ಆ್ಯಪ್ನಗರ

ಟಾಲಿವುಡ್ ಖ್ಯಾತ ನಿರ್ದೇಶಕ ವಿಜಯ ಬಾಪಿನೀಡು ನಿಧನ

ಮೆಗಾ ಸ್ಟಾರ್ ಚಿರಂಜೀವಿ ಅವರ ಜತೆಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಬಾಪಿನೀಡು ಅವರಿಗೆ ಸಲ್ಲುತ್ತದೆ. ಶೋಭನ್ ಬಾಬು, ಕೃಷ್ಣ, ಮೋಹನ್ ಬಾಬು ಅವರಂತಹ ಹಿರಿಯ ಕಲಾವಿದರ ಜತೆಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ 22 ಸಿನಿಮಾಗಳನ್ನು ನೀಡಿದ್ದಾರೆ. ಅದೇ ರೀತಿ ಗೆಳೆಯರ ಜತೆಗೆ ಕೈಜೋಡಿಸಿ 12 ಚಿತ್ರಗಳನ್ನು ನಿರ್ಮಿಸಿದ್ದಾರೆ.

Samayam Telugu 12 Feb 2019, 11:50 am
ಟಾಲಿವುಡ್‌ನ ಹೆಸರಾಂತ ನಿರ್ದೇಶಕ, ನಿರ್ಮಾಪಕ ವಿಜಯ ಬಾಪಿನೀಡು ಕಣ್ಮುಚ್ಚಿದ್ದಾರೆ. ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
Vijaya Karnataka Web vijaya


ವಿಜಯ ಬಾಪಿನೀಡು ನಿಜವಾದ ನಾಮಧೇಯ ಗುತ್ತಾ ಬಾಪಿನೀಡು ಚೌದರಿ. 1936 ಸೆಪ್ಟೆಂಬರ್ 22ರಂದು ಪಶ್ಚಿಮ ಗೋದಾವರಿ ಜಿಲ್ಲೆ ಏಲೂರು ಗ್ರಾಮ ಪಂಚಾಯಿತಿಯ ಚಾಟಪರ್ರು ಎಂಬ ಹಳ್ಳಿಯಲ್ಲಿ ಜನಿಸಿದರು. ಏಲೂರಿನ ಸಿಆರ್‌ಆರ್ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದ ಅವರು ಕೆಲ ಕಾಲ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.

ಬಳಿಕ ಚೆನ್ನೈನಲ್ಲಿ ಬೊಮ್ಮರಿಲ್ಲು, ವಿಜಯ ಎಂಬ ನಿಯತಕಾಲಿಕೆಗಳನ್ನು ಅರಂಭಿಸಿದರು. 'ವಿಜಯ' ಪತ್ರಿಕೆಯಲ್ಲಿ ಬರುತ್ತಿದ್ದ ಸಿನಿಮಾ ವಿಮರ್ಶೆಗಳು ಆಗ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದವು. ಹಾಗಾಗಿ ಅವರು ತಮ್ಮ ಹೆಸರನ್ನು ವಿಜಯ ಬಾಪಿನೀಡು ಎಂದು ಬದಲಾಯಿಸಿಕೊಂಡರು. ಬಳಿಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಅವರು 1981ರಲ್ಲಿ ನಿರ್ದೇಶಕರಾಗಿ ಬದಲಾದರು.

ಮೆಗಾ ಸ್ಟಾರ್ ಚಿರಂಜೀವಿ ಅವರ ಜತೆಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಬಾಪಿನೀಡು ಅವರಿಗೆ ಸಲ್ಲುತ್ತದೆ. ಚಿರಂಜೀವಿ ಜತೆಗೆ ಪಟ್ನಂ ವಚ್ಚಿನ ಪತಿವ್ರತಲು, ಮಗ ಮಹಾರಾಜು, ಮಹಾನಗರಂಲೋ ಮಾಯಗಾಡು, ಹೀರೋ, ಮಗಧೀರುಡು ಸಿನಿಮಾಗಳ ಜತೆಗೆ ಮೆಗಾ ಸ್ಟಾರ್ ನೂರನೇ ಸಿನಿಮಾ ಖೈದಿ ನಂಬರ್ 786 ಸಹ ವಿಜಯ ಬಾಪಿನೀಡು ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಗ್ಯಾಂಗ್ ಲೀಡರ್ ಈಗಲೂ ಎವರ್‌ಗ್ರೀನ್ ಸಿನಿಮಾ. ಚಿರಂಜೀವಿ ಬಳಿಕ ರಾಜೇಂದ್ರ ಪ್ರಸಾದ್ ಜತೆಗೆ ಅತಿ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಶೋಭನ್ ಬಾಬು, ಕೃಷ್ಣ, ಮೋಹನ್ ಬಾಬು ಅವರಂತಹ ಹಿರಿಯ ಕಲಾವಿದರ ಜತೆಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ 22 ಸಿನಿಮಾಗಳನ್ನು ನೀಡಿದ್ದಾರೆ. ಅದೇ ರೀತಿ ಗೆಳೆಯರ ಜತೆಗೆ ಕೈಜೋಡಿಸಿ 12 ಚಿತ್ರಗಳನ್ನು ನಿರ್ಮಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌