ಆ್ಯಪ್ನಗರ

ಯಶ್‌ ಜನಪರ ಸೇವೆ ಮಾಡುತ್ತಿರುವುದು ಏಕೆ ಗೊತ್ತಾ?

ಜನಪರ ಸೇವೆಯಲ್ಲಿ ತೊಡಗಿಕೊಂಡಿರುವುದು ಜನರ ಸೇವೆಗಾಗಿ ಹೊರತು ರಾಜಕೀಯ ಉದ್ದೇಶದಿಂದಲ್ಲ ಎಂದು ಯಶ್‌ ಸಷ್ಟಪಡಿಸಿದ್ದಾರೆ.

Vijaya Karnataka Web 30 May 2017, 3:05 pm
ಕಲಬುರಗಿ: ಜನಪರ ಸೇವೆಯಲ್ಲಿ ತೊಡಗಿಕೊಂಡಿರುವುದು ಜನರ ಸೇವೆಗಾಗಿ ಹೊರತು ರಾಜಕೀಯ ಉದ್ದೇಶದಿಂದಲ್ಲ ಎಂದು ಯಶ್‌ ಸಷ್ಟಪಡಿಸಿದ್ದಾರೆ.
Vijaya Karnataka Web yash dont have any intention to enter politics
ಯಶ್‌ ಜನಪರ ಸೇವೆ ಮಾಡುತ್ತಿರುವುದು ಏಕೆ ಗೊತ್ತಾ?


ವಿಜಯಕರ್ನಾಟಕದೊಂದಿಗೆ ಮಾತನಾಡುತ್ತಾ 'ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈಗಿರುವ ಕೆಲಸವೇ ಹೆಚ್ಚಾಗಿದೆ. ಅದನ್ನೇ ಮಾಡಲು ಆಗುತ್ತಿಲ್ಲ. ಇನ್ನು ಚುನಾವಣೆ ಎಲ್ಲಿಂದ?' ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬರದಿಂದ ಜನರು ಕಂಗೆಟ್ಟಾಗ ಯಶೋಮಾರ್ಗದ ಮೂಲಕ ಜನರ ನೀರಿನ ಸಮಸ್ಯೆಗೆ ಸ್ಪಂದಿಸಿ, ಅಲ್ಲಿಯ ಜನರ ಪ್ರೀತಿಯನ್ನು ಗಳಿಸಿದ ಯಶ್, ಮುಂಬರುವ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಮಾಡಬೇಕು ಎಂದು ನಿರ್ಧರಿಸಿಲ್ಲ, ಮೊದಲು ನನಗೆ ಆ ಅಭ್ಯರ್ಥಿ ಚೆನ್ನಾಗಿ ಕೆಲಸ ಮಾಡುತ್ತಾನೆ ಎಂಬ ನಂಬಿಕೆ ಇರಬೇಕು, ಸದ್ಯ ಈಗಲೇ ಆ ಕುರಿತು ವಿಚಾರ ಮಾಡಿಲ್ಲ ಎಂದಿದ್ದಾರೆ.

'ಕಲಬುರಗಿಯಲ್ಲಿ 33 ಹಳ್ಳಿಗಳಿಗೆ ಯಶೋ ಮಾರ್ಗದ ಮೂಲಕ ನೀರು ಕೊಟ್ಟಿದ್ದೆವೆ ಕರ್ನಾಟಕದಲ್ಲಿ ನಾವು ಹುಟ್ಟಿದ್ದೆವೆ. ಅದರಲ್ಲಿ ನಟನಾಗಿ ಜನ ನಮ್ಮನ್ನು ಬೆಳೆಸಿದ್ದಾರೆ ಜನರ ಕಷ್ಟ ಇದ್ದಾಗ ನಾವು ಸ್ಪಂದಿಸಬೇಕು. ಇದು ಎಲ್ಲರ ಜವಾಬ್ದಾರಿ. ಇದರಲ್ಲೇನೂ ರಾಜಕೀಯ ಇಲ್ಲ' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌