ಆ್ಯಪ್ನಗರ

ಪ್ರಿಯಾ ಕಣ್ಸನ್ನೆಯಿಂದ ಟ್ರಾಫಿಕ್‌ ಪಾಠ !

ಕೇವಲ ತನ್ನ ಕಣ್ಸನ್ನೆಯಿಂದಲೇ ಸೆನ್ಸೇಶನ್‌ ಸೃಷ್ಟಿಸಿದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಯಾರಿಗೆ ಗೊತ್ತಿಲ್ಲ ಹೇಳಿ? ಈಗ.

Vijaya Karnataka 28 Mar 2018, 11:45 am
ಕೇವಲ ತನ್ನ ಕಣ್ಸನ್ನೆಯಿಂದಲೇ ಸೆನ್ಸೇಶನ್‌ ಸೃಷ್ಟಿಸಿದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಯಾರಿಗೆ ಗೊತ್ತಿಲ್ಲ ಹೇಳಿ? ಈಗ ಅವರ ಹುಬ್ಬೇರಿಸುವ ದೃಶ್ಯವನ್ನು ಟ್ರಾಫಿಕ್‌ ನಿಯಮ ಕುರಿತು ಜಾಗೃತಿ ಮೂಡಿಸಲು ಗುಜರಾತ್‌ನ ವಡೋದರ ಪೊಲೀಸರು ಬಳಸಿಕೊಂಡಿದ್ದಾರೆ.
Vijaya Karnataka Web traffic lessons by priya prakash varrier
ಪ್ರಿಯಾ ಕಣ್ಸನ್ನೆಯಿಂದ ಟ್ರಾಫಿಕ್‌ ಪಾಠ !


ವಾಹನ ಚಾಲನೆ ಮಾಡುತ್ತಿರುವಾಗ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಎಚ್ಚರದಿಂದಿರುವಂತೆ ಪೊಲೀಸರು ಸಂದೇಶ ರವಾನಿಸಿದ್ದು, ಇದನ್ನು ನಟಿಯ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇಲ್ಲಸ್ಪ್ರೇಷನ್‌ ತಜ್ಞರ ನೆರವಿನೊಂದಿಗೆ ಪ್ರಿಯಾ ವಾರಿಯರ್‌ ಕಣ್ಸನ್ನೆಗೆ ಹೊಸ ರೂಪ ನೀಡಲಾಗಿದೆ. ಇದು ಹಾಸ್ಯಮಯವಾಗಿರುವುದರಿಂದ ಜನರನ್ನು ಹೆಚ್ಚು ತಲುಪುತ್ತದೆ ಎಂಬುದು ಪೊಲೀಸರ ಅಭಿಪ್ರಾಯ.

ಇದುವರೆಗೆ ನಾವು ಟ್ರಾಫಿಕ್‌ ಜಾಗೃತಿ ಮೂಡಿಸಲು ಅನುಸರಿಸುತ್ತಿದ್ದ ಮಾರ್ಗಗಳು ಸಾಂಪ್ರದಾಯಿಕವಾಗಿದ್ದವು. ಹೀಗಾಗಿ ಅದು ಹೆಚ್ಚು ಜನರನ್ನು ತಲುಪುತ್ತಿರಲಿಲ್ಲ. ಈಗ ಜನರ ಕಣ್ಣನ್ನು ಸೆಳೆಯುವ ಮತ್ತು ಅವರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕೆಲಸಕ್ಕೆ ಕೈ ಹಾಕಿದೆವು. ಅದಕ್ಕಾಗಿ ಅತ್ಯಂತ ಜನಪ್ರಿಯ ಥೀಮ್‌ಗಳನ್ನು ಬಳಸಿಕೊಂಡೆವು ಎಂದು ಪೊಲೀಸ್‌ ಆಯುಕ್ತ ಮನೋಜ್‌ ಶಶಿಧರ್‌ ಹೇಳಿದ್ದಾರೆ.

ಇಂತಹ ಪೋಸ್ಟ್‌ಗಳ ಮೂಲಕ ಇಲಾಖೆಯು ಎರಡು ರೀತಿಯ ಸಂದೇಶ ರವಾನಿಸಲು ಬಯಸಿದೆ. ಮೊದಲನೇದಾಗಿ ಟ್ರಾಫಿಕ್‌ ನಿಯಮ ಉಲ್ಲಂಘನೆ ತಡೆಯುವುದು ಹಾಗೂ ಎರಡನೇದಾಗಿ ಪೊಲೀಸರು ಕೂಡ ಹಾಸ್ಯ ಪ್ರಜ್ಞೆ ಉಳ್ಳವರು, ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವು ಇರುವವರು ಹಾಗೂ ಸಾಮಾಜಿಕ ಜಾಲತಾಣಗಳ ಟ್ರೆಂಡ್‌ಗಳನ್ನು ಅನುಸರಿಸುತ್ತಾರೆ ಎಂಬುದನ್ನು ಜನರಿಗೆ ತೋರಿಸುವುದಾಗಿದೆ ಎಂದು ಅವರು ವಿವರಿಸಿದರು.

ಈ ಪೋಸ್ಟರ್‌ ವೈರಲ್‌ ಆಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಮಾದಕ ದ್ರವ್ಯ ಸೇವನೆ, ಮಹಿಳೆಯ ಮೇಲಿನ ದೌರ್ಜನ್ಯ, ಕೌಟುಂಬಿಕ ಹಿಂಸೆ, ಸೈಬರ್‌ ಸೆಕ್ಯುರಿಟಿ ಸೇರಿದಂತೆ ಹಲವು ವಿಷಯಗಳ ಕುರಿತು ಜಾಗೃತಿ ಮೂಡಿಸುವ ಬಗ್ಗೆಯೂ ಇದೇ ರೀತಿಯಲ್ಲಿ ತಾವೇ ಸೃಷ್ಟಿಸಿದ ಪೋಸ್ಟ್‌ಗಳನ್ನು ಹಾಕಲಾರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌