ಆ್ಯಪ್ನಗರ

ಮತದಾನ ಮಾಡದಿದ್ದರೆ ದೂರಿ ಪ್ರಯೋಜನವಿಲ್ಲ

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯಎನ್ನುತ್ತಾರೆ ಕಿರಿಕ್‌ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ.

Vijaya Karnataka 24 Apr 2018, 5:00 am
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯಎನ್ನುತ್ತಾರೆ ಕಿರಿಕ್‌ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ.
Vijaya Karnataka Web rashmika-mandanna


'ಪ್ರತಿಯೊಬ್ಬರು ಮತದಾನ ಮಾಡಬೇಕು. ಆ ಮತದಾನವನ್ನು ನಮ್ಮನ್ನು ಯಾರು ಸುಕ್ಷಿತವಾಗಿಡುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಮಾಡಬೇಕು. ಅಲ್ಲದೆ ಮತದಾನ ಮಾಡುವುದು ನಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಲು. ಇದರ ಜತೆಗೆ ನಾವು ಈಗ ಮತದಾನ ಮಾಡುವುದು ನಮ್ಮ ಮುಂದಿನ ಐದು ವರ್ಷಗಳ ನಗರವನ್ನು ಸುರಕ್ಷಿತವಾಗಿಡಲು. ದೇಶದ ಭವಿಷ್ಯವನ್ನು ಭದ್ರಪಡಿಸುವ ಏಕೈಕ ಮಾರ್ಗವೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವುದು. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಸಾಕಷ್ಟು ಜನ ಮತದಾನ ಮಾಡುವುದಿಲ್ಲ. ಆಮೇಲೆ ಚುನಾಯಿತರಾದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರೆ ಪ್ರಯೋಜನವಿಲ್ಲ. ಹಾಗಾಗಿ ಮೊದಲು ಮತದಾನ ಮಾಡಿ ಆಮೇಲೆ ಅಭ್ಯರ್ಥಿಗಳನ್ನು ಆರಿಸಿ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.

ಇನ್ನು ಚುನಾವಣೆಯಲ್ಲಿ ಆರಿಸಿ ಬಂದ ವ್ಯಕ್ತಿಗಳು ಸರಿಯಾಗಿ ಕೆಲಸ ಮಾಡದೇ, ಅವರ ಮತದಾರರನ್ನು ಸುರಕ್ಷಿತವಾಗಿಟ್ಟಿಲ್ಲ ಎಂಬ ಕಾರಣದಿಂದ ಸಾಕಷ್ಟು ಮಂದಿ ವೋಟ್‌ ಮಾಡುವುದು ಬೇಡ ಎಂದು ತೀರ್ಮಾನಿಸಿರುತ್ತಾರೆ. ಹಾಗಾಗಿ ಚುನಾಯಿತರಾದ ಅಭ್ಯರ್ಥಿಗಳು ಸರಿಯಾದ ಕೆಲಸ ಮಾಡಿದರೆ ಮತದಾನವೂ ಆಗುತ್ತದೆ. ಎಲ್ಲರೂ ಮತದಾನ ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಅಂತಾರೆ ರಶ್ಮಿಕಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌