೋರಾಟಗಾರ್ತಿ ನಟಿಯರನ್ನು ನಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಇವರೆಲ್ಲಾ ಗಾಂಜಾ ಸೇದುತ್ತಾರೆ, ವಿದೇಶಗಳಲ್ಲಿ ಹಾಡುಗಳ ಚಿತ್ರೀಕರಣದ ವೇಳೆ ಎಂಜಾಯ್ ಮಾಡುತ್ತಾರೆ, ಖ್ಯಾತನಾಮರ ತೆಕ್ಕೆಗೆ ಬೀಳುತ್ತಾರೆ (ಮಲೇಷ್ಯಾ, ದುಬೈ, ಸಿಂಗಪೂರ ಮುಂತಾದ ಕಡೆ ನಡೆಯುವ ಬಿಗ್ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಬೇರೆ ಚಿತ್ರರಂಗದ ನಟರು, ನಿರ್ಮಾಪಕರು, ರಿಯಲ್ ಎಸ್ಟೇಟ್ ಕುಳಗಳನ್ನು ಬಳಸಿಕೊಳ್ಳುತ್ತಾರೆ). ಇನ್ನೂ ಏನೇನೋ ಮಾಡುತ್ತಾರೆ, ಅದೆಲ್ಲವನ್ನೂ ಇಲ್ಲಿ ಹೇಳಲು ಇಷ್ಟವಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.


ಒಂದು ವೇಳೆ ನಿಮಗೆ ಧೈರ್ಯವಿದ್ದರೆ ಪ್ರತಿ ಚಿತ್ರೋದ್ಯಮದಲ್ಲಿರುವ ನಂಬರ್ ಒನ್ ತಾರೆಗಳ ಹೆಸರು ಹೇಳಿ ನೋಡೋಣ? ಪ್ರತಿ ಚಿತ್ರೋದ್ಯದಲ್ಲಿರುವ ಸೂಪರ್ ಸ್ಟಾರ್ ನಟಿಯರು ಯಾಕೆ ಇದುವರೆಗೆ #MeToo ಆರೋಪ ಮಾಡಿಲ್ಲ? ನನ್ನ ಹಿತೈಷಿ ಹಾಗೂ ಖ್ಯಾತ ನಿರ್ಮಾಪಕರೊಬ್ಬರು ವೀಡಿಯೋವನ್ನು ತೋರಿಸಿದರು. ಮಿ ಟೂ ನಟಿಯರು ಗಾಂಜಾ ಸೇದಿ ಹೇಗೆಲ್ಲಾ ಖ್ಯಾತ ನಾಯಮರ ತೆಕ್ಕೆಯಲ್ಲಿ ಹೊರಳಾಡುತ್ತಿದ್ದಾರೆ ಎಂಬುದನ್ನು ತೋರಿಸಿದರು. ಇನ್ನೊಂದು ವೀಡಿಯೋದಲ್ಲಿ ಖ್ಯಾತ ನಟನ ಕಾರಿನಲ್ಲಿ ಅರೆನಗ್ನವಾಗಿ ಇರುವ ಈ ನಟಿ "ಮುಂದಿನ ಚಿತ್ರದಲ್ಲೂ ನಾನೇ ಇರುತ್ತೀನಿ ಅಲ್ವಾ?" ಎಂದು ನಗುತ್ತಾ ಮಾತನಾಡುವ ದೃಶ್ಯ ಇದೆ ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ #MeToo ಆರೋಪ ಮಾಡಿರುವ ನಟಿಯರ ವಿರುದ್ಧ ಹರ್ಷಿಕಾ ಪೂಣಚ್ಚ ಹೊಸ ಬಾಂಬ್ ಸಿಡಿಸಿದ್ದಾರೆ. ಆದರೆ ಅವರು ಯಾರೊಬ್ಬ ನಟಿಯ ಹೆಸರು ಹೇಳದೆ ಈ ರೀತಿ ಆರೋಪ ಮಾಡಿರುವುದು ಇನ್ನೊಂದಿಷ್ಟು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌