ಆ್ಯಪ್ನಗರ

ಬಾಕ್ಸಿಂಗ್ ಅಖಾಡಕ್ಕೆ ಧುಮುಕಿದ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್‌ಕುಮಾರ್

ಕನ್ನಡ ನೆಲದಲ್ಲಿ ಕ್ರೀಡೆ ಆಧಾರಿತ ಚಿತ್ರ 'ಪೈಲ್ವಾನ್' ತೆರೆ ಕಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗ ಇನ್ನೊಂದು ಚಿತ್ರದಲ್ಲಿ ಕ್ರೀಡಾ ಆಧಾರಿತ ಕಥೆಯಿರಲಿದೆಯಂತೆ. ಆ ಚಿತ್ರದ ಹೀರೋ ಯಾರು? ಕಥೆಯ ಎಳೆ ಏನು ಅನ್ನೋದು ಇಲ್ಲಿದೆ, ಓದಿ

Vijaya Karnataka Web 16 Sep 2019, 2:40 pm
ಇತ್ತೀಚೆಗಷ್ಟೇ ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರವೊಂದು ಸೆಟ್ಟೇರಿತ್ತು. ಈ ಚಿತ್ರಕ್ಕೆ ಅನುಷಾ ರಂಗನಾಥ್ ನಾಯಕಿ. ಆದರೆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿರಲಿಲ್ಲ. ಈಗ 'ಟೆನ್' ಎಂಬ ಹೆಸರು ಚಿತ್ರದ ಶೀರ್ಷಿಕೆಗೆ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಬಾಕ್ಸಿಂಗ್ ಸುತ್ತ ಈ ಸಿನಿಮಾ ಕಥೆ ಇರಲಿದೆ.
Vijaya Karnataka Web vinay


ವಿನಯ್ ರಾಜ್‌ ಕುಮಾರ್ ಬಾಕ್ಸಿಂಗ್ ಪಾತ್ರ ಮಾಡಲು 5 ತಿಂಗಳುಗಳಿಂದ ತಯಾರಾಗುತ್ತಿದ್ದಾರೆ. ಜೊತೆಗೆ ಸ್ಟ್ರಿಕ್ಟ್ ಡಯೆಟ್ ಮಾಡುತ್ತಿದ್ದಾರೆ. ಹೊಸ ಗೆಟಪ್‌ನಲ್ಲಿ ವಿನಯ್ ತೆರೆ ಮೇಲೆ ಕಾಣಿಸಿಕೊಳ್ಳುವುದಂತೂ ಪಕ್ಕಾ. ಈಗಾಗಲೇ 5ದಿನದ ಶೂಟಿಂಗ್ ಮಾಡಲಾಗಿದೆ. ನಿರ್ದೇಶಕ ಕರಮ್ ಚಾವ್ಲಾ ಬಾಕ್ಸಿಂಗ್ ದೃಶ್ಯಗಳನ್ನು ಸದ್ಯದಲ್ಲೇ ಸೆರೆ ಹಿಡಿಯಲಿದ್ದಾರೆ. ಎರಡು ಶೇಡ್‌ನಲ್ಲಿ ವಿನಯ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಬೇರೆ ಯಾವ ಚಿತ್ರಕ್ಕೂ ಸದ್ಯ ಒಪ್ಪಿಗೆ ನೀಡಿಲ್ಲ. ಗೋಪಾಲಕೃಷ್ಣ ದೇಶಪಾಂಡೆ ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.


ಬಾಕ್ಸಿಂಗ್‌ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10 ರವರೆಗೂ ಕೌಂಟ್ ಮಾಡುತ್ತಾರೆ. ನೆಲಕ್ಕೆ ಬಿದ್ದಿರುವ ಸ್ಪರ್ಧಿ ಅಷ್ಟರೊಳಗೆ ಎದ್ದು ನಿಂತು ಮತ್ತೆ ಕಾದಾಡಲಯ ಸಜ್ಜಾಗಲಿಲ್ಲ ಎಂದರೆ ಆತ ಸೋತ ಎಂದೇ ಅರ್ಥ. ಹಾಗಾಗಿ ಇಲ್ಲಿ '10' ತುಂಬ ಮಹತ್ವವಾಗುತ್ತದೆ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಣ ಹೂಡುತ್ತಿದ್ದಾರೆ. ಆದರೆ ಈ ಟೈಟಲ್ ಇವರದ್ದಾಗಿಲ್ಲ. ಬೇರೆಯವರ ಹತ್ತಿರ ಇರುವ ಟೈಟಲ್‌ನ್ನು ಇವರು ಪಡೆದುಕೊಳ್ಳಬೇಕಿದೆ. ಒಂದು ವೇಳೆ ಈ ಟೈಟಲ್ ಸಿಗದಿದ್ದ ಪಕ್ಷದಲ್ಲಿ 10 ಅಕ್ಕ ಪಕ್ಕ ಬೇರೆ ಶಬ್ದ ಹಾಕಿ ಟೈಟಲ್ ನಿಗದಿ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ.


2020ರ ಮೇ ತಿಂಗಳ ಆಸು ಪಾಸಿನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವುದು ಚಿತ್ರತಂಡದ ಯೋಜನೆ.
ವಿನಯ್ ರಾಜ್‌ಕುಮಾರ್ ನಟನೆಯ 'ಅನಂತು vs ನುಸ್ರತ್' ಸಿನಿಮಾ ಕೊನೆಯದಾಗಿ ತೆರೆ ಕಂಡಿತ್ತು. 'ಗ್ರಾಮಾಯಣ, ಆರ್ ದಿ ಕಿಂಗ್' ಸಿನಿಮಾಗಳಲ್ಲಿ ವಿನಯ್ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌