ಆ್ಯಪ್ನಗರ

ಸ್ಯಾಂಡಲ್‍ವುಡ್‍ಗೆ ಚರಣ್ ರಾಜ್ ಪುತ್ರ ತೇಜ್ ರಾಜ್

ಚರಣ್ ರಾಜ್ ಪುತ್ರ ತೇಜ್ ರಾಜ್ ಸ್ಯಾಂಡಲ್‍ವುಡ್‌ಗೆ ಅಡಿಯಿಡಲು ಮುಂದಾಗಿದ್ದಾರೆ. ಈಗಾಗಲೆ ಹಲವಾರು ಕಥೆಗಳನ್ನು ಕೇಳಿರುವ ಚರಣ್ ರಾಜ್, ಶೀಘ್ರದಲ್ಲೇ ತಮ್ಮ ಪುತ್ರನ ಸಿನಿಮಾ ಘೋಷಿಸುವುದಾಗಿ ಹೇಳಿದ್ದಾರೆ.

TIMESOFINDIA.COM 11 Mar 2019, 6:05 pm
'ರಾಜಾಹುಲಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ತಂದೆ ಪಾತ್ರ ಪೋಷಿಸಿದ್ದ ಚರಣ್ ರಾಜ್ ಬಳಿಕ 'ರಥಾವರ' ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಚರಣ್ ರಾಜ್ ತಮ್ಮ ಕುಡಿ ತೇಜ್ ರಾಜ್‌ರನ್ನು ಸ್ಯಾಂಡಲ್‍ವುಡ್‌ಗೆ ಪರಿಚಯಿಸಲು ಮುಂದಾಗಿದ್ದಾರೆ.
Vijaya Karnataka Web charan-raj


ಈ ಸಂಬಂಧ ಅವರು ಪತ್ರಿಕಾಗೋಷ್ಠಿ ಕರೆದು ತಮ್ಮ ಪುತ್ರನನ್ನು ಮಾಧ್ಯಮಗಳಿಗೆ ಪರಿಚಯಿಸಿದರು. ತೇಜ್ ರಾಜ್ ಬಣ್ಣ ಹಚ್ಚುತ್ತಿರುವುದು ಇದೇ ಮೊದಲಲ್ಲ. ಈಗಾಗಲೆ '90 ಎಂಲ್' ಎಂಬ ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ಮೆಚ್ಚುಗೆಗೂ ಪಾತ್ರವಾಗಿದೆ. ಕಾಲಿವುಡ್‌ನಲ್ಲಿ ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆಯಂತೆ. ಈಗ ಸ್ಯಾಂಡಲ್‌ವುಡ್‌ಗೂ ಅಡಿಯಿಡುವ ಸೂಚನೆ ನೀಡಿದ್ದಾರೆ.

ತಮ್ಮ ಪುತ್ರನಿಗಾಗಿ ಚರಣ್ ರಾಜ್ ಈಗಾಗಲೆ ಹಲವಾರು ಕಥೆಗಳನ್ನು ಕೇಳಿದ್ದಾರಂತೆ. ಶೀಘ್ರದಲ್ಲೇ ಕನ್ನಡ ಸಿನಿಮಾ ಘೋಷಿಸುವುದಾಗಿ ಹೇಳಿದ್ದಾರೆ ಚರಣ್ ರಾಜ್. ಸ್ಯಾಂಡಲ್‍ವುಡ್ ಮೂಲಕವೇ ತಮ್ಮ ಪುತ್ರನನ್ನು ಬೆಳ್ಳಿಪರದೆಗೆ ಪರಿಚಯಿಸುವ ಪ್ಲಾನ್ ಮಾಡಿದ್ದರು ಚರಣ್ ರಾಜ್, ಆದರೆ ಅಚಾನಕ್ ಆಗಿ ತಮಿಳು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

ತೇಜ್ ಚಿನ್ನೈನಲ್ಲೇ ನೆಲೆಸಿದ್ದಾರೆ. ಹಾಗಾಗಿ ಕನ್ನಡ ಅಷ್ಟೊಂದು ಸ್ಪಷ್ಟವಾಗಿ ಬರುವುದಿಲ್ಲ. ಸಿನಿಮಾ ಮುಗಿಯುವುದರ ಸ್ಪಷ್ಟ ಕನ್ನಡ ಕಲಿಯುತ್ತೇನೆ ಎಂದಿದ್ದಾರೆ ತೇಜ್. ಖ್ಯಾತ ನಿರ್ದೇಶಕ ದಿವಂಗತ ಬಾಲಚಂದರ್ ಅವರ ಗರಡಿಯಲ್ಲಿ ತೇಜ್ ರಾಜ್ ಪಳಗಿದ್ದಾರೆ. ಹಾಗಾಗಿ ಸ್ಯಾಂಡಲ್‍ವುಡ್‌ನಲ್ಲಿ ಹೊಸ ಭರವಸೆ ಮೂಡಿಸುತ್ತಾರಾ ಎಂಬುದು ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌