ಆ್ಯಪ್ನಗರ

'ಆಶಾ ಸುಂದರಿ' ಖ್ಯಾತಿಯ ನಟಿ ಕೃಷ್ಣಕುಮಾರಿ ನಿಧನ

ಒಂದು ಕಾಲದ ಅಭಿನೇತ್ರಿ, ಖ್ಯಾತ ನಟಿ ಕೃಷ್ಣಕುಮಾರಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೃಷ್ಣಕುಮಾರಿ ಅವರು ಜನಿಸಿದ್ದು 1933ರ ಮಾರ್ಚ್‌ 6ರಂದು ಪಶ್ಚಿಮ ಬಂಗಾಳದಲ್ಲಿ.

Vijaya Karnataka Web 24 Jan 2018, 11:46 am
ಒಂದು ಕಾಲದ ಅಭಿನೇತ್ರಿ, ಖ್ಯಾತ ನಟಿ ಟಿ ಕೃಷ್ಣಕುಮಾರಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ರಕ್ತದ ತೊಂದರೆಯಿಂದ ಬಳಲುತ್ತಿದ್ದರು. ಕೃಷ್ಣಕುಮಾರಿ ಅವರು ಜನಿಸಿದ್ದು 1933ರ ಮಾರ್ಚ್ 6ರಂದು ಪಶ್ಚಿಮ ಬಂಗಾಳದಲ್ಲಿ. ಆದರೆ ಅವರು ಗುರುತಿಸಿಕೊಂಡಿದ್ದು ತೆಲುಗು, ಕನ್ನಡ ಹಾಗೂ ತಮಿಳು ಚಿತ್ರಗಳ ಮೂಲಕ.
Vijaya Karnataka Web krishna-kumari




1951ರಲ್ಲಿ ತೆರೆಕಂಡ 'ನವ್ವಿತೆ ನವರತ್ನಾಲು' ಚಿತ್ರದ ಮೂಲಕ ಅವರು ತೆಲುಗು ಬೆಳ್ಳಿಪರದೆಗೆ ಅಡಿಯಿಟ್ಟರು. ಆ ಬಳಿಕ ಸುಮಾರು 110 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಭಕ್ತ ಕನಕದಾಸ (1960), ಜಲದುರ್ಗ, ಆಶಾಸುಂದರಿ (1960), ದಶಾವತಾರ (1960), ಶ್ರೀಶೈಲ ಮಹಾತ್ಮೆ (1961), ಸ್ವರ್ಣಗೌರಿ (1962), ಭಕ್ತ ಕಬೀರ (1962), ಚಂದ್ರ ಕುಮಾರ, ಸತಿ ಸಾವಿತ್ರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ದಕ್ಷಿಣದ ಟಾಪ್ ಹೀರೋಗಳಾದ ಡಾ.ರಾಜ್ ಕುಮಾರ್, ಅಕ್ಕಿನೇನಿ ನಾಗೇಶ್ವರ್ ರಾವ್, ಎನ್ ಟಿ ರಾಮಾರಾವ್, ಶಿವಾಜಿ ಗಣೇಶನ್, ಕಾಂತಾರಾವ್, ಜಗ್ಗಯ್ಯ ಸೇರಿದಂತೆ ಹಲವರ ಜತೆ ನಟಿಸಿದ ಖ್ಯಾತಿ ಕೃಷ್ಣಕುಮಾರಿ ಅವರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌