ಆ್ಯಪ್ನಗರ

ಆಂಧ್ರದ ನೆಲದಲ್ಲಿ ಉಪೇಂದ್ರ ಅವರಿಗೆ ಸಿಕ್ಕ 'ರಿಯಲ್' ಗೌರವ

ಟಾಲಿವುಡ್‌ನ 'ವೈವಿಎಸ್ ಚೌಧರಿ' ಅವರು ಹೇಳಿರುವ ಈ ಮಾತು ಅಕ್ಷರಶಃ ಸತ್ಯ ಎಂಬುದು ರಿಯಲ್ ಸ್ಟಾರ್ ಉಪೇಂದ್ರ ಅವರ ಎಲ್ಲ ಚಿತ್ರಗಳನ್ನು ನೋಡಿಕೊಂಡು ಬಂದಿರುವ ಕನ್ನಡಿಗರಿಗೆ ಹಾಗೂ ಅದೆಷ್ಟೋ ಜನರಿಗೆ ಗೊತ್ತು.

Vijaya Karnataka Web 13 Mar 2019, 11:59 am
ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ, '2017'ರಲ್ಲಿ ತೆರೆಕಂಡಿದ್ದ 'ಅರ್ಜುನ್ ರೆಡ್ಡಿ' ಸಿನಿಮಾ ಸೌತ್ ಸಿನಿಮಾ ಜಗತ್ತಿನಲ್ಲಿ ಹೊಸದೊಂದು ಟಾಕ್‌ ಕ್ರಿಯೇಟ್ ಮಾಡಿತ್ತು. ಅದನ್ನು ತೆಲುಗು ಚಿತ್ರರಂಗ, ಹೊಸ ಪ್ರಯೋಗ ಎಂದೇ ಭಾವಿಸಿತ್ತು ಎನ್ನಬಹುದು. ಆದರೆ, ಅದಕ್ಕೂ ಮೊದಲೇ ಕನ್ನಡದ ಎವರ್‌ಗ್ರೀನ್ ನಿರ್ದೇಶಕರಾದ ಉಪೇಂದ್ರ ಅವರು ಇಂಥಹ ಚಿತ್ರ ಕೊಟ್ಟಿದ್ದರು ಎಂಬ ಸತ್ಯವನ್ನು ತೆಲುಗಿನ ನೆಲದ ನಿರ್ದೇಶಕರೊಬ್ಬರು ಅಲ್ಲಿನ ಜನಸಮೂಹದ ಎದುರೇ ನುಡಿದು ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web upendra1303


ಹೌದು, ಟಾಲಿವುಡ್‌ನ 'ವೈವಿಎಸ್ ಚೌಧರಿ' ಅವರು ಈ ಸತ್ಯವನ್ನು ನುಡಿದು ನೆರೆದಿದ್ದ ಸಾವಿರಾರು ತೆಲುಗು ಹಾಗೂ ಕನ್ನಡ ಸಿನಿ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿರುವ ನಿರ್ದೇಶಕರು. ಉಪೇಂದ್ರ ಅಭಿನಯದ 'ಐ ಲವ್ ಯೂ 'ಸಿನಿಮಾ ತೆಲುಗಿನಲ್ಲೂ ತೆರೆಕಾಣುತ್ತಿದ್ದು, ನಿನ್ನೆಯಷ್ಟೇ ತೆಲುಗು ಟ್ರೈಲರ್ ರಿಲೀಸ್ ಆಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಮಾತು ಹೇಳಿದ್ದಾರೆ.

ತೆಲುಗು ನಿರ್ದೇಶಕ ವೈವಿಎಸ್ ಚೌಧರಿ ''ನಾವು ಆರಂಭದಿಂದಲೂ ಉಪೇಂದ್ರ ಅವರ ಸಿನಿಮಾ ನೋಡುತ್ತಾ ಬಂದಿದ್ದೇವೆ. ಅವರ ಚಿತ್ರಗಳೆಲ್ಲವೂ ಒಂದು ವಿಭಿನ್ನ ಟ್ರೆಂಡ್ ಕ್ರಿಯೇಟ್ ಮಾಡಿವೆ. 'ಅರ್ಜುನ್ ರೆಡ್ಡಿ', 'ಆರ್ ಎಕ್ಸ್ 100'ನಂಥ ಚಿತ್ರಗಳು ಈಗ ನಮ್ಮಲ್ಲಿ ಬಂದಿವೆ. ಆದರೆ, ಅದರಪ್ಪನಂತಹ ಚಿತ್ರಗಳನ್ನ ಕನ್ನಡದ ನಿರ್ದೇಶಕ ಹಾಗೂ ನಟ ಉಪೇಂದ್ರ ಅವರು ಆಗಲೇ ಮಾಡಿದ್ದರು'' ಎಂದು ಹೇಳಿದ್ದಾರೆ.

ಟಾಲಿವುಡ್‌ನ 'ವೈವಿಎಸ್ ಚೌಧರಿ' ಅವರು ಹೇಳಿರುವ ಈ ಮಾತು ಅಕ್ಷರಶಃ ಸತ್ಯ ಎಂಬುದು ರಿಯಲ್ ಸ್ಟಾರ್ ಉಪೇಂದ್ರ ಅವರ ಎಲ್ಲ ಚಿತ್ರಗಳನ್ನು ನೋಡಿಕೊಂಡು ಬಂದಿರುವ ಕನ್ನಡಿಗರಿಗೆ ಹಾಗೂ ಅದೆಷ್ಟೋ ಜನರಿಗೆ ಗೊತ್ತು. ಉಪೇಂದ್ರ ನಿರ್ದೇಶನದ 'ಓಂ, ಎ, ಉಪೇಂದ್ರ, ಸ್ವಸ್ತಿಕ್' ಮುಂತಾದ ಚಿತ್ರಗಳೆಲ್ಲವೂ 'ಅರ್ಜನ್ ರೆಡ್ಡಿ' ಹಾಗೂ ಅದರಪ್ಪನಂತಹ ಚಿತ್ರಗಳೇ ಆಗಿವೆ. ಹೀಗಾಗಿ, ಆಂಧ್ರದ ನೆಲದಲ್ಲಿ ಉಪೇಂದ್ರ ಅವರಿಗೆ ಸಿಕ್ಕ ಗೌರವಕ್ಕೆ ಕನ್ನಡಿಗರೆಲ್ಲ ಖುಷಿಯಾಗಿದ್ದಾರೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌