ಆ್ಯಪ್ನಗರ

2016 ವಿಕ ಓದುಗರ ಆಯ್ಕೆ: ಅತ್ಯುತ್ತಮ ಹಾಸ್ಯ ನಟ-ಚಿಕ್ಕಣ್ಣ

ಕಾಮಿಡಿ ಕಾಮಿಡಿ ಕೆಟಗರಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಮಧ್ಯೆ ಕೊನೆಗೆ ಓದುಗರ ಜಯಮಾಲೆ ದೊರೆತದ್ದು ಮಾತ್ರ ಚಿಕ್ಕಣ್ಣನಿಗೆ ಶೇ68...

Vijaya Karnataka Web 31 Dec 2016, 9:12 am

ಕಾಮಿಡಿ ಕೆಟಗರಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಮಧ್ಯೆ. ಕೊನೆಗೆ ಓದುಗರ ಜಯಮಾಲೆ ದೊರೆತದ್ದು ಮಾತ್ರ ಚಿಕ್ಕಣ್ಣನಿಗೆ. ಶೇ.68.58ರಷ್ಟು ಮತಗಳನ್ನು ಹಾಕುವ ಮೂಲಕ ಅಭಿಮಾನಿಗಳು ಇವರಿಗೆ ಕಾಮಿಡಿ ಕಿಂಗ್‌ ಪಟ್ಟ ಕಟ್ಟಿದ್ದಾರೆ. ಈ ವರ್ಷದಲ್ಲಿ ರಿಲೀಸ್‌ ಆದ ಬಹುತೇಕ ಚಿತ್ರಗಳಲ್ಲಿ ಚಿಕ್ಕಣ್ಣ ಪಾತ್ರ ನಿರ್ವಹಿಸಿದ್ದಾರೆ. ಅಷ್ಟೂ ಸ್ಟಾರ್‌ ನಟರುಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ಅಭಿಮಾನಿ ಬಳಗ ಕೂಡ ಚಿಕ್ಕಣ್ಣನಿಗಿದೆ. ಎಲ್ಲರ ಓಟು ಗೆಲುವಾಗಿ ಪರಿರ್ವತನೆ ಆಗಿದೆ.

Vijaya Karnataka Web vk readers choice best comedy actor
2016 ವಿಕ ಓದುಗರ ಆಯ್ಕೆ: ಅತ್ಯುತ್ತಮ ಹಾಸ್ಯ ನಟ-ಚಿಕ್ಕಣ್ಣ


ಎರಡನೇ ಸ್ಥಾನ ದಕ್ಕಿದ್ದು ಸಾಧು ಕೋಕಿಲಾಗೆ. ಸಾಧು ಕೂಡ ಈ ವರ್ಷ ಅತ್ಯಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜತೆಗೆ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೇಳಿಕೊಳ್ಳುವಂತಹ ಪಾತ್ರಗಳು ಈ ಬಾರಿ ಇವರಿಗೆ ಸಿಕ್ಕಿಲ್ಲ. ಕಡಿಮೆ ಮತ ಬೀಳಲು ಇದು ಕಾರಣವಾಗಿರಬಹುದು. ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡಿದ್ದ ಗಡ್ಡಪ್ಪನಿಗೆ ಓದುಗರು ಮೂರನೇ ಸ್ಥಾನ ಕಲ್ಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಡ್ಡಪ್ಪ ಫೇಮಸ್‌ ಆಗಿದ್ದರೂ, ಅವು ಓಟುಗಳಾಗಿ ಕನ್ವರ್ಟ್‌ ಆಗಿಲ್ಲ. ಇತ್ತೀಚೆಗಷ್ಟೇ ರಿಲೀಸ್‌ ಆದ ತರ್ಲೆ ವಿಲೇಜ್‌ ಸಿನಿಮಾದಲ್ಲಿ ಇವರು ಡಬಲ್‌ ಮೀನಿಂಗ್‌ ಡೈಲಾಗ್‌ ಹೊಡೆದಿದ್ದರು. ಇದು ನೋಡುಗರಿಗೆ ಇಷ್ಟವಾಗಿಲ್ಲ ಅನ್ನುವುದು ಈ ಮೂಲಕ ಸ್ಪಷ್ಟವಾಗಿದೆ. ಈ ವರ್ಷದಲ್ಲಿ ಅಚ್ಯುತ್‌ಕುಮಾರ್‌ ಹಾಸ್ಯ ಪಾತ್ರಗಳ ಜತೆಗೆ ಹೆಚ್ಚಾಗಿ ಗಂಭೀರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಾಗಾಗಿ ಓದುಗರು ಅಚ್ಯುತ್‌ಗೆ ನಾಲ್ಕನೇ ಸ್ಥಾನ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌