ಆ್ಯಪ್ನಗರ

ಮೂರು ವಿಭಿನ್ನ ವ್ಯಕ್ತಿತ್ವದ ಕಥೆಯ ಲೈಫ್ ಜತೆ ಸೆಲ್ಫಿ

ದಿನಕರ್‌ ತೂಗುದೀಪ ನಿರ್ದೇಶನದ 'ಲೈಫ್‌ ಜತೆ ಒಂದ್‌ ಸೆಲ್ಫಿ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಹೊಸ ಬಗೆಯ ಈ ಚಿತ್ರದಲ್ಲಿ ಅನೇಕ ರೋಚಕ ಸಂಗತಿಗಳಿವೆ ಎಂದು ಅಧಿವರು ತಿಧಿಳಿಧಿಸಿಧಿದ್ದಾರೆ.

Vijaya Karnataka 24 Aug 2018, 11:59 am
* ಶರಣು ಹುಲ್ಲೂರು
Vijaya Karnataka Web selfie


ಹರಿಪ್ರಿಯಾ, ನೆನಪಿರಲಿ ಪ್ರೇಮ್‌ ಮತ್ತು ಪ್ರಜ್ವಲ್‌ ದೇವರಾಜ್‌ ನಟನೆಯ 'ಲೈಫ್‌ ಜತೆ ಒಂದ್‌ ಸೆಲ್ಫಿ' ಚಿತ್ರದಲ್ಲಿ ಮಾನವೀಯ ಮೌಲ್ಯಗಳನ್ನು ಹೇಳಿದ್ದೇನೆಂದು ನಿರ್ದೇಶಕ ದಿನಕರ್‌ ತೂಗುದೀಪ ತಿಳಿಸಿದ್ದಾರೆ.

ಹದಿಹರೆಯದ ತಲ್ಲಣಗಳ ಜತೆಗೆ ಮೂವರು ವಿಭಿನ್ನ ವ್ಯಕ್ತಿತ್ವದ ಯುವಕ ಯುವತಿಯರ ಮನಸ್ಥಿತಿಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇನೆ. ಹೀಗಾಗಿ ಈ ಸಿನಿಮಾ ಎಲ್ಲ ವಯೋಮಾನದ ನೋಡುಗರಿಗೂ ಇಷ್ಟವಾಗಲಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಯಾಕೆ ಇಷ್ಟವಾಗಲಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ ಎಂದು ಹೇಳಿದ್ದಾರೆ.

'ಈ ಚಿತ್ರದಲ್ಲಿ ಹೊಸ ಬಗೆಯ ಕಥೆಯನ್ನು ಕಲರ್‌ಫುಲ್‌ ಆಗಿ ಹೇಳುವ ಪ್ರಯತ್ನ ಮಾಡಲಾಗಿದೆ. ತನ್ನಿಷ್ಟದಂತೆ ಬದುಕಬೇಕು ಎನ್ನುವ ಹುಡುಗಿ, ದುಡ್ಡಿದ್ದೂ ನೆಮ್ಮದಿಯ ಹುಡುಕುವ ಯುವಕ ಮತ್ತು ಎಂಜಿನಿಯರಿಂಗ್‌ ಓದಿದ್ದರೂ ನಿರ್ದೇಶಕನಾಗಬೇಕು ಎಂಬ ತುಡಿತದ ಮತ್ತೋರ್ವ ಯುವಕನ ಕಥೆಯೇ ಈ ಸಿನಿಮಾ. ಈ ಮೂವರು ಗೋವಾದಲ್ಲಿ ಸಿಗುತ್ತಾರೆ. ತಮ್ಮ ಬದುಕನ್ನು ಚರ್ಚಿಸುತ್ತಾರೆ. ಅವರಿಗೆ ವಾಸ್ತವ ಅರಿವಾಗುತ್ತದೆ. ಈ ಎಳೆಯಲ್ಲಿ ಇನ್ನೂ ರೋಚಕ ವಿಷಯಗಳಿವೆ. ಅವುಗಳನ್ನು ಸಿನಿಮಾದಲ್ಲಿಯೇ ನೋಡಿ' ಅಂತಾರೆ ನಿರ್ದೇಶಕರು.

ಈಗಾಗಲೇ ಚಿತ್ರದ ಹಾಡುಗಳು ಹಿಟ್‌ ಆಗಿವೆ. ಟ್ರೇಲರ್‌ ಅನ್ನು ಇಷ್ಟಪಟ್ಟಿದ್ದಾರೆ. ಸಿನಿಮಾದ ಒಂದಿಲ್ಲೊಂದು ಅಂಶ ಪ್ರತಿ ಪ್ರೇಕ್ಷಕನಿಗೂ ಕನೆಕ್ಟ್ ಆಗುವುದರಿಂದ ಬೇಗ ನೋಡುಗನಿಗೆ ಕಥೆ ಆಪ್ತವಾಗುತ್ತದೆ ಎನ್ನುವುದು ಚಿತ್ರತಂಡದ ಮಾತು.

ವಿರಾಟ್‌ ಸಾಯಿ ಕ್ರಿಯೇಷನ್‌ ಲಾಂಛನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಸಮೃದ್ ಮಂಜುನಾಥ್‌ ನಿರ್ಮಾಪಕರು. ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ.

ಒಂದೊಳ್ಳೆ ಕಥೆಗಾಗಿ ಹುಡುಕುತ್ತಿದ್ದಾಗ ಲೈಫ್‌ ಜತೆ ಒಂದ್‌ ಸೆಲ್ಫಿ ಸಿಕ್ಕಿತು. ಇಂಥದ್ದೊಂದು ಸಿನಿಮಾ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ತಾಯಿ ಮತ್ತು ಮಗನ ಸೆಂಟಿಮೆಂಟ್‌ ಜತೆ ಯುವಕರು ಇಷ್ಟಪಡುವ ಎಲ್ಲ ಅಂಶಗಳು ಸಿನಿಮಾದಲ್ಲಿವೆ.
ಸಮೃದ್ ಮಂಜುನಾಥ್‌, ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌