ಆ್ಯಪ್ನಗರ

ಟಾಪ್‌ ಸ್ಟಾರ್‌ಗಳ ಪಾಲಿಗೆ ಅಚ್ಚುಮೆಚ್ಚಿನ ವಿಲನ್‌ ಆದ ಡಾಲಿ

ಕನ್ನಡದ ಸ್ಟಾರ್‌ಗಳಿಗೆ ಫೆವರೇಟ್‌ ನಟನಾಗುತ್ತಿದ್ದಾರೆ ಡಾಲಿ ಖ್ಯಾತಿಯ ಧನಂಜಯ್‌. ಸ್ವತಃ ತಾವೇ ನಾಯಕನಾದರೂ, ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್‌ ನಟರ ಚಿತ್ರಗಳಿಗೆ ವಿಲನ್‌ ಆಗುವ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ.

Vijaya Karnataka 12 Feb 2019, 7:19 am
ಶರಣು ಹುಲ್ಲೂರು
Vijaya Karnataka Web Dhanajay


ದರ್ಶನ್‌, ಪುನೀತ್‌ ರಾಜ್‌ಕುಮಾರ್‌, ದುನಿಯಾ ವಿಜಯ್‌, ಧ್ರುವ ಸರ್ಜಾ ಸೇರಿ ಬಹುತೇಕ ಸ್ಟಾರ್‌ ನಟರ ಚಿತ್ರಗಳಿಗೆ ವಿಲನ್‌ ಆಗಿ ಆಯ್ಕೆ ಆಗಿರುವ ಧನಂಜಯ್‌, ಸ್ವತಃ ತಾವೇ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರೂ, ಕಲಾವಿದನಾಗಿ ಎಲ್ಲ ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

'ಒಬ್ಬ ಕಲಾವಿದನಿಗೆ ನಾನಾ ಬಗೆಯ ಪಾತ್ರಗಳು ಹುಡುಕಿಕೊಂಡು ಬರುವುದು ಅಪರೂಪ. ಅಂತಹ ಅವಕಾಶ ನನಗೆ ಸಿಗುತ್ತಿದೆ. ಈ ಹಿಂದೆ ನಾನು ಅಲ್ಲಮ ಸಿನಿಮಾದಲ್ಲಿ ಸಂತನಾಗಿದ್ದೆ. ಆ ನಂತರ ಟಗರು ಚಿತ್ರದಲ್ಲಿ ಕೆಟ್ಟ ಕೊಳಕ ವಿಲನ್‌ ಪಾತ್ರ ಮಾಡಿದೆ. ನಂತರ ಭೈರವಗೀತ ಚಿತ್ರದಲ್ಲಿ ಹೋರಾಟಗಾರನಾಗಿ ನಟಿಸಿದೆ. ಜಗ್ಗೇಶ್‌ ಅವರ ತೋತಾಪುರಿ ಚಿತ್ರದಲ್ಲಿ ಸಪೋರ್ಟಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೊಂದು ರೀತಿಯಲ್ಲಿ ಹೆಮ್ಮೆ ಪಡಬೇಕಾದ ವಿಚಾರ. ನಾನು ಒಬ್ಬ ಕಲಾವಿದ. ತೃಪ್ತಿ ಕೊಡುವಂಥ ಪಾತ್ರ ಸಿಕ್ಕಾಗ ಯಾವುದನ್ನೂ ಯೋಚಿಸುವುದಿಲ್ಲ' ಎಂದು ಧನಂಜಯ್‌ ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ನಟನೆಯ 'ಯುವರತ್ನ' ಚಿತ್ರದಲ್ಲಿ ಹೊಸ ಬಗೆಯ ಪಾತ್ರಕ್ಕೆ ಕೇಳಿದ್ದಾರೆ. ಅದು ವಿಲನ್‌ ರೀತಿಯ ಪಾತ್ರವಾಗಿದ್ದರೂ ಪಾತ್ರಕ್ಕೊಂದು ಉತ್ತಮ ಹಿನ್ನೆಲೆಯಿದೆ. ದುನಿಯಾ ವಿಜಯ್‌ ಅವರ ಸಲಗ ಸಿನಿಮಾದಲ್ಲೂ ಐಪಿಎಸ್‌ ಆಫೀಸ್‌ರ ಪಾತ್ರವಿದೆ. ಧ್ರುವ ಸರ್ಜಾ ಅವರ ಪೊಗರು ಸಿನಿಮಾದಲ್ಲಿ ನಾಯಕನಿಗೇ ಎದುರಾಗಿ ನಿಲ್ಲುವಂಥ ಕ್ಯಾರೆಕ್ಟರ್‌ ಇದೆ. ಜತೆಗೆ ಎರಡನೇ ಸಲ ಸಿನಿಮಾ ಖ್ಯಾತಿಯ ನಿರ್ಮಾಪಕ ಯೋಗೀಶ್‌ ಅವರ ಮತ್ತೊಂದು ಚಿತ್ರಕ್ಕೆ ಧನಂಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ. ಟಗರು ಸಿನಿಮಾದ ಪಾತ್ರವೊಂದು ಈ ಸಿನಿಮಾದಲ್ಲಿ ಮುಂದುವರಿಯುವುದು ಈ ಸಿನಿಮಾದ ವಿಶೇಷಗಳಲ್ಲಿ ಒಂದು.

'ಒಂದೊಳ್ಳೆ ಪಾತ್ರದ ಮುಂದುವರಿದ ಭಾಗದಲ್ಲಿ ಧನಂಜಯ್‌ ನಟಿಸುತ್ತಿದ್ದಾರೆ. ಆ ಪಾತ್ರ ಯಾವುದು ಮತ್ತು ಸಿನಿಮಾದ ಟೈಟಲ್‌ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇವೆ. ನಮ್ಮ ಬ್ಯಾನರ್‌ನಲ್ಲಿ ಇದು ಮೂರನೇ ಸಿನಿಮಾ. ಉತ್ತಮ ಕಥೆಯೊಂದಿಗೆ ಮತ್ತೆ ನಿರ್ಮಾಣ ಮಾಡುತ್ತಿದ್ದೇನೆ' ಎಂದು ಯೋಗೀಶ್‌ ತಿಳಿಸಿದ್ದಾರೆ. ಗಣಪ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪ್ರಭು ಶ್ರೀನಿವಾಸ್‌ ಈ ಸಿನಿಮಾದ ನಿರ್ದೇಶಕರು. ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

ಕಲಾವಿದನೊಬ್ಬನಿಗೆ ನಾನಾ ಬಗೆಯ ಪಾತ್ರಗಳು ಸಿಗುವುದು ಅಪರೂಪ. ಅಂತಹ ಅವಕಾಶ ನನಗೆ ಸಿಕ್ಕಿದೆ. ಹಾಗಾಗಿ ನಾನು ನಿಜಕ್ಕೂ ಲಕ್ಕಿ. ಮನಸ್ಸಿಗೆ ತೃಪ್ತಿ ಕೊಡುವ ಎಂತಹ ಪಾತ್ರವಿದ್ದರೂ ನಾನು ನಟಿಸುತ್ತೇನೆ- ಧನಂಜಯ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌