ಆ್ಯಪ್ನಗರ

ನಟ ವಿಷ್ಣು ವಿಶಾಲ್ ಜತೆಗಿನ ಜ್ವಾಲಾ ಗುಟ್ಟಾ ಫೋಟೋಗಳು ವೈರಲ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಜ್ವಾಲಾ ಗುಟ್ಟಾ, ನಾಬಿಬ್ಬರೂ ಒಳ್ಳೆಯ ಸ್ನೇಹಿತರು ಎಂದಿದ್ದಾರೆ. 2011ರಲ್ಲಿ ವಿಷ್ಣುಗೆ ಮದುವೆಯಾಗಿದ್ದು ಭಿನ್ನಾಭಿಪ್ರಾಯಗಳ ಕಾರಣ ಕಳೆದ ವರ್ಷ ವಿಚ್ಛೇದನ ಪಡೆದು ದೂರವಾದರು. ಇದೀಗ ಜ್ವಾಲಾ ಗುತ್ತಾ ಜತೆಗೆ ತೆಗೆದುಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದು ವೈರಲ್ ಆಗಿವೆ.

Vijaya Karnataka Web 7 Jun 2019, 3:34 pm
ಜನಪ್ರಿಯ ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಹಾಗೂ ತಮಿಳು ನಟ ವಿಷ್ಣು ವಿಶಾಲ್ ಜತೆಗಿನ ಫೋಟೋಗಳು ವೈರಲ್ ಆಗಿವೆ. ಇತ್ತೀಚೆಗೆ ವಿಷ್ಣು ಅಭಿನಯದ 'ರಾಕ್ಷಸನ್' ಸಿನಿಮಾ ಸಕ್ಸಸ್ ಆಗಿದೆ. ಇದೀಗ ಅವರ ಟ್ವಿಟರ್‌ನಲ್ಲಿ ಜ್ವಾಲಾ ಗುಟ್ಟಾ ಜತೆಗಿನ ಫೋಟೋಗಳು ಹಂಚಿಕೊಂಡಿದ್ದು ನಾನಾ ಗಾಸಿಪ್‍ಗೆ ಕಾರಣವಾಗಿದೆ.
Vijaya Karnataka Web jwala (1)


ಈ ಬಗ್ಗೆ ಪ್ರತಿಕ್ರಿಯಿಸಿರುವ ಜ್ವಾಲಾ ಗುಟ್ಟಾ, ನಾಬಿಬ್ಬರೂ ಒಳ್ಳೆಯ ಸ್ನೇಹಿತರು ಎಂದಿದ್ದಾರೆ. 2011ರಲ್ಲಿ ವಿಷ್ಣುಗೆ ಮದುವೆಯಾಗಿದ್ದು ಭಿನ್ನಾಭಿಪ್ರಾಯಗಳ ಕಾರಣ ಕಳೆದ ವರ್ಷ ವಿಚ್ಛೇದನ ಪಡೆದು ದೂರವಾದರು. ಇದೀಗ ಜ್ವಾಲಾ ಗುಟ್ಟಾ ಜತೆಗೆ ತೆಗೆದುಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದು ವೈರಲ್ ಆಗಿವೆ.

ವಿಷ್ಣು ಸಹ ಪ್ರತಿಕ್ರಿಯಿಸಿದ್ದು, "ನನಗೆ ಜ್ವಾಲಾ ಎಂದರೆ ತುಂಬಾ ಇಷ್ಟ. ಆಕೆಗೂ ಅಷ್ಟೇ ನಾನೆಂದರೆ ಇಷ್ಟ. ಕಳೆದ ಒಂದೂವರೆ ವರ್ಷದಿಂದ ಇಬ್ಬರು ಒಳ್ಳೆಯ ಸ್ನೇಹಿತರು. ಕಾಮನ್ ಗೆಳೆಯರೊಂದಿಗೆ ಕಾಲ ಹರಣ ಮಾಡುತ್ತಿರುತ್ತೇವೆ. ಸದ್ಯಕ್ಕೆ ನಾವಿಬ್ಬರು ಸ್ನೇಹಿತರು ಮಾತ್ರ. ಈ ಸ್ನೇಹ ಮುಂದಿನ ಹಂತಕ್ಕೆ ಹೋಗುತ್ತದಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಅವರವರ ಕೆಲಸಗಳಲ್ಲಿ ಬಿಝಿಯಾಗಿದ್ದೇವೆ" ಎಂದಿದ್ದಾರೆ.

ಇವರಿಬ್ಬರ ಫೋಟೋಗಳನ್ನು ನೋಡಿದ ಕ್ರಿಕೆಟಿಗ ಅಶ್ವಿನ್ ರವಿಚಂದ್ರನ್, ಬಯೋಪಿಕ್ ಏನಾದರೂ ತಯಾರಿ ನಡೆದಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಜ್ವಾಲಾ ಗುಟ್ಟಾ, ನಾನು ನಟಿಯಲ್ಲ ಅಶ್ವಿನ್ ಎಂದಿದ್ದಾರೆ. ಒಟ್ಟಾರೆ ಇವರಿಬ್ಬರ ನಡುವಿನ ಮರ್ಮ ಸದ್ಯಕ್ಕೆ ಸಸ್ಪನ್ಸ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌