ಆ್ಯಪ್ನಗರ

ವಸಿಷ್ಠ ಸಿಂಹ ಹೆಸರಲ್ಲಿ ಹುಡುಗಿಯರಿಗೆ ದೋಖಾ; ಆಸಾಮಿ ಬಲೆಗೆ

ನಟ ವಸಿಷ್ಠ ಸಿಂಹ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು ಹೆಣ್ಣುಮಕ್ಕಳನ್ನು ವಂಚಿಸುತ್ತಿದ್ದ ಆಸಾಮಿಯನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Vijaya Karnataka Web 21 Aug 2019, 11:22 am

ಕವಚ ಚಿತ್ರದಲ್ಲಿ ರಾಕ್ಷಸನಂತೆ ನಟಿಸಿದ್ದೇನೆ ಎಂದ ವಸಿಷ್ಠ ಸಿಂಹ

ಅಧಿಕೃತ ಅಲ್ಲದ ಹಲವಾರು ಫೇಸ್‌ಬುಕ್ ಖಾತೆಗಳನ್ನು ನಂಬಿ ಹಲವಾರು ಮಂದಿ ಮೋಸ ಹೋಗುತ್ತಲೇ ಇದ್ದಾರೆ. ಇದೀಗ ಇಂತಹದ್ದೇ ಪ್ರಕರಣವೊಂದು ಸ್ಯಾಂಡಲ್‌ವುಡ್‌ನಲ್ಲಿ ಬೆಳಕಿಗೆ ಬಂದಿದೆ. ಕನ್ನಡದ ಕಂಚಿನ ಧ್ವನಿಯ ನಟನೆಂದೇ ಗುರುತಿಸಿಕೊಂಡಿರುವ ವಸಿಷ್ಠ ಎನ್ ಸಿಂಹ ಹೆಸರಲ್ಲಿ ನಕಲಿ ಖಾತೆ ತೆರೆದು ಹುಡುಗಿಯನ್ನು ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
Vijaya Karnataka Web Vasishta


ಬೆಂಗಳೂರು ಸುಂಕದಕಟ್ಟೆ ಬಳಿಯ ಹೊಯ್ಸಳ ನಗರದಲ್ಲಿ ವೆಂಕಟೇಶ್ ಎಂಬ ಮೇಕಪ್ ಕಲಾವಿದ ವಸಿಷ್ಠ ಸಿಂಹ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದು ಹುಡುಗಿಯರನ್ನು ವಂಚಿಸುತ್ತಿದ್ದ. ಅಷ್ಟೇ ಅಲ್ಲದೆ ತನ್ನ ಮೊಬೈಲ್ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ವಸಿಷ್ಠ ಸಿಂಹ ಎಂದು ಬದಲಿಸಿಕೊಂಡಿದ್ದ. ಹಾಗಾಗಿ ಸುಲಭವಾಗಿ ಈ ನಂಬರ್ ವಸಿಷ್ಠ ಸಿಂಹ ಅವರದು ಎಂದು ನಂಬುತ್ತಿದ್ದರು.


ವಸಿಷ್ಠ ಸಿಂಹ ಹೆಸರಿನ ನಕಲಿ ಫೇಸ್‍ಬುಕ್ ಖಾತೆಗೆ ಮೆಸೇಜ್ ಮಾಡುತ್ತಿದ್ದ ಹುಡುಗಿಯರನ್ನು ಬುದ್ಧಿವಂತಿಕೆಯಿಂದ ಯಾಮಾರಿಸುತ್ತಿದ್ದ. "ನಾನು ಅವರ ಸಹಾಯಕ. ಅವರ ಮೊಬೈಲ್ ನಂಬರ್ ಕೊಡ್ತೀನಿ ತಗೊಳ್ಳಿ" ಎಂದು ಹೇಳಿ ತನ್ನದೇ ಇನ್ನೊಂದು ನಂಬರ್ ಕೊಡುತ್ತಿದ್ದ.

ಇದನ್ನು ನಂಬಿ ಹಲವಾರು ಹೆಣ್ಣುಮಕ್ಕಳು ಮೋಸ ಹೋಗಿದ್ದಾರೆ. ಬಳಿಕ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಅವರಿಂದ ಹಣ ತೆಗೆದುಕೊಂಡು ವಂಚಿಸುತ್ತಿದ್ದ. ಇದೀಗ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದು ಆರೋಪಿ ವೆಂಕಟೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಸಿಷ್ಠ ಸಿಂಹ ತನ್ನ ಫೇಸ್‍ಬುಕ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, ಈ ರೀತಿಯ ನಕಲಿ ಸ್ಟಾರ್‌ಗಳ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌