ಆ್ಯಪ್ನಗರ

ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಾಕ್ಸ್ ಆಫೀಸ್ ವರದಿ ಹೊರಬಿದ್ದಿದೆ. ಹಿಂದಿ ಚಿತ್ರರಂಗದ ಇಬ್ಬರು ಟ್ರೇಡ್ ಅನಾಲಿಸ್ಟ್‌ಗಳು ಮೊದಲ ದಿನದ ಕಲೆಕ್ಷನ್ ವಿವರಗಳನ್ನು ನೀಡಿದ್ದಾರೆ. ಅವರ ಪ್ರಕಾರ ಕೆಜಿಎಫ್ ಮೊದಲ ದಿನವೇ ವರ್ಲ್ಡ್ ವೈಡ್ ₹ 24.50 ಕೋಟಿ ಗಳಿಸಿದೆ.

Vijaya Karnataka Web 24 Dec 2018, 1:30 pm
ಯಶ್ ಅಭಿಮಯದ ಕೆಜಿಎಫ್ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದಂತೆ ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಭಾಗಾಕಾರ ಗುಣಾಕಾರದ ಪ್ರಕಾರ ಕೆಜಿಎಫ್‌ ಎಲ್ಲಾ ಭಾಷೆಗಳಲ್ಲಿ ಮೊದಲ ದಿನದ ವರ್ಲ್ಡ್‌ವೈಡ್ ಕಲೆಕ್ಷನ್ ವರದಿ ಹೊರಬಿದ್ದಿದೆ.
Vijaya Karnataka Web kgf-box-office


ಕೆಜಿಎಫ್ ಮೊದಲ ದಿನವೇ ವರ್ಲ್ಡ್ ವೈಡ್ ₹ 24.50 ಕೋಟಿ ಗಳಿಸಿದೆ. ಅದೇ ರೀತಿ ಭಾರತದ ಬಾಕ್ಸ್ ಆಫೀಸಲ್ಲಿ ಕೆಜಿಎಫ್: ಚಾಪ್ಟರ್ 1 ಸಿನಿಮಾ ಮೊದಲ ದಿನ ನಿವ್ವಳ ₹ 18.1 ಕೋಟಿ ಬಾಚಿದೆ. ಹಿಂದಿ ಆವೃತ್ತಿ ₹ 2.1 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾರ್ವಕಾಲಿಕ ನಂಬರ್ ಒನ್ ಕನ್ನಡ ಸಿನಿಮಾ ಆಗಿ ಕೆಜಿಎಫ್ ಹೊರಹೊಮ್ಮಿದೆ ಎಂದಿದ್ದಾರೆ ರಮೇಶ್ ಬಾಲಾ.


ಬಾಲಿವುಡ್‍ನ ಮತ್ತೊಬ್ಬ ಟ್ರೇಡ್ ಅನಲಿಸ್ಟ್ ಆಗಿರುವ ತರಣ್ ಆದರ್ಶ್ ಅವರೂ ಕೆಜಿಎಫ್ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದು, "ಕೆಜಿಎಫ್ ಹಿಂದಿ ಆವೃತ್ತಿ ಮೊದಲ ದಿನ ₹ 2.1 ಕೋಟಿ ಕಲೆಕ್ಷನ್ ಮಾಡಿದೆ (1500 ಸ್ಕ್ರೀನ್ಸ್). ಮುಂಬೈನಲ್ಲಿ ಅತಿ ಹೆಚ್ಚು ಕಲೆಕ್ಷನ್ ಆಗಿದೆ. ಅದೇ ರೀತಿ 2 ಮತ್ತು 3 ನೇ ದಿನ ಇನ್ನಷ್ಟು ಪ್ರಮುಖವಾಗಲಿವೆ" ಎಂದಿದ್ದಾರೆ.


ಇನ್ನೊಂದು ಟ್ವೀಟ್‌ನಲ್ಲಿ ಸಿನಿಮಾ ಬಗ್ಗೆ ಒನ್‍ಲೈನ್ ವಿಮರ್ಶೆ ನೀಡಿದ್ದು ಔಟ್‍ಸ್ಟ್ಯಾಂಡಿಂಗ್. ಇದೊಂದು ಮಾಸ್ಟರ್‌ಪೀಸ್ ಎಂದಿದ್ದು 4.5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ವಿಮರ್ಶೆ ನೀಡಿವುದಾಗಿಯೂ ಹೇಳಿದ್ದು ಸಿನಿಮಾಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.



ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಸಹಜವಾಗಿಯೇ ಮೊದಲ ದಿನ ಸಿನಿಮಾದ ಕಲೆಕ್ಷನ್ ಎಷ್ಟಿರಬಹುದು ಎಂಬ ಕುತೂಹಲ ಮೂಡಿಸಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಇವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌