ಆ್ಯಪ್ನಗರ

ಮದುವೆ ಬ್ರೆಕ್‌ ನಂತರ ಸಿನಿಮಾದತ್ತ ಯಶ್‌

ಮದುವೆಯ ನಂತರ ಮತ್ತೆ ಸಿನಿಮಾ ಶೂಟಿಂಗ್‌ನತ್ತ ಮರಳಿದ ರಾಕಿಂಗ್‌ ಸ್ಟಾರ್‌ ಯಶ್‌.

ವಿಕ ಸುದ್ದಿಲೋಕ 16 Mar 2017, 12:14 pm
'ಸಂತು ಸ್ಟ್ರೈಟ್‌ ಫಾರ್ವರ್ಡ್‌' ಬಿಡುಗಡೆಯ ನಂತರ ರಾಕಿಂಗ್‌ ಸ್ಟಾರ್‌ ಯಶ್‌, ತಮ್ಮ ಮನದನ್ನೆ ರಾಧಿಕಾ ಜತೆ ಮದುವೆಯಾಗಿದ್ದು ಹಳೆಯ ಸುದ್ದಿ. ಅದಾದ ನಂತರ ಯಶೋಮಾರ್ಗದಂಥ ಸಾಮಾಜಿಕ ಕಾರ್ಯಗಳಲ್ಲಿ ಬಿಝಿಯಾಗಿದ್ದ ಯಶ್‌, ಸಿನಿಮಾದಿಂದ ಕೆಲಕಾಲ ಬ್ರೇಕ್‌ ತೆಗೆದುಕೊಂಡಿದ್ದರು.
Vijaya Karnataka Web yash is now back to work
ಮದುವೆ ಬ್ರೆಕ್‌ ನಂತರ ಸಿನಿಮಾದತ್ತ ಯಶ್‌


ಒಂದಿಷ್ಟು ಗ್ಯಾಪ್‌ ನಂತರ ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ ರಾಕಿಂಗ್‌ ಸ್ಟಾರ್‌. ಹೌದು, ಯಶ್‌ ಈಗ ಕೆಜಿಎಫ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. 'ಉಗ್ರಂ' ಚಿತ್ರ ನಿರ್ದೇಶಿಸಿದ್ದ ಪ್ರಶಾಂತ್‌ ನೀಲ್‌ ಕೆಜಿಎಫ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರೀಕರಣ ಇಂದು ಶುರುವಾಗಿದ್ದು, ಯಶ್‌ ಕೆಜಿಎಫ್‌ ಸೆಟ್‌ನಲ್ಲಿ ಉಪಸ್ಥಿತರಿದ್ದಾರೆ ಎಂಬ ಮಾಹಿತಿ ದೊರಕಿದೆ. ಆದರೆ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯುತ್ತಿದೆ ಅನ್ನೋದು ಗುಟ್ಟಾಗಿಯೇ ಉಳಿದಿದೆ.

ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಕೆಜಿಎಫ್‌ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಭುವನ್‌ ಗೌಡ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಈ ವರ್ಷದ ಕ್ರಿಸ್‌ಮಸ್‌ ಹಬ್ಬಕ್ಕೆ ಕೆಜಿಎಫ್‌ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌