ಆ್ಯಪ್ನಗರ

ಹಳ್ಳಿ ಸೊಗಡಿನ ಮದುವೆ

ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಮದುವೆ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಇಂದೂ ಕೃಷ್ಣ ಈಗಾಗಲೇ ಈ ಸಿನಿಮಾ ಅಂತಾರಾಷ್ಟ್ರೀಯ ಫಿಲ್ಮೋತ್ಸವದಲ್ಲಿ ಪ್ರದರ್ಶನ ಕಂಡಿದೆ...

Vijaya Karnataka 21 Dec 2018, 10:02 am
ಈಗಾಗಲೇ ಅಂತಾರಾಷ್ಟ್ರೀಯ ಫಿಲ್ಮೋತ್ಸವದಲ್ಲಿ ಪ್ರದರ್ಶನ ಕಂಡ ಮದುವೆ ಚಿತ್ರದಲ್ಲಿ ಹಳ್ಳಿ ಸೊಗಡಿನ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕ ಇಂದೂ ಕೃಷ್ಣ. ಅದರಲ್ಲೂ ಹಳ್ಳಿಗಳಲ್ಲಿ ನಡೆಯುವ ಮದುವೆಯನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರಕಥೆ ಬರೆದಿದ್ದಾರಂತೆ. ಹಾಗಾಗಿ ಮೂರು ದಿನಗಳ ಕಾಲ ಮದುವೆಯಲ್ಲಿ ಯಾವೆಲ್ಲ ಶಾಸ್ತ್ರಗಳು ಆಗುತ್ತವೆಯೋ ಅವೆಲ್ಲದರ ಮಹತ್ವವನ್ನು ಈ ಸಿನಿಮಾ ತೋರಿಸಲಿದೆಯಂತೆ.
Vijaya Karnataka Web Mariage


'ಆಧುನಿಕ ಮದುವೆಗಳ ಭರಾಟೆಯಲ್ಲಿ ಸಾಂಪ್ರದಾಯಿಕ ಮದುವೆಯು ಮಹತ್ವ ಕಳೆದುಕೊಂಡಿದೆ. ಒಂದೊಂದು ಶಾಸ್ತ್ರಕ್ಕೂ ತನ್ನದೇ ಆದ ಹಿನ್ನೆಲೆಯಿದೆ. ಅದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ' ಅಂದಿದ್ದಾರೆ ನಿರ್ದೇಶಕರು.

ಈ ಸಿನಿಮಾದಲ್ಲಿ ನಾಯಕ, ನಾಯಕಿ ಎಂಬ ಪಾತ್ರಗಳು ಇರದೇ, ಎಲ್ಲ ಪಾತ್ರಕ್ಕೂ ಮಹತ್ವ ನೀಡಿದ್ದಾರಂತೆ. ವರನಾಗಿ ಮಂಜುನಾಥ್‌ ಆರ್ಯ ಕಾಣಿಸಿಕೊಂಡಿದ್ದರೆ, ಆರೋಹಿ ಗೌಡ ವಧು. ಈ ಇಬ್ಬರ ನಡುವಿನ ಕಥೆಯೇ ಸಿನಿಮಾದಲ್ಲಿ ಮುಖ್ಯವಾಗಿ ಬರಲಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌