ಆ್ಯಪ್ನಗರ

ಯೋಗರಾಜ್ ಭಟ್ ಜತೆ ಕೈಜೋಡಿಸಿದ ನಿರ್ದೇಶಕ ಶಶಾಂಕ್

ಸ್ಯಾಂಡಲ್‌ವುಡ್‌ನ ಇಬ್ಬರು ನಿರ್ದೇಶಕರು ಒಂದಾಗಿದ್ದಾರೆ. ಇಬರಿಬ್ಬರೂ ಒಂದಾಗಿರುವುದು ಸಿನಿಮಾ ನಿರ್ದೇಶಿಸಲು ಅಲ್ಲ. ಸಿನಿಮಾವೊಂದನ್ನು ಜಂಟಿಯಾಗಿ ನಿರ್ಮಿಸಲು. ಇಬ್ಬರ ನಿರ್ಮಾಣ ಸಂಸ್ಥೆಗಳು ಒಟ್ಟಾಗಿ ಒಂದು ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.

Vijaya Karnataka 19 Feb 2019, 12:39 pm
ಕವಿ ನಿರ್ದೇಶಕ ಯೋಗರಾಜ್‌ ಭಟ್ಟರು ಮತ್ತು ಸದಭಿರುಚಿಯ ನಿರ್ದೇಶಕ ಶಶಾಂಕ್‌ ಒಂದಾಗಿದ್ದು, ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಆರಂಭವಾಗಿದೆ. ಈ ಸಿನಿಮಾಗೆ ಭಟ್ಟರ ಶಿಷ್ಯ ಮೋಹನ್‌ ಸಿಂಗ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.
Vijaya Karnataka Web yograj-bhat


'ಇದು ನನ್ನದೇ ಕಥೆ. ಮೊದಲ ಬಾರಿಗೆ ನನ್ನ ಕಥೆಯನ್ನು ಬೇರೆಯವರು ನಿರ್ದೇಶನ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಸೊಗಡು ಇದರಲ್ಲಿದೆ. ಈ ಸಿನಿಮಾದಲ್ಲಿರುವ ಎಲಿಮೆಂಟ್ಸ್‌ ಹೆಣ್ಣುಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ನಾನು ಈ ಕಥೆಯನ್ನು ಡಿಸ್ಕಸ್‌ ಮಾಡುತ್ತಿದ್ದಾಗ ಶಶಾಂಕ್‌ ತಮ್ಮ ನಿರ್ಮಾಣ ಸಂಸ್ಥೆಯಿಂದ ರಿಷಿಯನ್ನು ನಾಯಕರನ್ನಾಗಿಟ್ಟುಕೊಂಡು ಸಿನಿಮಾ ಮಾಡಲು ಕಥೆ ಹುಡುಕುತ್ತಿದ್ದಾರೆ ಎಂಬುದು ತಿಳಿಯಿತು. ಇದನ್ನು ಅವರಿಗೆ ಹೇಳಿದಾಗ ಇಷ್ಟವಾಗಿ ಒಪ್ಪಿಕೊಂಡರು. ಮೋಹನ್‌ ಸಿಂಗ್‌ ನನ್ನ ಜತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜತೆಗೆ ಸೀರಿಯಲ್‌ಗಳನ್ನೂ ನಿರ್ದೇಶನ ಮಾಡಿದ್ದಾರೆ'ಎಂದು ಭಟ್ಟರು ತಿಳಿಸಿದ್ದಾರೆ.

ಈಗಾಗಲೇ ಭಟ್ಟರ ಗರಡಿಯಿಂದ ಬಂದ ಪವನ್‌ಕುಮಾರ್‌, ಪವನ್‌ ಒಡೆಯರ್‌, ಮಹೇಶ್‌ಕುಮಾರ್‌ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಈ ಸಾಲಿಗೆ ಮೋಹನ್‌ ಸಿಂಗ್‌ ಸಹ ಸೇರುತ್ತಾರೆ ಎಂಬ ನಂಬಿಕೆ ಭಟ್ಟರದ್ದು.ಇವರಿಬ್ಬರ ಸಿನಿಮಾಗಳಲ್ಲಿ ಹಾಡುಗಳು ಹೈಲೈಟ್‌ ಆಗಿರುತ್ತವೆ. ಈ ಹೊಸ ಚಿತ್ರದಲ್ಲಿ ಶಶಾಂಕ್‌-ಯೋಗರಾಜ್‌ ಭಟ್‌ ಮತ್ತು ಅರ್ಜುನ್‌ ಜನ್ಯ ಒಂದಾಗುತ್ತಿದ್ದಾರೆ.

ಪಂಚತಂತ್ರ ಸಿನಿಮಾದ ಕಥೆ ನೀಡುವ ಮೂಲಕ ಭಟ್ಟರ ಕ್ಯಾಂಪ್‌ ಸೇರಿದ್ದ ಟಗರು ಖ್ಯಾತಿಯ ಮಾಸ್ತಿ, ಈಗ ಅವರ ಶಿಷ್ಯ ನಿರ್ದೇಶನ ಮಾಡುತ್ತಿರುವ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ. ಮಾಸ್ತಿ ಈಗಾಗಲೇ ಮದಗಜ, ನಾಥೂರಾಮ್‌,ಖಾಕಿ, ಎಸ್‌ಆರ್‌ಕೆ ಸೇರಿದಂತೆ ಸಾಕಷ್ಟು ಸಿನಿಮಾಗಳಗೆ ಬರೆಯುತ್ತಿದ್ದಾರೆ. ಸದ್ಯಕ್ಕೆ ರಿಷಿ ಮಾತ್ರ ಆಯ್ಕೆಯಾಗಿದ್ದು, ಉಳಿದ ತಾರಾಗಣದ ಆಯ್ಕೆ ಸದ್ಯದಲ್ಲೇ ನಡೆಯಲಿದೆ.

ಇದೊಂದು ಪಕ್ಕಾ ಕ್ಲಾಸ್‌ ಮತ್ತು ಮಾಸ್‌ ಎಂಟರ್‌ಟೇನಿಂಗ್‌ ಸಿನಿಮಾ ಆಗುತ್ತದೆ. ಶಶಾಂಕ್‌ ಮತ್ತು ನನ್ನದು ಹಳೆ ಗೆಳೆತನ ಈಗ ಸಿನಿಮಾ ಮೂಲಕ ಒಂದಾಗಿದೆ ಎಂದಿದ್ದಾರೆ ಯೋಗರಾಜ್‌ ಭಟ್‌. ಸ್ಟಾರ್‌ಗಳು ಒಟ್ಟಾಗಿ ಮಲ್ಟಿಸ್ಟಾರರ್‌ ಸಿನಿಮಾ ಮಾಡಿದಂತೆ, ಇಬ್ಬರು ನಿರ್ದೇಶಕರು ಸೇರಿಕೊಂಡು ಮಲ್ಟಿ ಟೆಕ್ನಿಶಿಯನ್‌ಗಳ ಸಿನಿಮಾ ಮಾಡುತ್ತಿದ್ದೇವೆ. ಪ್ರೇಕ್ಷಕರಿಗೆ ಖುಷಿ ಕೊಡುವಂತಹ ಸಿನಿಮಾ ಇದಾಗುತ್ತದೆ ಎನ್ನುತ್ತಾರೆ ಶಶಾಂಕ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌