ಆ್ಯಪ್ನಗರ

ಆಫೀಸರ್ ಟ್ವಿಟರ್ ರಿಯಾಕ್ಷನ್: ಎಲ್ಲಿ ಎಷ್ಟು ಸಲ ಒದೆಯಬೇಕು ಆರ್‌ಜಿವಿ?

ಕೆಲವರು ವರ್ಮಾ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾ ಹಿಟ್ ಆಗದಿದ್ದರೆ ನನ್ನನ್ನು ಒದೆಯಿರಿ ಎಂದು ವರ್ಮಾ ಈ ಹಿಂದೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಕೆಲವರು, ಒದಿ ಎಂದಿದ್ದರಲ್ಲವೇ? ಎಲ್ಲಿಗೆ ಬಂದು ಎಷ್ಟು ಸಲ ಒದೆಯಬೇಕು ಆರ್‌ಜಿವಿ ಎಂದು ಕಾಮೆಂಟ್ ಮಾಡಿದ್ದಾರೆ.

Samayam Telugu 1 Jun 2018, 6:43 pm
ವಿವಾದಾತ್ಮಕ ಚಿತ್ರಗಳ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ’ಆಫೀಸರ್’ ಚಿತ್ರ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಟಾಲಿವುಡ್ ಕಿಂಗ್ ಅಕ್ಕಿನೇನಿ ನಾಗಾರ್ಜುನ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಕೆ ಎಂ ಪ್ರಸನ್ನ ಜೀವನಾಧಾರಿತವಾಗಿದ್ದು ಸಖತ್ ಕುತೂಹಲ ಮೂಡಿಸಿತ್ತು.
Vijaya Karnataka Web officer


ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವ ’ಆಫೀಸರ್’ ಚಿತ್ರಕ್ಕೆ ನೇಟಿಜನ್ಸ್‌ನಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು ಸೂಪರ್ ಎಂದಿದ್ದಾರೆ. ಇನ್ನೂ ಕೆಲವರು ವರ್ಮಾ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾ ಹಿಟ್ ಆಗದಿದ್ದರೆ ನನ್ನನ್ನು ಒದೆಯಿರಿ ಎಂದು ವರ್ಮಾ ಈ ಹಿಂದೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಕೆಲವರು, ಒದಿ ಎಂದಿದ್ದರಲ್ಲವೇ? ಎಲ್ಲಿಗೆ ಬಂದು ಎಷ್ಟು ಸಲ ಒದೆಯಬೇಕು ಆರ್‌ಜಿವಿ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಹಿಂದೆ ಶಿವ, ಗೋವಿಂದ ಗೋವಿಂದ, ಅಂತಂ ಚಿತ್ರಗಳು ಆರ್‌ಜಿವಿ ಮತ್ತು ನಾಗಾರ್ಜುನ ಕಾಂಬಿನೇಷನ್‌ನಲ್ಲಿ ಬಂದಿದ್ದವು. ಬಹಳ ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗಿದ್ದ ಕಾರಣ ’ಆಫೀಸರ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಆಫೀಸರ್ ಚಿತ್ರ ನಿಜವಾಗಿಯೂ ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತಿದೆಯೇ? ನೇಟಿಜನ್ಸ್ ಏನನ್ನುತ್ತಿದ್ದಾರೆ ಎಂಬುದರ ಮೇಲೆ ಒಮ್ಮೆ ಕಣ್ಣಾಡಿಸಿ.







ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌