ಆ್ಯಪ್ನಗರ

ಗೋವಾ ಬೀಚ್‌ನಲ್ಲಿ ಪ್ಯಾಥೋ ಸಾಂಗ್‌ ಹಾಡುತ್ತಿದ್ದಾರೆ ಭಟ್ಟರು

ಯೋಗರಾಜ್‌ ಭಟ್‌ ನಿರ್ದೇಶನದ ಪಂಚತಂತ್ರ ಸಿನಿಮಾದ ಹಾಡಿನ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈ ಬಗ್ಗೆ ಸೆಟ್‌ನಿಂದಲೇ ಯೋಗರಾಜ್‌ ಭಟ್‌ ಲವಲವಿಕೆ ಜತೆ ಮಾತನಾಡಿದ್ದಾರೆ. ಜತೆಗೆ ಶೂಟಿಂಗ್‌ನ ಫೋಟೋ ಸಹ ಇಲ್ಲಿದೆ.

Vijaya Karnataka 25 Oct 2018, 9:34 am
* ಹರೀಶ್‌ ಬಸವರಾಜ್‌
Vijaya Karnataka Web yograj-bhat


ಇತ್ತೀಚೆಗಷ್ಟೇ ಟೀಸರ್‌ ಬಿಡುಗಡೆ ಮಾಡಿ ಅದರ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಯೋಗರಾಜ್‌ ಭಟ್‌, ತಮ್ಮ ಪಂಚತಂತ್ರ ಸಿನಿಮಾ ಟೀಮ್‌ನ್ನು ಕಟ್ಟಿಕೊಂಡು ಗೋವಾದ ಭಾಗಾ ಬೀಚ್‌ನಲ್ಲಿ ಬೀಡು ಬಿಟ್ಟಿದ್ದಾರೆ.

ಭಟ್ಟರ ಆ್ಯಕ್ಷನ್‌ ಕಮ್‌ ಲವ್‌ ಸ್ಟೋರಿಯ ಪಂಚತಂತ್ರ ಸಿನಿಮಾದ ಹಾಡಿನ ಚಿತ್ರೀಕರಣ ಗೋವಾದಲ್ಲಿ ಬುಧವಾರದಿಂದ ಆರಂಭವಾಗಿದೆ. ಇದು ಮುಗಿದರೆ ಪಂಚತಂತ್ರ ಶೂಟಿಂಗ್‌ ಕಂಪ್ಲೀಟ್‌ಆಗುತ್ತದೆ. ಸೆಟ್‌ನಿಂದಲೇ ನೇರವಾಗಿ ಲವಲವಿಕೆ ಜತೆ ಮಾತನಾಡಿದ ಭಟ್ಟರು, ಈ ಹಾಡು ಸಿನಿಮಾದಲ್ಲಿ ಬಹಳ ಲೈವ್ಲಿಯಾಗಿ ಇರುತ್ತದೆ ಎಂದರು. 'ನಮ್ಮ ನಾಯಕನಿಗೆ ಲವ್‌ ಫೆಲ್ಯೂರ್‌ ಆದಾಗ ಆ ಫೀಲಿಂಗ್‌ನಲ್ಲಿ ಗೋವಾದಲ್ಲಿ ಈ ಹಾಡು ಹಾಡುತ್ತಿರುತ್ತಾನೆ. ಇದೇ ಸಮಯದಲ್ಲಿ ಅವನಿಗೆ ಅವನ ಗೆಳೆಯರು ಸಾಥ್‌ ನೀಡುತ್ತಾರೆ. ಇಮ್ರಾನ್‌ ಸರ್ದಾರಿಯಾ ಈ ಹಾಡನ್ನು ಕೋರಿಯೋಗ್ರಫಿ ಮಾಡಿದ್ದು, ಹಾಡಿನ ಜತೆಗೆ ಒಂದಷ್ಟು ಟಾಕಿ ಪೋಷನ್‌ ಸಹ ಚಿತ್ರೀಕರಣ ಮಾಡುತ್ತೇವೆ'ಎನ್ನುತ್ತಾರೆ ಭಟ್ಟರು.

ಮಾಸ್ತಿ, ಕಾಂತರಾಜ್‌ ಬರೆದ ಕಥೆ ಇದಾಗಿದ್ದು, ಹರಿಪ್ರಸಾದ್‌ ಜಯಣ್ಣ ಮತ್ತು ಹೇಮಂತ್‌ ಪರಾಡ್ಕರ್‌ ಬಂಡವಾಳ ಹೂಡಿದ್ದಾರೆ. ಗೋವಾದ ಶೂಟಿಂಗ್‌ನಲ್ಲಿ ವಿಹಾನ್‌ ಗೌಡ, ಸೋನಲ್‌, ಸಾಗರ್‌, ನಂದ, ಅಜರ್‌ ಭಾಗವಹಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿತ್ತು. ಈ ಸಿನಿಮಾ ಮೂಲಕ ತಮ್ಮ ಹಳೇ ಟ್ರ್ಯಾಕ್ನಿಂದ ಹೊರಬಂದು ಭರ್ಜರಿ ಕಾರ್‌ ರೇಸಿಂಗ್‌ ಇರುವ ಸಿನಿಮಾ ಮಾಡಿದ್ದಾರೆ ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿಂದೆ ಒಂದು ರೊಮ್ಯಾಂಟಿಕ್‌ ಹಾಡನ್ನು ಚಿತ್ರೀಕರಣ ಮಾಡಿದ್ದ ಭಟ್ಟರು ಈಗ ಜಾಲಿ ಹಾಡನ್ನು ಶೂಟ್‌ ಮಾಡುತ್ತಿದ್ದಾರೆ.

ಈ ಸಿನಿಮಾ ಬದಕಿನ ರೇಸ್‌ ಬಗ್ಗೆ ಮಾತನಾಡುತ್ತದೆ, ಈಗ ಶೂಟಿಂಗ್‌ ಮಾಡುತ್ತಿರುವ ಹಾಡು ನೋಡುಗರಿಗೆ ಒಂದು ರಿಲ್ಯಾಕ್ಸ್‌ ನೀಡುವಂತಹದ್ದು. ನವೆಂಬರ್‌ ಮಧ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಇಟ್ಟುಕೊಂಡಿದ್ದೇವೆ.
ಯೋಗರಾಜ್‌ ಭಟ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌