ಆ್ಯಪ್ನಗರ

ಡ್ಯಾನ್ಸರ್‌ ಜ್ಯೋತಿ ಲಕ್ಷ್ಮಿ ಇನ್ನಿಲ್ಲ

ಹಿರಿಯ ನಟಿ, ನರ್ತಕಿ ಜ್ಯೋತಿ ಲಕ್ಷ್ಮಿ (63) ಚೆನ್ನೈನಲ್ಲಿ ಮಂಗಳವಾರ ನಿಧನರಾದರು.

ತಮಿಳು ಸಮಯಂ 9 Aug 2016, 3:38 pm
ಚೆನ್ನೈ: 70, 80ರ ದಶಕದ ನಟಿ, ನರ್ತಕಿ ಜ್ಯೋತಿ ಲಕ್ಷ್ಮಿ (63) ಚೆನ್ನೈನಲ್ಲಿ ಮಂಗಳವಾರ ನಿಧನರಾದರು.
Vijaya Karnataka Web veteran actress jyothi lakshmi passes away
ಡ್ಯಾನ್ಸರ್‌ ಜ್ಯೋತಿ ಲಕ್ಷ್ಮಿ ಇನ್ನಿಲ್ಲ


ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜ್ಯೋತಿ ಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯ ಒಟ್ಟು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಜ್ಯೋತಿ ಲಕ್ಷ್ಮಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದರು.

ಸಾಹುಕಾರ, ಪರೋಪಕಾರಿ, ರಕ್ತ ಕಣ್ಣೀರು, ಕಳ್ಳ ಏಜೆಂಟ್‌ 000, ತಾಳಿಯ ಭಾಗ್ಯ, ಊರಿಗೆ ಉಪಕಾರಿ, ಸಿಂಹಸ್ವಪ್ನ ಚಿತ್ರಗಳಲ್ಲಿ ಜ್ಯೋತಿ ಲಕ್ಷ್ಮಿ ಅಭಿನಯದ ಪ್ರಮುಖ ಕನ್ನಡ ಚಿತ್ರಗಳು. ಡ್ಯಾನ್ಸ್‌ ನಂಬರ್‌ಗಳಲ್ಲಿ ನಟಿಯರು ಕಾಣಿಸಿಕೊಳ್ಳದ ಕಾಲದಲ್ಲಿ ಜ್ಯೋತಿ ಲಕ್ಷ್ಮಿ ಅವರ ಕ್ಯಾಬರೆ ನೃತ್ಯ ಚಿತ್ರದ ಪ್ರಮುಖ ಆಕರ್ಷಣೆ ಆಗಿತ್ತು. ನಿರ್ದೇಶಕರು ಅವರ ಕಾಲ್‌ ಶೀಟ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದರು. 1980ರ ದಶಕದಲ್ಲಿ ಚಿತ್ರದಲ್ಲಿ ಜ್ಯೋತಿ ಲಕ್ಷ್ಮಿಯ ಡ್ಯಾನ್ಸ್‌ ನಂಬರ್‌ ಕಡ್ಡಾಯ ಎನ್ನುವಂಥ ಪರಿಸ್ಥಿತಿ ಇತ್ತು. 70 ಹಾಗೂ 80ರ ದಶಕದಲ್ಲಿ ಅವರಿಗಾಗಿಯೇ ಐಟಂ ಹಾಡುಗಳನ್ನು ಬರೆಯುತ್ತಿದ್ದರು.

'1963 'ಪೆರಿಯಾ ಇಡತು ಪೆಣ್‌' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜ್ಯೋತಿ ಲಕ್ಷ್ಮಿ, ಸೋದರಿ ಜಯಮಾಲಿನಿ ಚಿತ್ರರಂಗಕ್ಕೆ ಬಂದ ನಂತರ ನೇಪಥ್ಯಕ್ಕೆ ಸರಿದಿದ್ದರು. ಜ್ಯೋತಿ ಲಕ್ಷ್ಮಿ ಅವರ ಪುತ್ರಿ ಜ್ಯೋತಿ ಮೀನಾ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಚೆನ್ನೈನ ಕಣ್ಣಮ್ಮಪೇಟೈ ನ ಚಿತಾಗಾರದಲ್ಲಿ ಜ್ಯೋತಿ ಲಕ್ಷ್ಮಿ ಅವರ ಅಂತ್ಯ ಕ್ರಿಯೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌