ಆ್ಯಪ್ನಗರ

ವಿಕೇಂಡ್‌ಗೆ ಜೀ ಕನ್ನಡದದಲ್ಲಿ ವೀಕ್ಷಕರಿಗೆ ಡಬಲ್‌ ಧಮಾಕ

ಮನರಂಜನಾ ವಾಹಿನಿಗಳಲ್ಲೇ ಅಗ್ರಸ್ಥಾನದಲ್ಲಿರುವ ತಮ್ಮ ವಾಹಿನಿ, ಈ ವಾರಾಂತ್ಯಕ್ಕೆ ವೀಕ್ಷಕರಿಗೆ ಡಬಲ್‌ ಧಮಾಕಾ ನೀಡುತ್ತಿದೆ ಎಂದು ಜೀ ಕನ್ನಡದ ...

Vijaya Karnataka 22 Jun 2019, 5:00 am
ಮನರಂಜನಾ ವಾಹಿನಿಗಳಲ್ಲೇ ಅಗ್ರಸ್ಥಾನದಲ್ಲಿರುವ ತಮ್ಮ ವಾಹಿನಿ, ಈ ವಾರಾಂತ್ಯಕ್ಕೆ ವೀಕ್ಷಕರಿಗೆ ಡಬಲ್‌ ಧಮಾಕಾ ನೀಡುತ್ತಿದೆ ಎಂದು ಜೀ ಕನ್ನಡದ ಬಿಸ್ನೆಸ್‌ಹೆಡ್‌ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.
Vijaya Karnataka Web HAMSALOKA


ಮೊದಲನೆಯದು, ಸರಿಗಮಪ ಲಿಟಲ್‌ ಚಾಂಫ್ಸ್‌ ಸೀಸನ್‌ 16ರಲ್ಲಿ ಡಾ.ಹಂಸಲೇಖ ಹುಟ್ಟುಹಬ್ಬದ ವಿಶೇಷ ಸಂಚಿಕೆ 'ಹಂಸಲೋಕ' ಹಾಗೂ ಯೋಗರಾಜ್‌ ಭಟ್‌ ನಿರ್ದೇಶನದ 'ಪಂಚತಂತ್ರ' ಚಿತ್ರದ ಟೆಲಿವಿಷನ್‌ ಪ್ರೀಮಿಯರ್‌ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

'ಈ ಶನಿವಾರ ಮತ್ತು ಭಾನುವಾರದಂದು ಜೀ ಕನ್ನಡವು ಪ್ರೇಕ್ಷ ಕರಿಗೆ ಈ ಎರಡೂ ಉಡುಗೊರೆಗಳನ್ನ ನೀಡುತ್ತಿದೆ. ಮಹಾಗುರುಗಳಾದ ಹಂಸಲೇಖ ಅವರ ಜನ್ಮದಿನದ ವಿಶೇಷವಾಗಿ ಶನಿವಾರ-ಭಾನುವಾರ ಎರಡೂ ದಿನ 'ಹಂಸಲೋಕ' ಎಂಬ ಸಂಚಿಕೆಯನ್ನು ಪ್ರಸಾರ ಮಾಡುತ್ತಿದ್ದೇವೆ. ಹಂಸಲೇಖ ಅವರಿಗೆ ಇದು 68ನೇ ಹುಟ್ಟುಹಬ್ಬವಾದ್ದರಿಂದ ಸರಿಗಮಪ ವೇದಿಕೆಯಿಂದ ಹೊರಬಂದ 68 ಗಾಯಕರಿಂದ ವಿಶೇಷ ಗೀತೆಗಳನ್ನು ಹಾಡಿಸಲಾಗುತ್ತದೆ. ಕಳೆದ ಸಂಚಿಕೆಯಲ್ಲಿ ವಿಜೇತರಾಗಿದ್ದ ಹನುಂತಣ್ಣ ಮಹಾಗುರುಗಳಿಗಾಗಿ ವಿಶೇಷ ಜನಪದ ಹಾಡನ್ನು ಹಂಸಲೇಖ ಅವರು ಉಡುಗೊರೆಯಾಗಿ ನೀಡಿರುವ ಹಾರ್ಮೋನಿಯಂ ನುಡಿಸಿಕೊಂಡು ಹಾಡಲಿದ್ದಾರೆ. ಜತೆಗೆ ಮೆಹಬೂಬ್‌ ಸಾಬ…, ಸುನೀಲ, ಜ್ಞಾನೇಶ ಕೂಡ ಗೀತೆಗಳನ್ನು ಹಾಡಲಿದ್ದಾರೆ. ವಿಜಯ್‌ ಪ್ರಕಾಶ್‌ ಅವರು ಹಂಸಲೇಖ ಅವರಿಗಾಗಿ ಒಂದು ಕವಿತೆ ಬರೆದು ಕೊಟ್ಟರೆ, ರಾಜೇಶ್‌ ಕೃಷ್ಣನ್‌ ತಮ್ಮದೇ ಶೈಲಿಯಲ್ಲಿ ಹಂಸಲೇಖ ಅವರ ಹಾಡುಗಳನ್ನು ಹಾಡಿ ಅವರಿಗೆ ರಾಗಮಾಲೆಯನ್ನು ಹಾಕಿದ್ದಾರೆ' ಎಂಬ ಮಾಹಿತಿ ನೀಡುತ್ತಾರೆ ರಾಘವೇಂದ್ರ ಹುಣಸೂರು.

'ಹಂಸಲೇಖ ಶಿಷ್ಯರಾದ ಹೇಮಂತ್‌, ಚೇತನ್‌, ನಂದಿತಾ, ಸಂಗೀತ ನಿರ್ದೇಶಕರಾದ ಕೆ.ಕಲ್ಯಾಣ್‌, ಅನೂಪ್‌ ಸೀಳಿನ್‌ ತಮ್ಮ ಗುರುಗಳಿಗೆ ಶುಭ ಕೋರಲು ಸರಿಗಮಪ ವೇದಿಕೆಗೆ ಬರಲಿದ್ದಾರೆ. ಇದೇ ಸಮಯದಲ್ಲಿ ಹಂಸಲೇಖ ಪೋಷಕರಿಗೆ ವಿಶೇಷ ಸಂದೇಶ ನೀಡುವರು'ಎಂದು ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಸರಿಗಮನ ಲಿಟಿಲ್‌ ಚಾಂಫ್ಸ್‌ ಸೀಸನ್‌ 16ರ ಈ ವಿಶೇಷ ಸಂಚಿಕೆ ಶನಿವಾರ ಅಂದರೆ ಜೂ.22ರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಭಾನುವಾರ ಪಂಚತಂತ್ರ

ಯೋಗರಾಜ್‌ ಭಟ್‌ ನಿರ್ದೇಶನದ ಪಂಚತಂತ್ರ ಚಿತ್ರ ಇದೇ ಭಾನುವಾರ, ಅಂದರೆ ಜೂ.23ರ ಮಧ್ಯಾಹ್ಯ 3 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಚಿತ್ರದಲ್ಲಿ, ವಿಹಾನ್‌ ಗೌಡ, ಸೋನಲ್‌, ಅಕ್ಷ ರ ಗೌಡ, ರಾಜ್‌ ದೀಪಕ್‌ಶೆಟ್ಟಿ, ರಂಗಾಯಣ ರಘು, ಕರಿಸುಬ್ಬು, ಬಲರಾಜ್‌ ವಾಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತವಿದೆ'ಎಂದು ರಾಘವೇಂದ್ರ ಹೇಳಿದ್ದಾರೆ.

ಶನಿವಾರ ರಾತ್ರಿ 8ಕ್ಕೆ ಹಂಸಲೋಕ ಸಂಚಿಕೆ ಪ್ರಸಾರವಾಗುತ್ತದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಂಚತಂತ್ರ ಪ್ರಸಾರವಾಗಲಿದೆ. ಪಂಚತಂತ್ರ ಮುಗಿದ ನಂತರ ರಾತ್ರಿ 8ಕ್ಕೆ ಮತ್ತೆ ಹಂಸಲೋಕದ ವಿಶೇಷ ಸಂಚಿಕೆಯ 2ನೇ ಭಾಗ ಸಹ ಅಂದೇ ಪ್ರಸಾರವಾಗಲಿದೆ.

---

ಈ ವಿಕೇಂಡ್‌ನ ಎರಡೂ ದಿನ ಮನೆಮಂದಿಯೆಲ್ಲಾ ಸಂಭ್ರಮದಿಂದ ಕುಳಿತು ನೋಡಿ ನಲಿಯಬಹುದಾದ ಕಾರ್ಯಕ್ರಮಗಳು ಜೀ ಕನ್ನಡದಲ್ಲಿ ಪ್ರಸಾರವಾಗಲಿವೆ.
-ರಾಘವೇಂದ್ರ ಹುಣಸೂರು, ಬಿಸ್ನೆಸ್‌ ಹೆಡ್‌, ಜೀ ಕನ್ನಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌