ಆ್ಯಪ್ನಗರ

ಉಪೇಂದ್ರ-ರಚಿತಾ 'ಐ ಲವ್ ಯು' ಸಿನಿಮಾ: ಪ್ರೇಕ್ಷಕರು ಏನಂತಾರೆ?

ಕಿಚ್ಚ ಸುದೀಪ್ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಈ ಚಿತ್ರದ ಯಶಸ್ಸಿಗೆ ಶುಭ ಕೋರಿದ್ದರು. ಈ ಚಿತ್ರವು ತೀರಾ ವಿಭಿನ್ನವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಸ್ವತಃ ಈ ಚಿತ್ರದ ನಾಯಕ ಹಾಗೂ ಹಲವು ಸೂಪರ್ ಹಿಟ್ ಚಿತ್ರದ ನಿರ್ದೇಶಕ ಉಪೇಂದ್ರ ಅವರು ತಮ್ಮ ಈ ಚಿತ್ರದ ಪ್ರಮೋಶನ್ ವೇಳೆ, 'ಐ ಲವ್ ಯು' ಚಿತ್ರದ ಕಾನ್ಸೆಪ್ಟ್ ಬಹಳಷ್ಟು ವಿಭಿನ್ನವಾಗಿದೆ ಎಂದಿದ್ದಾರೆ.

Vijaya Karnataka Web 14 Jun 2019, 1:02 pm
ಉಪೇಂದ್ರ ಪ್ರೀತಿಯ ಬಗ್ಗೆ ತಮ್ಮದೇ ಆದ ಸ್ಟೈಲಿನಲ್ಲಿ ಫಿಲಾಸಫಿ ಹೇಳಿದವರು. ನಿರ್ದೇಶಕ ಆರ್‌ ಚಂದ್ರು ತಮ್ಮ ಸಿನಿಮಾಗಳಲ್ಲಿ ಇದೇ ಪ್ರೀತಿಗೆ ಭಾವನೆಗೆಳ ಒಗ್ಗರಣೆ ಕೊಟ್ಟವರು. ಐ ಲವ್ ಯೂ ಸಿನಿಮಾದಲ್ಲಿ ಈ ಕಾಂಬಿನೇಷನ್ ಹೇಗೆ ಕೆಲಸ ಮಾಡಿದೆ ಎಂಬ ಸಹಜ ಕುತೂಹಲ ನೋಡುಗರದ್ದಾಗಿತ್ತು. ಅವರ ಕುತೂಹಲಕ್ಕೆ ಮತ್ತಷ್ಟು ಇಂಬುಕೊಡುವಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕರು.
Vijaya Karnataka Web uppi1406


ಲವ್ ಎಂದರೆ ಏನು ಎನ್ನುವುದಕ್ಕೆ ಈಗಾಗಲೇ ಹಲವರು ಹಲವು ರೀತಿಯಲ್ಲಿ ಹೇಳಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಎರಡು ವಿಭಿನ್ನ ದೃಷ್ಟಿಕೋನದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಪ್ರೀತಿ ಎಂದರೆ ಅಪ್ಪಟ ಭಾವನೆಗಳ ಸಮ್ಮಿಲನ ಎನ್ನುವ ಕಥಾ ನಾಯಕಿ ಧಾರ್ಮಿಕ (ರಚಿತಾ ರಾಮ್). ಈ ವಿಷಯದ ಮೇಲೆಯೇ ಈಕೆ ಪಿಎಚ್ಡಿ ಮಾಡುವ ಸಂಶೋಧನಾ ವಿದ್ಯಾರ್ಥಿ. ಆದರೆ, ಅದೇ ಕಾಲೇಜ್‌ನ ಮತ್ತೋರ್ವ ವಿದ್ಯಾರ್ಥಿ ಸಂತೋಷ್ (ಉಪೇಂದ್ರ) ಅವರದ್ದು ಈ ಬಗ್ಗೆ ವಿಭಿನ್ನ ನಿಲುವು.

ಸಂತೋಷ್ ಪ್ರಕಾರ ಲವ್ ಅಂದರೆ ಅದೊಂದು ದೈಹಿಕ ಸಂಬಂಧಕ್ಕಿರುವ ಮುನ್ನುಡಿ. ಹಾಗಾಗಿಯೇ ಅವನು ಯಾವಾಗಲೂ 'ಲವ್ ಎನ್ನುವುದು ಸೆಕ್ಸ್ ಗೆ ಹಾಕಿರುವ ಮುಖವಾಡ. ಪಿಕಪ್, ಡ್ರಾಪ್, ಪ್ಯಾಕಪ್ ಇದಷ್ಟೇ ಲವ್. ಮನುಷ್ಯರು ತಮ್ಮನ್ನು ತಾವು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ' ಎಂದೇ ವಾದಿಸುತ್ತಾನೆ. ಈ ಇಬ್ಬರ ಮಧ್ಯೆ ಹೀಗೆಯೇ ಚರ್ಚೆಗಳು ನಡೆಯುತ್ತವೆ. ಆದರೆ, ಪ್ರೀತಿ ಎಂದರೆ ಇವೆರಡಕ್ಕಿಂತಲೂ ಬೇರೆಯದ್ದೇ ಇದೆ. ಅದು ನಂಬಿಕೆಗೆ ಸಂಬಂಧಿಸಿದ್ದು ಎನ್ನುವ ಸಂಗತಿ ಈ 'ಐ ಲವ್‌ ಯೂ' ಸಿನಿಮಾದ ತಿರುಳು.

(ಐ ಲವ್ ಯೂ ಸಿನಿಮಾ ವಿಮರ್ಶೆ ಓದಿ)

"ಒಂದು ಕಲ್ಲು ದೇವರಾಗಬೇಕು ಅಂದರೆ ಅದರ ಹಿಂದೆ ಶಿಲ್ಪಿ ಇರಬೇಕು. ಹುಡುಗರ ಉದ್ದಾರ ಆಗ್ಬೇಕು ಅಂದ್ರೆ ಅವರ ಹಿಂದೆ ಸತಾಯಿಸೋ ಹುಡುಗಿಯರು ಇರಬೇಕು." ಈ ರೀತಿಯ ಮಾಸ್ ಡೈಲಾಗ್ ಸಿನಿಮಾದಲ್ಲಿ ಹೇರಳವಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಘು ನಟನೆಯ ಹಲವು ಚಿತ್ರಗಳ ಝಲಕ್ ಇದರಲ್ಲಿ ಬಂದು ಹೋಗುತ್ತವೆ. ಎಂದಿಗಿಂತಲೂ ಉಪೇಂದ್ರ ವಿಭಿನ್ನವಾಗಿ ಕಾಣುತ್ತಾರೆ. ಅಪ್ಪಟ ಗೃಹಿಣಿ ಆಗಿ ಸೋನು ಗೌಡ ಗಮನ ಸೆಳೆಯುತ್ತಾರೆ. ರಚಿತಾ ನಟನೆ ಐ ಲವ್ ಯೂ ಅಂತ ಹೇಳುವಂತಿದೆ. ಈ ರೀತಿಯ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ.

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಜೋಡಿಯ 'ಐ ಲವ್ ಯು' ಚಿತ್ರವು ಇಂದು ಎರಡು ಭಾಷೆಗಳಲ್ಲಿ ತೆರೆ ಕಂಡಿದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರವು ತುಂಬಾ ವಿಭಿನ್ನವಾಗಿದ್ದು ಈಗಾಗಲೇ ಬಹಳಷ್ಟು ಕುತೂಹಲ ಕೆರಳಿಸಿದೆ. ಸೋನು ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತೆರೆಕಂಡಿದ್ದು, ಈಗಾಗಲೇ ಸಾಕಷ್ಟು ಹೈಪ್ ಪಡೆದಿದೆ.

ಕಿಚ್ಚ ಸುದೀಪ್ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಈ ಚಿತ್ರದ ಯಶಸ್ಸಿಗೆ ಶುಭ ಕೋರಿದ್ದರು. ಈ ಚಿತ್ರವು ತೀರಾ ವಿಭಿನ್ನವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಸ್ವತಃ ಈ ಚಿತ್ರದ ನಾಯಕ ಹಾಗೂ ಹಲವು ಸೂಪರ್ ಹಿಟ್ ಚಿತ್ರದ ನಿರ್ದೇಶಕ ಉಪೇಂದ್ರ ಅವರು ತಮ್ಮ ಈ ಚಿತ್ರದ ಪ್ರಮೋಶನ್ ವೇಳೆ, ಐ ಲವ್ ಯೂ ಚಿತ್ರದ ಕಾನ್ಸೆಪ್ಟ್ ಬಹಳಷ್ಟು ವಿಭಿನ್ನವಾಗಿದೆ ಎಂದಿದ್ದಾರೆ.

ಅಂದಹಾಗೆ, ಈ ಚಿತ್ರವು ಕರ್ನಾಟಕ, ಆಂಧ್ರ ಪ್ರದೇಶ ಹಾಘೂ ತೆಲಂಗಾಣಗಳಲ್ಲಿ 1000 ಕ್ಕೂ ಹೆಚ್ಚು ತೆರೆಗಳಲ್ಲಿ ಭರ್ಜರಿ ಮಿಂಚುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಹಲವು ಘಟಾನುಘಟಿಗಳು ಶುಭ ಕೋರಿದ್ದಾರೆ.

ಉಪೇಂದ್ರ-ರಚಿತಾ ರಾಮ್ ಜೋಡಿಯ 'ಐ ಲವ್ ಯು' ಚಿತ್ರವನ್ನು ಆಂಧ್ರದಲ್ಲಿ ನೋಡಿದ ಪ್ರೇಕ್ಷಕರೊಬ್ಬರು ಟ್ವಿಟ್ ಮಾಡಿ ತಮ್ಮ ಅನಿಸಕೆಯನ್ನು ಹಂಚಿಕೊಂಡಿದ್ದಾರೆ.

ಇದೀಗ, ಸಾಕಷ್ಟು ಮಂದಿ ಸಿನಿಮಾ ಅಭಿಮಾನಿಗಳು ಈ ಚಿತ್ರದ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಉಪೇಂದ್ರ-ರಚಿತಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌