ಆ್ಯಪ್ನಗರ

ಮಹೇಶ್ ಬಾಬು ಚಿತ್ರದಿಂದ ಜಗಪತಿ ಬಾಬು ಔಟ್: ಕಾರಣವೇನು?

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕತ್ವದಲ್ಲಿ ಶೂಟಿಂಗ್‌ ನಡೆಸಲಾಗುತ್ತಿರುವ 'ಸರಿಲೇರು ನೀಕೆವ್ವರು' ಚಿತ್ರದಿಂದ ಬಹುಭಾಷಾ ನಟ ಜಗಪತಿ ಬಾಬು ಹೊರಹೋಗಿದ್ದು ಆ ಜಾಗಕ್ಕೆ ಪ್ರಕಾಶ್ ರಾಜ್ ಆಗಮನವಾಗಲಿದೆ ಎನ್ನಲಾಗುತ್ತಿದೆ. ಅನಿಲ್ ರಾವಿಪುಡಿ ನಿರ್ದೇಶನದ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಈ ಚಿತ್ರವು ಸದ್ಯಕ್ಕೆ ಈ ಬದಲಾವಣೆ ಸುದ್ದಿ ಮೂಲಕ ಭಾರೀ ಸೌಂಡ್ ಮಾಡತೊಡಗಿದೆ.

Vijaya Karnataka Web 20 Jul 2019, 12:25 pm
ಟಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅದು ಹಲವರನ್ನು ಅಚ್ಚರಿಗೆ ದೂಡಿದೆ. ಟಾಲಿವುಡ್‌ನ ಸ್ಟಾರ್ ನಟ, ಹಿಂದೊಂದು ಕಾಲದ ನಾಯಕನಟ ಜಗಪತಿ ಬಾಬು 'ಸರಿಲೇರು ನೀಕೆವ್ವರು' ಚಿತ್ರದಿಂದ ಹೊರನಡೆದಿದ್ದಾರೆ. ಈ ಚಿತ್ರವು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕತ್ವದ ಚಿತ್ರವಾಗಿದೆ. ಅನಿಲ್ ರಾವಿಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸ್ಟಾರ್ ನಾಯಕಿ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ.
Vijaya Karnataka Web jagapati-babu2007


ಬಹಳಷ್ಟು ಜನರಿಗೆ ಗೊತ್ತಿರುವಂತೆ, ನಟ ಜಗಪತಿ ಬಾಬು ಬಹುಮುಖ ಪ್ರತಿಭೆ ಹಾಗೂ ಸದ್ಯ ಸಿನಿಮಾ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾಯ್ದುಕೊಂಡಿರುವ ನಟ. ಅವರ ಕೈಯಲ್ಲಿ ಬಹಳಷ್ಟು ಚಿತ್ರಗಳು ಸಹ ಇವೆ. ಆದರೆ 'ಎಫ್ 2' ಖ್ಯಾತಿಯ ನಿರ್ದೇಶಕ ಅನಿಲ್ ರಾವಿಪುಡಿ ಅವರ ನಿರ್ದೇಶನದ 'ಸರಿಲೇರು ನೀಕೆವ್ವರು' ಚಿತ್ರದಿಂದ ಅವರು ಹೊರನಡೆದಿದ್ದಾರೆ ಎಂಬ ಸಂಗತಿ ಬಹಳಷ್ಟು ಜನರಿಗೆ ಶಾಕ್ ಕೊಟ್ಟಿದೆ. ಜಗಪತಿ ಬಾಬು ಆ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿದ್ದರು. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಸರಿಲೇರು ನೀಕೆವ್ವರು' ಚಿತ್ರದಲ್ಲಿ ವಿಜಯಶಾಂತಿ, ಜಗಪತಿ ಬಾಬು ಮತ್ತು ರಾಜೇಂದ್ರ ಪ್ರಸಾದ್ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ಆದರೆ ಸಿಕ್ಕ ಮಾಹಿತಿ ಪ್ರಕಾರ, ಕೆಲವು ಕಾರಣಗಳಿಂದ ನಟ ಜಗಪತಿ ಬಾಬು ಈ ಪ್ರಾಜೆಕ್ಟ್ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಜಗಪತಿ ಬಾಬು ಅವರ ಸ್ಥಾನಕ್ಕೆ ಚಿತ್ರತಂಡವು ನಟ ಪ್ರಕಾಶ್ ರಾಜ್ ಅವರನ್ನು ಕರೆತರುವ ಪ್ಲಾನ್ ಮಾಡಿದ್ದು, ಸದ್ಯವೇ ಈ ಸುದ್ದಿ ಅಧಿಕೃತವಾಗಲಿದೆ ಎನ್ನಲಾಗಿದೆ. ಮಹೇಶ್ ಬಾಬು ಈ ಚಿತ್ರದಲ್ಲಿ ಭಾರತೀಯ ಸೇನೆಯ ಮೇಜರ್ ಅಜಯ್ ಕೃಷ್ಣ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಿಲ್ ರಾಜು ಮತ್ತು ಅನಿಲ್ ಸುಂಕರಾ 'ಸರಿಲೇರು ನೀಕೆವ್ವರು' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಜಗಪತಿ ಬಾಬು ಜಾಗಕ್ಕೆ ಪ್ರಕಾಶ್ ರಾಜ್ ಬರಲಿರುವುದು, ಈಗಾಗಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಜಗಪತಿ ಬಾಬು ಚಿತ್ರದಿಂದಲೇ ಔಟ್ ಆಗಿರುವುದು ಎಲ್ಲವೂ 'ಗಪ್ ಚುಪ್' ಎಂಬಂತೆ ನಡೆಯುತ್ತಿದೆ. ಯಾರೂ ಯಾವುದನ್ನೂ ಬಾಯಿ ಬಿಡುತ್ತಿಲ್ಲ. ಯಾಕೆ ಈ ಬದಲಾವಣೆ ಎಂಬುದನ್ನು ಚಿತ್ರತಂಡವು ಎಲ್ಲೂ ಬಹಿರಂಗಗೊಳಿಸಿಲ್ಲ. ಒಟ್ಟಿನಲ್ಲಿ, ಮಹೇಶ್ ಬಾಬು ಚಿತ್ರದಲ್ಲಿ ಜಗಪತಿ ಬಾಬು ನೋಡುವ ಬದಲು ಪ್ರಕಾಶ್ ರಾಜ್ ಅವರನ್ನು ನೋಡಬೇಕಿದೆ ಎಂಬುದು ಸದ್ಯಕ್ಕೆ ಸಿಕ್ಕ ಮಾಹಿತಿ! ಎಲ್ಲವೂ ಓಕೆ, ಆದರೆ, ಜಗಪತಿ ಬಾಬು ಔಟ್ ಆಗಿದ್ದೇಕೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಹಲವರನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌