ಆ್ಯಪ್ನಗರ

ಯಶ್‌ ನನ್ನ ನೆಚ್ಚಿನ ನಟ ಅಂದ್ರು ಬಾಲಿವುಡ್‌ನ ಶ್ರೇಯಸ್‌

'ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುತ್ತಲೇ ಇರುತ್ತೇನೆ. ಅಪರೂಪಕ್ಕೆ ಕನ್ನಡ ಸಿನಿಮಾಗಳನ್ನು ನೋಡಿದರೂ, ಅವುಗಳು ಸದಾ ನನ್ನ ಮನಸ್ಸಿನಲ್ಲಿ ಇರುತ್ತವೆ' ಅಂದಿದ್ದಾರೆ ಶ್ರೇಯಸ್‌.

Vijaya Karnataka 17 Oct 2018, 12:22 pm
ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆ ಸ್ಯಾಂಡಲ್‌ವುಡ್‌ ನಟರನ್ನು ಹಾಡಿ ಹೊಗಳಿದ್ದಾರೆ. ಹಿರಿಯ ನಟರಲ್ಲಿ ಡಾ.ರಾಜ್‌ ಕುಮಾರ್‌ ಮತ್ತು ಈ ತಲೆಮಾರಿನ ಕಲಾವಿದರಲ್ಲಿ ಯಶ್‌ ತಮ್ಮ ನೆಚ್ಚಿನ ನಟರೆಂದು ಹೇಳಿಕೊಂಡಿದ್ದಾರೆ. 'ನನಗೆ ಬೆಂಗಳೂರು ಅಂದರೆ ತುಂಬಾ ಇಷ್ಟ. ಇಲ್ಲಿನ ವಾತಾವರಣ ಯಾವತ್ತಿಗೂ ಕೂಲ್‌ ಆಗಿ ಇರುತ್ತದೆ. ಅಲ್ಲದೇ, ಕನ್ನಡ ಸಿನಿಮಾ ರಂಗದಲ್ಲಿ ನನಗೆ ಗೆಳೆಯರೂ ಇದ್ದಾರೆ. ಹಾಗಾಗಿ ನಾನು ಬೆಂಗಳೂರಿಗೆ ಬರುತ್ತಲೇ ಇರುತ್ತೇನೆ' ಎಂದಿರುವ ಶ್ರೇಯಸ್‌, ಅವಕಾಶ ಸಿಕ್ಕರೆ ಕನ್ನಡ ಸಿನಿಮಾದಲ್ಲೂ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.
Vijaya Karnataka Web yash


ಡಾ.ರಾಜ್‌ ಕುಮಾರ್‌ರ ಹಲವು ಸಿನಿಮಾಗಳನ್ನು ಶ್ರೇಯಸ್‌ ನೋಡಿದ್ದಾರಂತೆ. ಅಲ್ಲದೇ, ಯಶ್‌ ಅವರ ಸ್ಟೈಲ್‌ ಮತ್ತು ಡೈಲಾಗ್‌ ಹೇಳುವ ರೀತಿಗೆ ಇವರು ಫಿದಾ ಆಗಿದ್ದಾರೆ. 'ದಕ್ಷಿಣ ಭಾರತದ ಸಿನಿಮಾಗಳನ್ನು ನೋಡುತ್ತಲೇ ಇರುತ್ತೇನೆ. ಅಪರೂಪಕ್ಕೆ ಕನ್ನಡ ಸಿನಿಮಾಗಳನ್ನು ನೋಡಿದರೂ, ಅವುಗಳು ಸದಾ ನನ್ನ ಮನಸ್ಸಿನಲ್ಲಿ ಇರುತ್ತವೆ' ಅಂದಿದ್ದಾರೆ ಶ್ರೇಯಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌