ಆ್ಯಪ್ನಗರ

ರಷ್ಯಾದಲ್ಲಿ ವಿಕ್ಟರಿ ಟೀಮ್

ಶರಣ್‌ ನಟನೆಯ ವಿಕ್ಟರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿತ್ತು. ಈಗ 'ವಿಕ್ಟರಿ 2' ಸಿನಿಮಾ ರೆಡಿಯಾಗುತ್ತಿದೆ. ಹರಿ ಸಂತು ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಕಲರ್‌ಫುಲ್‌ ಹಾಡಿನ ಶೂಟಿಂಗ್‌ ರಷ್ಯಾದಲ್ಲಿ ನಡೆದಿದೆ.

Vijaya Karnataka 27 Aug 2018, 12:02 pm
ಶರಣ್‌ ನಟನೆಯ ವಿಕ್ಟರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿತ್ತು. ಈಗ 'ವಿಕ್ಟರಿ 2' ಸಿನಿಮಾ ರೆಡಿಯಾಗುತ್ತಿದೆ. ಹರಿ ಸಂತು ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಕಲರ್‌ಫುಲ್‌ ಹಾಡಿನ ಶೂಟಿಂಗ್‌ ರಷ್ಯಾದಲ್ಲಿ ನಡೆದಿದೆ. 'ಪ್ಲೀಸ್‌ ಟ್ರಸ್ಟು, ನಾನು ಚೀಪ್‌ ಅಂಡ್‌ ಬೆಸ್ಟು' ಹಾಡಿಗೆ ಶರಣ್‌ ಮತ್ತು ಅಸ್ಮಿತಾ ಸೂದ್‌ ಹೆಜ್ಜೆ ಹಾಕಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ರಷ್ಯಾದ ಬಾಕು ಸಿಟಿಯಲ್ಲಿ ಸೆರೆ ಹಿಡಿಯಲಾಗಿದೆ.
Vijaya Karnataka Web victory


'ರಷ್ಯಾದಲ್ಲಿ ಶೂಟಿಂಗ್‌ ಮಾಡಿರುವ ಹಾಡಿನಲ್ಲಿ ಅನೇಕ ವಿಶೇಷಗಳಿವೆ. ಕರ್ನಾಟಕ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥ ಅಂಶಗಳಿವೆ. ವಿದೇಶದಲ್ಲಿ ಚಿತ್ರೀಕರಣವಾದರೂ, ಹುಲಿ ಕುಣಿತ, ಯಕ್ಷಗಾನ ಹೀಗೆ ಜಾನಪದದ ಅನೇಕ ಕಲಾಪ್ರಕಾರಗಳನ್ನು ಬಳಸಿಕೊಂಡಿದ್ದೇವೆ. ಎರಡು ವಾರಗಳ ಕಾಲ ಇಡೀ ಟೀಮ್‌ ರಷ್ಯಾದಲ್ಲಿ ಬೀಡುಬಿಟ್ಟು ಶೂಟ್‌ ಮಾಡಿದ್ದೇವೆ' ಅಂತಾರೆ ನಿರ್ದೇಶಕರು.

ಈವರೆಗೂ ಹೊಸ ಬಗೆಯ ಸಿನಿಮಾಗಳನ್ನು ಮಾಡಿರುವ ತರುಣ್‌ ಶಿವಪ್ಪ ಈ ಚಿತ್ರಕ್ಕಾಗಿ ಹಣ ಹೂಡಿದ್ದಾರೆ. ಹರಿ ಸಂತು ಮತ್ತು ತರುಣ್‌ ಕಾಂಬಿನೇಷನ್‌ನ ಈ ಸಿನಿಮಾ ತನ್ನ ಮೇಕಿಂಗ್‌ನಿಂದಾಗಿಯೇ ಈಗಾಗಲೇ ಕ್ರೇಜ್‌ ಕ್ರಿಯೇಟ್‌ ಮಾಡಿರುವುದು ವಿಶೇಷ. ಶರಣ್‌ ಈ ಸಿನಿಮಾದಲ್ಲಿ ಮತ್ತೊಂದು ವಿಭಿನ್ನ ಪಾತ್ರ ಮಾಡಿದ್ದು, ಇದೊಂದು ಪಕ್ಕಾ ಮನರಂಜನೆಯ ಸಿನಿಮಾವಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌