ಆ್ಯಪ್ನಗರ

ಯಾನದಲ್ಲಿ ನನ್ನದು ಫೈರ್‌ಬಾಂಬ್‌ ಹುಡುಗಿ ಪಾತ್ರ ಎಂದ ವೈನಿಧಿ

ವಿಜಯಲಕ್ಷ್ಮಿ ಸಿಂಗ್‌ ನಿರ್ದೇಶನದ ಯಾನಾ ಚಿತ್ರದಲ್ಲಿ ಅವರ ಪುತ್ರಿ ವೈನಿಧಿ ಫೈರ್‌ ಬಾಂಬ್‌ನಂಥ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವಾರ ಚಿತ್ರ ರಿಲೀಸ್‌ ಆಗಲಿದ್ದು, ವೈನಿಧಿ ಥ್ರಿಲ್‌ನಲ್ಲಿದ್ದಾರೆ..

Vijaya Karnataka Web 4 Jul 2019, 5:00 am
ಜೈಜಗದೀಶ್‌ ಅವಳಿ ಪುತ್ರಿಯರಲ್ಲಿ ಒಬ್ಬರಾದ ವೈನಿಧಿ 'ಯಾನ' ಚಿತ್ರದಲ್ಲಿ ತಮ್ಮ ಇಬ್ಬರು ಸಹೋದರಿಯರ ಜತೆ ನಟಿಸಿದ್ದು, ಇದು ಬಹಳ ಎಕ್ಸೈಟಿಂಗ್‌ ವಿಚಾರ ಎಂದಿದ್ದಾರೆ.
Vijaya Karnataka Web vainidhi4


ಅಕ್ಕ ವೈಭವಿ ಮತ್ತು ಟ್ವಿನ್‌ ಸಿಸ್ಟರ್‌ ವೈಸಿರಿ ಜತೆ ವೈನಿಧಿ ತೆರೆ ಹಂಚಿಕೊಂಡಿದ್ದಾರೆ. ಒಂದೇ ಚಿತ್ರದಲ್ಲಿ ಮೂವರೂ ಒಟ್ಟಿಗೆ ನಟಿಸುತ್ತೇವೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ಅವರು. 'ನಾವು ಹಿಂದೆ ಯಾವುದಾದ್ರೂ ಸಿನಿಮಾದಲ್ಲಿ ಮೂವರು ಹೀರೊಯಿನ್‌ಗಳಿದ್ದರೆ ಇದು ನಾನು ಅದು ನೀನು ಅಂತ ಆ ಕ್ಯಾರೆಕ್ಟರ್‌ಗಳನ್ನು ಹಂಚಿಕೊಂಡು ಸಿನಿಮಾ ಎಂಜಾಯ್‌ ಮಾಡುತ್ತಿದ್ದೆವು. ಆದರೆ, ಎಂದೂ ಒಟ್ಟಿಗೆ ನಟಿಸ್ತೀವಿ ಎಂದುಕೊಂಡಿರಲಿಲ್ಲ. ಇದು ಬಹಳ ಎಕ್ಸೈಟಿಂಗ್‌ ವಿಚಾರ' ಎಂದಿದ್ದಾರೆ ಅವರು.

'ಈ ಚಿತ್ರದಲ್ಲಿ ನಾನು ನಂದಿನಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಅವಳು ಫೈರ್‌ ಬಾಂಬ್‌ ಇದ್ದ ಹಾಗೆ. ಎಲ್ಲೇ ಇದ್ದರೂ ಅವಳೇ ರೂಲ್‌ ಮಾಡ್ತಾಳೆ. ಕಾಲೇಜಿನಲ್ಲೂ ಅಷ್ಟೆ. ನನ್ನ ಜತೆ ಅಭಿಷೇಕ್‌ ಅವರು ಯುವರಾಜ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಮಾಡೆಲ್‌. ನಮ್ಮಿಬ್ಬರ ಕಾಂಬಿನೇಷನ್‌ ಚೆನ್ನಾಗಿದೆ. ಹಾಗೆಯೇ ನಾವು ಒಳ್ಳೆಯ ಫ್ರೆಂಡ್ಸ್‌ಆದೆವು. ಇಬ್ಬರೂ ಫೋನ್‌ನಲ್ಲಿ ಡಿಸ್ಕಸ್‌ ಮಾಡಿಕೊಂಡು ಆಕ್ಟ್ ಮಾಡ್ತಿದ್ವಿ. ಅವರಿಗೂ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ' ಎಂದಿದ್ದಾರೆ ಅವರು.

'ಇಡೀ ಚಿತ್ರವೇ ಒಂದು ಯಾನ. ಹುಡುಗ ಹುಡುಗಿಯರು ಫನ್‌ ಮಾಡ್ತಾರೆ, ಜರ್ನಿ ಮಾಡ್ತಾರೆ, ಏನನ್ನೋ ಕಲೀತಾರೆ, ಜೀವನದಲ್ಲಿ ಅಳವಡಿಸಿಕೊಳ್ತಾರೆ' ಎಂದು ವೈನಿಧಿ ತಿಳಿಸಿದ್ದಾರೆ.

ಚಿತ್ರದ ಲಿರಿಕಲ್‌ ವಿಡಿಯೋ ರಿಲೀಸ್‌ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ರಿಲೀಸ್‌ ಆಗುತ್ತಿದೆ. 'ಬಹಳ ಎಕ್ಸೈಟ್‌ ಆಗಿದ್ದೇನೆ. ಇದಕ್ಕಿಂತ ಉತ್ತಮ ಅವಕಾಶ ನಮಗೆ ಸಿಗೋದು ಸಾಧ್ಯವಿರಲಿಲ್ಲ. ನಿರ್ಮಾಪಕರಾದ ಹರೀಶ್‌ ಶೇರಿಗಾರ್‌, ಅಮ್ಮ ಅಪ್ಪನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಲದು' ಎಂದಿದ್ದಾರೆ.

-----

ನಮ್ಮಮ್ಮನ ಬಗ್ಗೆ ನಮಗೆ ಬಹಳ ಕಾನ್ಫಿಡೆನ್ಸ್‌. ನಾವೆಲ್ಲಾ ಬೇರೆ ಬೇರೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತೀವಿ ಎಂದುಕೊಂಡಿದ್ದೆವು. ಆದರೆ, ಅಮ್ಮ ಯಾನದಲ್ಲಿ ನೀವು ಮೂವರೂ ಮಾಡಬಹುದಾ ಅಂತ ಕೇಳಿದ ತಕ್ಷಣ ಎಲ್ಲರೂ ವ್ಹಾವ್‌ ಎಂದು ಕೂಗಿದೆವು.

-ವೈನಿಧಿ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌