ಆ್ಯಪ್ನಗರ

ಹಾರ್ಮೋನಿಯಂ ಕಲಿಯುತ್ತಿರುವ ನಟಿ ವಿದ್ಯಾ ಬಾಲನ್

ಬಾಲಿವುಡ್ ನಟಿ ವಿದ್ಯಾ ಬಾಲನ್ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಕಾಳಜಿ ತೋರುತ್ತಾರೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. ಇದೀಗ ಅವರು ಟಾಲಿವುಡ್‍ನಲ್ಲಿ ನಂದಮೂರಿ ತಾರಕ ರಾಮಾರಾವ್ (ಎನ್‍ಟಿಆರ್) ಚಿತ್ರದಲ್ಲಿ ಅವರ ಪತ್ನಿ ಬಸವತಾರಕಂ ಪಾತ್ರವನ್ನು ಪೋಷಿಸುತ್ತಿದ್ದಾರೆ.

Mumbai Mirror 27 Jul 2018, 2:47 pm
ಬಾಲಿವುಡ್ ನಟಿ ವಿದ್ಯಾ ಬಾಲನ್ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಕಾಳಜಿ ತೋರುತ್ತಾರೆ ಎಂಬುದಕ್ಕೆ ಇಲ್ಲಿದೆ ನಿದರ್ಶನ. ಇದೀಗ ಅವರು ಟಾಲಿವುಡ್‍ನಲ್ಲಿ ನಂದಮೂರಿ ತಾರಕ ರಾಮಾರಾವ್ (ಎನ್‍ಟಿಆರ್) ಚಿತ್ರದಲ್ಲಿ ಅವರ ಪತ್ನಿ ಬಸವತಾರಕಂ ಪಾತ್ರವನ್ನು ಪೋಷಿಸುತ್ತಿದ್ದಾರೆ.
Vijaya Karnataka Web vidya-balan


ತೆಲುಗಿನ ಕ್ರಿಷ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಬಾಲಕೃಷ್ಣ ತಮ್ಮ ತಂದೆಯ ಪಾತ್ರವನ್ನು ಪೋಷಿಸುತ್ತಿದ್ದಾರೆ. ಎನ್‍ಟಿಆರ್ ಪತ್ನಿ ಪಾತ್ರಕ್ಕಾಗಿ ವಿದ್ಯಾ ಬಾಲನ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಇದೀಗ ಸಂಗೀತ ನಿರ್ದೇಶಕ ನಿತಿನ್ ಬಳಿ ಹಾರ್ಮೋನಿಯಂ ಸಹ ಕಲಿತು ಆ ಪಾತ್ರಕ್ಕೆ ನೈಜ ಸ್ಪರ್ಶ ನೀಡಿದ್ದಾರಂತೆ.

"ಚಿತ್ರದ ಎರಡು ಹಾಡುಗಳಲ್ಲಿ ಹಾರ್ಮೋನಿಯಂ ನುಡಿಸುವ ಸನ್ನಿವೇಶಗಳು ಬರುತ್ತವೆ. ಆ ಸನ್ನಿವೇಶಕ್ಕೆ ಜೀವ ತುಂಬಲು ಸ್ವತಃ ಅವರೇ ಹಾರ್ಮೋನಿಯಂ ಕಲಿತಿದ್ದಾರೆ. ಇವರ ಕುಟುಂಬದ ಎಲ್ಲರಿಗೂ ಸಂಗೀತ ಎಂದರೆ ತುಂಬಾ ಇಷ್ಟ. ಹಾಗಾಗಿ ಹಾರ್ಮೋನಿಯಂ ಕಲಿಸಲು ನನ್ನನ್ನು ಸಂಪರ್ಕಿಸಿದರು" ಎಂದಿದ್ದಾರೆ ಸಂಗೀತ ನಿರ್ದೇಶಕ ನಿತಿನ್.

ನಿತಿನ್ ಈ ಹಿಂದೆ ಆರ್‌ ಡಿ ಬರ್ಮನ್, ಜತಿನ್-ಲಲಿತ್ ಮತ್ತು ಅನು ಮಾಲಿಕ್ ಬಳಿ ಕೆಲಸ ಮಾಡಿದ್ದಾರೆ. ಜುಲೈ ನಡುವೆ ಒಟ್ಟು ನಾಲ್ಕು ಕ್ಲಾಸ್ ತಗೊಂಡಿದ್ದೆ, ತುಂಬಾ ವೇಗವಾಗಿ ಹಾರ್ಮೋನಿಯಂ ಕಲಿತರು. ವಿಶೇಷ ಎಂದರೆ ಪಾತ್ರ ಮುಗಿದ ಬಳಿಕವೂ ಸಂಗೀತವನ್ನು ಮುಂದುವರೆಸುತ್ತಿದ್ದಾರೆ. ಸಂಗೀತ ಎಂದರೆ ತುಂಬಾ ಇಷ್ಟ ಅವರಿಗೆ. ಇತ್ತೀಚೆಗೆ ಹೊಸ ಹಾರ್ಮೋನಿಯಂ ಸಹ ಖರೀದಿಸಿದರು. ಅವರಿಗೆ ಚೆನ್ನಾಗಿ ಹಾಡಲು ಸಹ ಬರುತ್ತದೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ ಎನ್ನುತ್ತಾರೆ ನಿತಿನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌