ಆ್ಯಪ್ನಗರ

ಸದ್ದಿಲ್ಲದೆ ನಡೆಯಿತು 'ಕೆಜಿಎಫ್ 2' ಮುಹೂರ್ತ, ಏಪ್ರಿಲ್‌ನಿಂದ ಚಿತ್ರೀಕರಣ

ಕೆಜಿಎಫ್ 2 ಸಿನಿಮಾದ ರೆಗ್ಯುಲರ್ ಶೂಟಿಂಗ್ ಏಪ್ರಿಲ್‌ನಿಂದ ಆರಂಭವಾಗುವ ಸಾಧ್ಯತೆ ಇದೆ. ಇನ್ನು ಭಾಗ 2ರಲ್ಲಿ ಹಲವಾರು ಹೊಸ ಮುಖಗಳು ಕಾಣಿಸಲಿವೆ. ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂಬ ಸೂಚನೆಯೂ ಸಿಕ್ಕಿದೆ.

Vijaya Karnataka Web 13 Mar 2019, 2:26 pm
ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಜೋಡಿಯ ಕೆಜಿಎಫ್ 2 ಸಿನಿಮಾ ಬುಧವಾರ (ಮಾರ್ಚ್ 13) ಸೆಟ್ಟೇರಿದೆ. ಕೆಜಿಎಫ್ ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದ ನಿರ್ಮಾಪಕ ವಿಜಯ ಕಿರಗಂದೂರು ಅವರ ನಿರ್ಮಾಣದಲ್ಲಿ ಕೆ.ಜಿ.ಎಫ್. ಚಾಪ್ಟರ್ 2 ಇಂದು ಮುಹೂರ್ತ ಆಚರಿಸಿಕೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ಸಮಾರಂಭ ನೆರವೇರಿದೆ. ನಿರ್ದೇಶಕ ಪ್ರಶಾಂತ್ ರವರ ತಾಯಿ ಶ್ರೀಮತಿ ಭಾರತಿ ಸುಭಾಷ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು.
Vijaya Karnataka Web kgf


ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಪ್ರಶಾಂತ್ ನೀಲ್, ಚಂದ್ರಮೌಳಿ, ಕೆ ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಚಿರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನಂತ್ ನಾಗ್, ಶ್ರೀನಿಧಿ ಶೆಟ್ಟಿ, ಮಾಳವಿಕಾ, ಮಾಸ್ಟರ್ ಅನಮೋಲ್, ನಾಗಾಭರಣ, ಗೋವಿಂದೇಗೌಡ, ಅವಿನಾಶ್, ರಾಮ್, ಲಕ್ಕಿ, ಅಯ್ಯಪ್ಪ ಶರ್ಮ ಮುಂತಾದವರಿದ್ದಾರೆ.


ಈ ಸಂದರ್ಭದಲ್ಲಿ ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಛಾಯಾಗ್ರಾಹಕ ಭುವನ್ ಗೌಡ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರ್ ಸೇರಿದಂತೆ ಚಿತ್ರತಂಡ ಉಪಸ್ಥಿತಿಯಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಿತು.

ಕೆಜಿಎಫ್ 2 ಆರಂಭವಾಗಿದೆ. ನಿಮ್ಮ ಪ್ರೀತಿ ಮತ್ತು ಹಾರೈಕೆ ಎಂದಿನಂತೆ ಇರಲಿ. ಚಾಪ್ಟರ್ 2 ಡಬಲ್ ಧಮಾಕಾ ಸೃಷ್ಟಿಸಲಿದೆ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಕೆಜಿಎಫ್ 2 ಸಿನಿಮಾದ ರೆಗ್ಯುಲರ್ ಶೂಟಿಂಗ್ ಏಪ್ರಿಲ್‌ನಿಂದ ಆರಂಭವಾಗುವ ಸಾಧ್ಯತೆ ಇದೆ. ಇನ್ನು ಭಾಗ 2ರಲ್ಲಿ ಹಲವಾರು ಹೊಸ ಮುಖಗಳು ಕಾಣಿಸಲಿವೆ. ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ರವೀನಾ ಟಂಡನ್ ನಟಿಸಲಿದ್ದಾರೆ ಎಂಬ ಸೂಚನೆಯೂ ಸಿಕ್ಕಿದೆ.

ವಿಶೇಷ ಎಂದರೆ ಚಾಪ್ಟರ್ 1ರ ಚಿತ್ರೀಕರಣ ಸಂದರ್ಭದಲ್ಲೇ 'ಚಾಪ್ಟರ್ 2'ರ ಶೇ.15ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಉಳಿದ ಭಾಗವನ್ನು ಬೇಸಿಗೆಯಿಂದ ಆರಂಭಿಸಲಿದ್ದಾರೆ ಎಂದಿವೆ ಮೂಲಗಳು.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಚಿತ್ರದ ಪಾತ್ರವರ್ಗದಲ್ಲಿ ಅಚ್ಯುತ ಕುಮಾರ್, ನಾಸರ್, ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಠ ಎನ್ ಸಿಂಹ ಸೇರಿದಂತೆ ಹಲವರಿದ್ದಾರೆ. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ತಮಿಳಿನಲ್ಲಿ ವಿಶಾಲ್ ಫಿಲಂ ಫ್ಯಾಕ್ಟರಿ, ಮಲಯಾಳಂನಲ್ಲಿ ಗ್ಲೋಬಲ್ ಯುನೈಟೆಡ್ ಮೀಡಿಯಾ, ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ, ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೇನ್‍ಮೆಂಟ್ ವಿತರಣೆ ಮಾಡಿದೆ.

ಕೇವಲ ರಾಜ್ಯ, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಹವಾ ಎಬ್ಬಿಸಿರುವ ಸಿನಿಮಾ ಇದು. ಯುಎಸ್‌ನಲ್ಲಿ ಎಲ್ಲಾ ಭಾಷೆಗಳ ಸಿನಿಮಾದ ಗಳಿಕೆ ಐದು ಲಕ್ಷ ಡಾಲರ್ ದಾಟಿದೆ ಎನ್ನುತ್ತವೆ ಮೂಲಗಳು. ಈಗ ಚಾಪ್ಟರ್ 2 ಬಗ್ಗೆಯೂ ಅದೇ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬಂದಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಾಗತಿಕ ಸಿನಿಮಾ ಜಗತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಕ್ರಿಯಾಶೀಲತೆ, ಕಲಾವಿದರ ನೈಪುಣ್ಯತೆಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌