ಆ್ಯಪ್ನಗರ

ಯೋಗರಾಜ್ ಭಟ್ ಹೊಸ ಚಿತ್ರದ ಹೆಸರು ಪಂಚತಂತ್ರ

ಯೋಗರಾಜ ಭಟ್ಟರ ಹೊಸ ಚಿತ್ರಕ್ಕೆ ಪಂಚತಂತ್ರ ಎಂಬ ಟೈಟಲ್‌ ಫಿಕ್ಸ್‌ ಆಗಿದೆ.

Vijaya Karnataka 10 Jan 2018, 11:29 am

ಯೋಗರಾಜ ಭಟ್ಟರ ಹೊಸ ಚಿತ್ರಕ್ಕೆ ಪಂಚತಂತ್ರ ಎಂಬ ಟೈಟಲ್‌ ಫಿಕ್ಸ್‌ ಆಗಿದೆ. ವಿಹಾನ್‌ ನಾಯಕರಾಗಿರುವ ಈ ಚಿತ್ರದಲ್ಲಿ ಸೋನಲ್‌ ಮಾಂತೆರೋ ಮತ್ತು ಅಕ್ಷರಾ ಗೌಡ ಎಂಬ ಇಬ್ಬರು ಹಾಟ್‌ ಬ್ಯೂಟೀಸ್‌ ನಾಯಕರಾಗಿ ನಟಿಸುತ್ತಿದ್ದಾರೆ.

ಕಾಂತರಾಜ್‌ ಮತ್ತು ಮಾಸ್ತಿ ಬರೆದಿರುವ ಕತೆ ಇದಾಗಿದ್ದು, ಸಾಕಷ್ಟು ಫನ್‌ ಎಲಿಮೆಂಟ್‌ ಇದೆಯಂತೆ. ಮುಗುಳುನಗೆ ನಂತರ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಇದಾಗಿದ್ದು, ಹೊಸ ಆಲೋಚನೆಯೊಂದಿಗೆ ಭಟ್ಟರು ಸಿನಿಮಾ ಮಾಡುತ್ತಿದ್ದಾರೆ. ಕಾಲ್‌ ಕೆಜಿ ಪ್ರೀತಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದ, ವಿಹಾನ್‌ ಈ ಚಿತ್ರದಲ್ಲಿ ಬೇರೆ ತರಹದ ಪಾತ್ರ ನಿರ್ವಹಿಸುತ್ತಿದ್ದಾರೆ.

Vijaya Karnataka Web yograj bhat new movie titled as panchatantra
ಯೋಗರಾಜ್ ಭಟ್ ಹೊಸ ಚಿತ್ರದ ಹೆಸರು ಪಂಚತಂತ್ರ


ವಿಹಾನ್‌ಗೆ ನಾಯಕಿಯಾಗಿ ಸೋನಲ್‌ ಮಾಂತೆರೋ ಇದ್ದರೆ, ಇನ್ನೊಂದು ಮುಖ್ಯ ಅಕ್ಷರಗೌಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಈ ಸಿನಿಮಾದಲ್ಲಿ ದೊಡ್ಡ ನಟರೇ ದಂಡೆ ಇದೆ ಎಂದು ಚಿತ್ರತಂಡ ಹೇಳಿದೆ. ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ಸಾಗಿದ್ದು, ಇದೇ ತಿಂಗಳ 25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌