ಆ್ಯಪ್ನಗರ

ಸೆಟ್‌ನಲ್ಲಿ ಮಹೇಶ್ ಬಾಬುರನ್ನು ಭೇಟಿ ಮಾಡಿದ ಹುಡುಗಿ ಯಾರು ಗೊತ್ತಾ?

ಕೆಲವೊಮ್ಮೆ ನಟರೇ ಅವರ ಕನಸನ್ನು ನನಸು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ತನ್ನನ್ನು ನೋಡಬೇಕು ಎಂದು ಹಾತೊರೆಯುತ್ತಿದ್ದ ಬಾಲಕಿಯನ್ನು ಸ್ವತಃ ಭೇಟಿಯಾಗಿದ್ದಾರೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು.

Vijaya Karnataka Web 19 Mar 2019, 5:12 pm
ತಾವು ಆರಾಧಿಸುವ ನಟ ಅಥವಾ ನಟಿಯನ್ನು ಒಮ್ಮೆಯಾದರೂ ನೋಡಬೇಕು, ಅವರನ್ನು ಮಾತನಾಡಬೇಕು, ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂದು ಬಹಳಷ್ಟು ಅಭಿಮಾನಿಗಳು ಚಡಪಡಿಸುತ್ತಿರುತ್ತಾರೆ. ಕೆಲವೊಮ್ಮೆ ನಟರೇ ಅವರ ಕನಸನ್ನು ನನಸು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ತನ್ನನ್ನು ನೋಡಬೇಕು ಎಂದು ಹಾತೊರೆಯುತ್ತಿದ್ದ ಬಾಲಕಿಯನ್ನು ಸ್ವತಃ ಭೇಟಿಯಾಗಿದ್ದಾರೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು.
Vijaya Karnataka Web mahesh-babu


ಶ್ರೀಕಾಕುಳಂ ಮೂಲದ ಈ ಅಭಿಮಾನಿಯನ್ನು ಭೇಟಿಯಾಗಲು ಕಾರಣವೂ ಇದೆ. ಈ ಹೆಣ್ಣು ಮಗು ಕ್ಯಾನ್ಸರ್‌ನಿಂದ ಬಳಲುತ್ತಿದೆ. ಒಮ್ಮೆಯಾದರೂ ಮಹೇಶ್ ಬಾಬು ಅವರನ್ನು ಭೇಟಿಯಾಗಬೇಕು ಎಂದು ಕನಸು ಕಾಣುತ್ತಿತ್ತು. ಕಡೆಗೂ 'ಮಹರ್ಷಿ' ಸಿನಿಮಾದಲ್ಲಿ ಸೆಟ್‌ನಲ್ಲಿ ಇದು ಸಾಕಾರವಾಗಿದೆ. ಅಭಿಮಾನಿಗಳ ಆಸೆಯನ್ನು ಪೂರೈಸುವುದರಲ್ಲಿ ಮಹೇಶ್ ಬಾಬು ಸದಾ ಮುಂದಿರುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಈ ಮಗು ಹೆಸರು ಪರ್ವಿನ್. ಕ್ಯಾನ್ಸರ್‌ನಿಂದ ಬಳಲುತ್ತಿರುವ ಈ ಬಾಲಕಿಗೆ ಮಹೇಶ್ ಬಾಬು ಸಿನಿಮಾಗಳೆಂದರೆ ಎಲ್ಲಿಲ್ಲದ ಅಕ್ಕರೆ. ತನ್ನನ್ನು ಭೇಟಿಯಾಗಬೇಕು ಎಂದು ಹಾತೊರೆಯುತ್ತಿದ್ದ ಬಾಲಕಿ ಬಗ್ಗೆ ತಿಳಿದುಕೊಂಡ ಮಹೇಶ್ ಬಾಬು ಕಡೆಗೂ ಮಹರ್ಷಿ ಸೆಟ್‍ನಲ್ಲಿ ಆ ಮಗುವಿನೊಂದಿಗೆ ಸಾಕಷ್ಟು ಸಮಯ ಕಳೆದಿದ್ದಾರೆ. ಮಗುವಿನ ಪೋಷಕರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹೇಶ್ ಬಾಬುರನ್ನು ಭೇಟಿಯಾದ ಪರ್ವಿನ್ ಮುಖದಲ್ಲಿ ಮಂದಹಾಸ ಹೊರಸೂಸುತ್ತಿತ್ತು. ಮಹೇಶ್ ಬಾಬು ಜತೆಗೆ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಸಂತೋಷವಾಗಿ ಮನೆಗೆ ತೆರಳಿದ್ದಾರೆ ಪರ್ವಿನ್. ಆದಷ್ಟು ಬೇಗ ಗುಣಮುಖಳಾಗುವಂತೆ ಮಹೇಶ್ ಹಾರೈಸಿ ಕಳುಹಿಸಿದ್ದಾರೆ.

ಈ ಹಿಂದೆ ರಾಜಮಂಡ್ರಿಯ 106 ವರ್ಷದ ತನ್ನ ಅಭಿಮಾನಿಯನ್ನು ಮಹೇಶ್ ಬಾಬು ಭೇಟಿಯಾಗಿದ್ದರು. 'ಭರತ್ ಅನೆ ನೇನು' ಎಂಬ ಸಿನಿಮಾದಲ್ಲಿ ಮಹೇಶ್ ಬಾಬು ಮುಖ್ಯಮಂತ್ರಿ ಪಾತ್ರ ಪೋಷಿಸಿದ್ದರು. ಆ ಸಿನಿಮಾ ನೋಡಿದ ಬಳಿಕ 106 ವರ್ಷದ ಈ ಹಿರಿಯರು ಮಹೇಶ್ ಬಾಬು ಅಭಿಮಾನಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌