ಆ್ಯಪ್ನಗರ

ಕೋಸ್ಟಲ್‌ವುಡ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಬೆಲ್ಚಪ್ಪ

ಈಗಾಗಲೇ ಹತ್ತು ಪೋಸ್ಟರ್‌ಗಳನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳು ವೈರಲ್‌ ಆಗಿವೆ. ವಿಭಿನ್ನ ಕಥೆಯನ್ನು ಹೊಂದಿರುವ ಬೆಲ್ಚಪ್ಪದ ಹಾಡುಗಳ ಧ್ವನಿ ಸುರುಳಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ತಂಡ ನಿರ್ಧರಿಸಿದೆ.

Vijaya Karnataka 27 Apr 2019, 3:50 pm
ಕೋಸ್ಟಲ್‌ವುಡ್‌ ಮಟ್ಟಿಗೆ ಇದೊಂದು ಹೊಸ ದಾಖಲೆ. ಬೆಲ್ಚಪ್ಪ ಸಿನಿಮಾವನ್ನು ಕೇವಲ 14 ದಿನಗಳಲ್ಲಿ ಶೂಟಿಂಗ್‌ ಮುಗಿಸಿ ದಾಖಲೆ ಮಾಡಲಾಗಿದೆ. ವಿಶೇಷ ಅಂದ್ರೆ ಚಿತ್ರತಂಡ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್‌ ಮಾಡಿಕೊಳ್ಳಲಿಲ್ಲ. ಈ ಚಿತ್ರದಲ್ಲಿ ನಾಲ್ಕು ಹಾಡು, ಒಂದು ವಾಟರ್‌ ಫೈಟ್‌ ಹೀಗೆ ಅನೇಕ ಕುತೂಹಲಕಾರಿ ದೃಶ್ಯಗಳಿವೆ ಎಂದು ನಿರ್ದೇಶಕ ರಜನೀಶ್‌ ದೇವಾಡಿಗ ಹೇಳಿದ್ದಾರೆ.
Vijaya Karnataka Web belchappa


ಈಗಾಗಲೇ ಹತ್ತು ಪೋಸ್ಟರ್‌ಗಳನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳು ವೈರಲ್‌ ಆಗಿವೆ. ವಿಭಿನ್ನ ಕಥೆಯನ್ನು ಹೊಂದಿರುವ ಬೆಲ್ಚಪ್ಪದ ಹಾಡುಗಳ ಧ್ವನಿ ಸುರುಳಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಗೆ ತಂಡ ನಿರ್ಧರಿಸಿದೆ.

ಕೋರಿ ರೊಟ್ಟಿ ಚಿತ್ರದ ನಿರ್ದೇಶನದ ಮತ್ತು ನಟನೆ ಮೂಲಕ ಗಮನ ಸೆಳೆದಿರುವ ರಜನೀಶ್‌ ದೇವಾಡಿಗ ಅವರು ಬೆಲ್ಚಪ್ಪ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನ ಮಾಡಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್‌ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಯಶಸ್ವಿ ದೇವಾಡಿಗ ನಟಿಸಿದ್ದಾರೆ. ಉಳಿದಂತೆ ಉಮೇಶ್‌ ಮಿಜಾರ್‌, ದೀಪಕ್‌ ರೈ, ಸುಕನ್ಯಾ, ಪ್ರವೀಣ್‌ ಮರ್ಕಮೆ, ಯಜ್ಞೇಶ್‌, ಆಶಾ ಮಾರ್ನಾಡ್‌ ಮುಂತಾದವರು ಇದ್ದಾರೆ.

ತುಳು ಸಂಸ್ಕೃತಿ ಮತ್ತು ಕೃಷಿಗೆ ಹತ್ತಿರವಿರುವ ಬೆಲ್ಚಪ್ಪ ಶಬ್ದ ಕೇಳಲು ತಮಾಷೆಯಂತೆ ಕಂಡರೂ ಇದರ ಹಿಂದೆ ಉತ್ತಮ ಕಥೆಯಿದೆ. ನೋವಿನ ಭಾವನೆಯಿದೆ ಎಂದು ರಜನೀಶ್‌ ಹೇಳುತ್ತಿದ್ದಾರೆ. ಇದರಲ್ಲಿ ಕಥೆಯೇ ನಾಯಕನೇ ಹೊರತು ಯಾವುದೇ ಒಂದು ಪಾತ್ರವಲ್ಲ. ಅರವಿಂದ ಬೋಳಾರ್‌ ಪ್ರಮುಖ ಪಾತ್ರದಲ್ಲಿದ್ದು, ನನ್ನದು ಪೋಷಕ ಪಾತ್ರ. ಉಮೇಶ್‌ ಮಿಜಾರ್‌, ದೀಪಕ್‌ ರೈ ಪಾಣಾಜೆ, ಸುಕನ್ಯಾ ಮುಂತಾದವರು ಚಿತ್ರದಲ್ಲಿದ್ದಾರೆ ಎಂದು ಹೇಳುತ್ತಾರೆ ರಜನೀಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌