ಆ್ಯಪ್ನಗರ

ಡಬ್ಬಿಂಗ್‌ಗೆ ರಿಸ್ಕ್‌ ತೆಗೆದುಕೊಂಡ ವಸಿಷ್ಠ

ಮೋಷನ್‌ ಪೋಸ್ಟರ್‌ನಿಂದಾಗಿ ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿದೆ ವಸಿಷ್ಠ ಸಿಂಹ ನಟನೆಯ 'ಕಾಲಚಕ್ರ' ಚಿತ್ರ. ಈ ಸಿನಿಮಾದಲ್ಲಿ ವಸಿಷ್ಠ ಎರಡು ಶೇಡ್‌ ಇರುವಂಥ ಪಾತ್ರ ಮಾಡಿದ್ದು, ಓಲ್ಡ್‌ ಮ್ಯಾನ್‌ ಪಾತ್ರಕ್ಕಾಗಿ ವಿಶಿಷ್ಟ ರೀತಿಯಲ್ಲಿ ಡಬ್ಬಿಂಗ್‌ ಮಾಡಿದ್ದಾರೆ.

Vijaya Karnataka 29 May 2018, 11:11 am
*ಶರಣು ಹುಲ್ಲೂರು
Vijaya Karnataka Web vasista


ಸಿನಿಮಾಗಾಗಿ ಎಂಥ ರಿಸ್ಕ್‌ ತಗೆದುಕೊಳ್ಳಲು ರೆಡಿಯಾಗುತ್ತಾರೆ ನಟರು. ಅಂತಹ ಕಲಾವಿದರ ಸಾಲಿಗೆ ಹೊಸ ಸೇರ್ಪಡೆ ವಸಿಷ್ಠ ಸಿಂಹ. ಸದ್ಯ ಇವರು 'ಕಾಲಚಕ್ರ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ವಸಿಷ್ಠ ಎರಡು ಶೇಡ್‌ ಇರುವಂಥ ಪಾತ್ರ ನಿರ್ವಹಿಸುತ್ತಿದ್ದಾರೆ. ಒಂದು ಶೇಡ್‌ನ ಡಬ್ಬಿಂಗ್‌ಗಾಗಿ ರಿಸ್ಕ್‌ ತಗೆದುಕೊಂಡಿದ್ದಾರೆ.

ಅದು ಹಿರಿಯ ವಯಸ್ಸಿನ ಪಾತ್ರ. ಈ ಪಾತ್ರಕ್ಕೆ ಕೊರಳಿಗೆ ಬಟ್ಟೆ ಕಟ್ಟಿಕೊಂಡು ಅವರು ಡಬ್‌ ಮಾಡಿದ್ದಾರೆ. ಈ ಹಿಂದೆ ಇಂಥದ್ದೊಂದು ಪ್ರಯೋಗವನ್ನು ಆಪ್ತಮಿತ್ರ ಚಿತ್ರಕ್ಕಾಗಿ ಡಾ.ವಿಷ್ಣುವರ್ಧನ್‌ ಮಾಡಿದ್ದರು. ಇದು ತುಂಬಾ ರಿಸ್ಕಿ ಡಬ್ಬಿಂಗ್‌ ಸ್ಟೈಲ್‌ ಎನ್ನುತ್ತಾರೆ ನಿರ್ದೇಶಕ ಸುಮನ್‌ ಕ್ರಾಂತಿ.

'ಈ ಸಿನಿಮಾದಲ್ಲಿ ವಸಿಷ್ಠ ಎರಡು ಶೇಡ್‌ ಇರುವ ಪಾತ್ರ ಮಾಡಿದ್ದಾರೆ. ಒಂದು ಮಧ್ಯ ವಯಸ್ಕನದ್ದಾಗಿದ್ದರೆ, ಮತ್ತೊಂದು ಆ್ಯಂಗ್ರಿ ಓಲ್ಡ್‌ ಮ್ಯಾನ್‌. ಎರಡರ ವ್ಯತ್ಯಾಸ ಕಾಣಿಸಲು ಏನಾದರೂ ಒಂದು ಸರ್ಕಸ್‌ ಮಾಡಲೇಬೇಕಿತ್ತು. ಕೊರಳಿಗೆ ಬಟ್ಟೆ ಕಟ್ಟಿಕೊಂಡು ಡಬ್‌ ಮಾಡುವ ಐಡಿಯಾ ಬಂತು. ಮೊದಲೇ ವಸಿಷ್ಠ ವಾಯ್ಸ್‌ ಖಡಕ್‌. ಹಾಗಾಗಿ ಪಾತ್ರಕ್ಕೆ ಮತ್ತಷ್ಟು ಶಕ್ತಿ ಬಂತು' ಎನ್ನುವುದು ನಿರ್ದೇಶಕರ ಮಾತು.

ಸಿನಿಮಾದ ಸ್ಟೋರಿಯೇ ವಿಶೇಷವಾಗಿದೆ. ಸಾಮಾನ್ಯ ಮನುಷ್ಯನೊಬ್ಬನ ಜೀವನದಲ್ಲಿ ನಡೆಯುವ ರೋಚಕ ಘಟನೆಗಳನ್ನು ಸಿನಿಮಾ ಮಾಡಲಾಗಿದೆ. ಅಲ್ಲದೇ, ಕೋಪದ ಕೈಗೆ ಬುದ್ಧಿ ಕೊಟ್ಟಾಗ ಏನೆಲ್ಲ ಯಡವಟ್ಟು ಆಗುತ್ತದೆಯೋ ಅದರಲ್ಲಿ ಒಂದು ಕ್ರೈಂ ಎಳೆಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌