ಆ್ಯಪ್ನಗರ

ವಿಷ್ಣು ಕ್ಯಾಲೆಂಡರ್‌

ಹೊಸ ವರ್ಷಕ್ಕೆ ಪ್ರತಿ ಸಲವೂ ಡಾವಿಷ್ಣು ಸೇನಾ ಸಮಿತಿ ವಿಭಿನ್ನವಾಗಿ ಕ್ಯಾಲೆಂಡರ್‌ ಸಿದ್ಧಪಡಿಸುತ್ತಿದೆ...

Vijaya Karnataka 25 Dec 2018, 4:24 pm
ಹೊಸ ವರ್ಷಕ್ಕೆ ಪ್ರತಿ ಸಲವೂ ಡಾ.ವಿಷ್ಣು ಸೇನಾ ಸಮಿತಿ ವಿಭಿನ್ನವಾಗಿ ಕ್ಯಾಲೆಂಡರ್‌ ಸಿದ್ಧಪಡಿಸುತ್ತಿದೆ. ಈ ವರ್ಷವೂ ವಿಷ್ಣು ಹೆಸರಿನಲ್ಲಿ ನೂತನ ಕ್ಯಾಲೆಂಡರ್‌ ರೆಡಿ ಮಾಡಲಾಗಿದೆ. ಹೊಸ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕ್ಯಾಲಂಡರ್‌ಗೆ ಕೋಟಿಗೊಬ್ಬ ಕ್ಯಾಲೆಂಡರ್‌ ಎಂದು ಹೆಸರು ಇಡಲಾಗಿದೆ.
Vijaya Karnataka Web vishnu

'ಸತತ ಏಳು ವರ್ಷಗಳಿಂದ ಕ್ಯಾಲೆಂಡರ್‌ ಅನ್ನು ಡಾ.ವಿಷ್ಣು ಸೇನಾ ಸಮಿತಿಯು ಹೊರ ತರುತ್ತಿದೆ. ವಿಷ್ಣು ಅವರ ವ್ಯಕ್ತಿತ್ವ ಮತ್ತು ಸಿನಿಮಾಗಳನ್ನು ಆಧರಿಸಿ ಅದನ್ನು ವಿನ್ಯಾಸಗೊಳಿಸಲಾಗುತ್ತದೆ. ಈ ಬಾರಿಯೂ ಅದನ್ನು ಮುಂದುವರೆಸಿದ್ದೇವೆ. ಸಿಂಹಸ್ವರೂಪಿ ಡಾ.ವಿಷ್ಣುವರ್ಧನ ಎಂಬ ಪರಿಕಲ್ಪನೆ ಅಡಿಯಲ್ಲಿ ಅದು ಮೂಡಿ ಬಂದಿದೆ. 12 ಪುಟಗಳ ಜತೆಗೆ ಇನ್ನೆರೆಡು ವಿಶೇಷ ಪುಟಗಳಿವೆ. ಅಲ್ಲದೆ, ಡಾ.ವಿಷ್ಣುವರ್ಧನ ಅವರ ವಿಶೇಷ ಫೋಟೋಗಳು ಮತ್ತು ಅವರು ನುಡಿದಿದ್ದ ಕೆಲವು ಸುಪ್ರಸಿದ್ದ ಹೇಳಿಕೆಗಳನ್ನು ಅದು ಒಳಗೊಂಡಿದೆ' ಎಂದಿದ್ದಾರೆ ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌.
ಸಿಂಹವೊಂದು ಮನೆಯ ಗೋಡೆ ಮೇಲೆ ನಡೆದು ಹೋಗುವ ಅನುಭವವನ್ನು ಕಟ್ಟಿಕೊಡುವಂತಹ ಆಕರ್ಷಕ ವಿನ್ಯಾಸ ಮತ್ತು ಸಾಮಾನ್ಯ ಕ್ಯಾಲೆಂಡರ್‌ಗಿಂತ ದುಪ್ಟಟ್ಟು ಗಾತ್ರ ಹೊಂದಿರುವುದು ಈ ಬಾರಿಯ ಕ್ಯಾಲೆಂಡರನ್‌ನ ವಿಶೇಷವಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌