ಆ್ಯಪ್ನಗರ

ರಾಕಿಂಗ್ ಸ್ಟಾರ್ ಯಶ್ 'ಜನ ಗಣ ಮನ' ಸಿನಿಮಾದ ಕಥೆ ಏನಾಯಿತು?

ರಾಕಿಂಗ್ ಸ್ಟಾರ್ ಯಶ್ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ ಜನ ಗಣ ಮನ ಕಥೆ ಏನಾಯಿತು? ಸಿನಿಮಾ ಸೆಟ್ಟೇರುತ್ತಾ? ಎಂಬ ಚರ್ಚೆಗೆ ಈಗ ಬ್ರೇಕ್ ಬಿದ್ದಿದೆ. ಈ ಸಿನಿಮಾ ಖಂಡಿತ ಸೆಟ್ಟೇರುತ್ತದೆ ಎಂಬ ಸುದ್ದಿ ಇದೀಗ ಬಂದಿದೆ.

TIMESOFINDIA.COM 19 Sep 2019, 12:59 pm
ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ 'ಕೆಜಿಎಫ್: ಚಾಪ್ಟರ್ 2' ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಇದಾದ ಬಳಿಕ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಜತೆಗೆ ಸಿನಿಮಾ ಮಾಡುವುದಾಗಿ ಸುದ್ದಿಯಾಗಿತ್ತು. ಆ ಚಿತ್ರಕ್ಕೆ 'ಜನ ಗಣ ಮನ' ಎಂದು ಹೆಸರಿಡಲಾಗಿತ್ತು.
Vijaya Karnataka Web yash1


ಇದಿಷ್ಟೇ ಅಲ್ಲದೆ ಪುರಿ ಜಗನ್ನಾಥ್ ಮತ್ತು ಯಶ್ ಜೊತೆಯಾಗಿರುವ ಫೋಟೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾವನ್ನು ಅಭಿಮಾನಿಗಳು ನಿರೀಕ್ಷಿಸುವಂತಾಗಿತ್ತು. ಆದರೆ 'ಜನ ಗಣ ಮನ' ಘೋಷಣೆಯಾದ ಸ್ವಲ್ಪ ದಿನಕ್ಕೆ ವಿಜಯ್ ದೇವರಕೊಂಡ ಜತೆಗೆ ಸಿನಿಮಾ ಮಾಡುವುದಾಗಿ ಪುರಿ ಜಗನ್ನಾಥ್ ಘೋಷಿಸಿಕೊಂಡಿದ್ದರು. [ ವಿಜಯ್ ದೇವರಕೊಂಡ ಬಗ್ಗೆ 'ಕೆಜಿಎಫ್' ಖ್ಯಾತಿಯ ಯಶ್ ಹೇಳಿದ್ದೇನು?]

ಜನ ಗಣ ಮನ ಚಿತ್ರದಲ್ಲಿ ಯಶ್‌ಗೆ ಬದಲಾಗಿ ವಿಜಯ್ ದೇವರಕೊಂಡಗೆ ಚಾನ್ಸ್ ನೀಡಲಾಗಿದೆ ಎಂದು ಕೆಲವರು ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದರು. ಆದರೆ ವಿಜಯ್ ಹಾಗೂ ಯಶ್ ಜತೆಗಿನ ಸಿನಿಮಾಗಳು ಸಂಪೂರ್ಣ ಬೇರೆಬೇರೆ. ಜನ ಗಣ ಮನ ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಾರೆ. ಆ ಪ್ರಾಜೆಕ್ಟ್ ಕೈಬಿಟ್ಟಿಲ್ಲ. ಈ ಸಿನಿಮಾವನ್ನು ಹಲವಾರು ಭಾಷೆಗಳಲ್ಲಿ ತೆರೆಗೆ ತರಲಿದ್ದಾರೆ ಎಂಬ ಸುದ್ದಿ ಇದೀಗ ಬಂದಿದೆ.

ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ದೇಶಭಕ್ತಿಯ ಕಥೆಯನ್ನು ಹೊಂದಿರುವ ಆ್ಯಕ್ಷನ್ ಪ್ರಧಾನ ಸಿನಿಮಾ ಇದಾಗಿದೆ. ಅಭಿಮಾನಿಗಳಿಗೆ ಖಂಡಿತ ಈ ಸಿನಿಮಾ ಇಷ್ಟವಾಗಲಿದೆ ಎಂದಿವೆ ಮೂಲಗಳು. [ ಮಿನರ್ವ ಮಿಲ್‌ನ ಭಾರೀ ಸೆಟ್‌ನಲ್ಲಿ ಯಶ್ 'ಕೆಜಿಎಫ್‌ 2' ಶೂಟಿಂಗ್]

ಟಾಲಿವುಡ್‌ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಲಿರುವ ಜನ ಗಣ ಮನ ಸಿನಿಮಾ ಬಗ್ಗೆ ಈಗಾಗಲೆ ಬೆಂಗಳೂರಿನಲ್ಲಿ ಎರಡು ಸುತ್ತಿನ ಮಾತುಕತೆಯೂ ನಡೆದಿದೆ. ಪುರಿ ಜಗನ್ನಾಥ್ ಮತ್ತು ಯಶ್ ನಡುವೆ ಇನ್ನೊಂದು ಸುತ್ತಿನ ಮಾತುಕತೆ ಬಾಕಿ ಇದ್ದು ಬಹುತೇಕ ಸ್ಕ್ರಿಪ್ಟ್ ಫೈನಲ್ ಆಗಿದೆ ಎನ್ನಲಾಗಿತ್ತು.

ಈ ಕಥೆಯನ್ನು ಟಾಲಿವುಡ್ ಹೀರೋ ಮಹೇಶ್ ಬಾಬು ಅವರಿಗೆ ಸಿದ್ಧಪಡಿಸಿದ್ದರಂತೆ ಪುರಿ ಜಗನ್ನಾಥ್. ಆದರೆ ಕಾರಣಾಂತರಗಳಿಂದ ಮಹೇಶ್ ಬಾಬು ಚಿತ್ರದಿಂದ ಹೊರಬಂದಿದ್ದು ಈಗ ಯಶ್‌ ಜತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರವನ್ನು ನಿರ್ಮಿಸಲಿದ್ದು ಬಳಿಕ ತಮಿಳು ಮತ್ತು ಹಿಂದಿಗೆ ಡಬ್ ಮಾಡುವ ಯೋಚನೆ ಇದೆಯಂತೆ.

ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ದೇಶದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಭಯಂಕರ ಕೊಲೆಗಳು, ಅತ್ಯಾಚಾರ ಪ್ರಕರಣಗಳು ಮತ್ತು ಅಪರಾಧಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌