ಆ್ಯಪ್ನಗರ

ದಂಡುಪಾಳ್ಯದ ಸುಂದ್ರಿ ಪಾತ್ರ ಮಾಡಲು ತುಂಬಾ ಕಷ್ಟ ಆಯಿತು: ಸುಮನ್‌ ರಂಗನಾಥ್‌

ದಂಡುಪಾಳ್ಯ-4 ಸಿನಿಮಾ ನೋಡಿ ಹೊರಬಂದ ಮೇಲೆ ಇಂಥವರು ಇದ್ದಾರಾ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಜತೆಗೆ ಸುಮನ್‌ ರಂಗನಾಥ್‌ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ ನಟಿ ಸುಮನ್‌ ರಂಗನಾಥ್‌.

Vijaya Karnataka 31 Oct 2019, 8:00 am

* ಹರೀಶ್‌ ಬಸವರಾಜ್‌
Vijaya Karnataka Web suman-ranganath


ಕನ್ನಡ ಚಿತ್ರರಂಗದ ಚಿರ ಯವ್ವನೆ ಸುಮನ್‌ ರಂಗನಾಥ್‌ ಮೊದಲ ಬಾರಿಗೆ ಸೈಕೋ ಕಿಲ್ಲರ್‌ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಲವಲವಿಕೆ ಜತೆ ಮಾತನಾಡಿದ್ದಾರೆ.

*ದಂಡುಪಾಳ್ಯ-4ರಲ್ಲಿನಿಮ್ಮ ಪಾತ್ರ ತುಂಬಾ ಡಿಫ್ರೆಂಟ್‌ ಆಗಿದೆಯಂತೆ?

ಈ ಚಿತ್ರದಲ್ಲಿನನ್ನದು ಸುಂದ್ರಿ ಎನ್ನುವ ಪಾತ್ರ. ಇದು ರಗಡ್‌ ಮತ್ತು ರಾ ಲುಕ್‌ನಲ್ಲಿದೆ. ಇದಕ್ಕಾಗಿ ನಾನು ನನ್ನ ಲುಕ್ಸ್‌, ಆಟಿಟ್ಯೂಡ್‌ ಎಲ್ಲವನ್ನೂ ಬದಲಾಯಿಸಿಕೊಂಡಿದ್ದೇನೆ. ನನ್ನ ಕರಿಯರ್‌ನಲ್ಲಿಇದು ಒಂದು ರೀತಿ ಹೊಸ ಪ್ರಯತ್ನ.

ದಂಡುಪಾಳ್ಯಂ-4 ಚಿತ್ರವನ್ನು ರಿಜೆಕ್ಟ್ ಮಾಡಿದ ಸೆನ್ಸಾರ್‌ ಮಂಡಳಿ

*ಈ ಪಾತ್ರಕ್ಕಾಗಿ ಏನಾದರೂ ತಯಾರಿ ಮಾಡಿಕೊಂಡಿದ್ರಾ?

ನಿರ್ದೇಶಕರು ಕಥೆ ಹೇಳಿದ ಮೇಲೆ ತಯಾರಿಯ ಅಗತ್ಯ ಇದೆ ಎಂದು ಅನಿಸ್ತು. ಅದರಂತೆ ಕಥೆ ಹೇಗಿದೆಯೋ ಹಾಗೆ ತಯಾರಾಗುತ್ತಾ ಬಂದೆ. ನನಗೆ ಇಲ್ಲಿಗ್ಲಾಮರಸ್‌ ಡ್ರೆಸ್‌ ಇರಲಿಲ್ಲ, ಸ್ಟೈಲಿಷ್‌ ಲುಕ್‌ ಇರಲಿಲ್ಲ, ಸುಂದ್ರಿಗೆ ಊಟ ಸಿಕ್ಕರೆ ಸಾಕು, ಎಲ್ಲಿಬೇಕಾದ್ರು ಮಲಗಿಕೊಳ್ಳುತ್ತಾಳೆ. ಒಂದು ಚಿನ್ನದ ಚೈನ್‌ ಸಿಕ್ಕರೆ ಅಂದಿನ ಕೆಲಸ ಮುಗಿದಂತೆ. ಅಂತಹ ಪಾತ್ರವದು. ಒಂದು ರೀತಿಯಲ್ಲಿಈ ಪಾತ್ರ ನಿರ್ವಹಿಸಲು ನನಗೆ ತುಂಬಾ ಕಷ್ಟವಾಯಿತು. ಆದರೂ ಛಲ ಬಿಡದೆ ನಟಿಸಿದ್ದೇನೆ.

*ಹಿಂದಿನ ದಂಡುಪಾಳ್ಯ ಸಿನಿಮಾಗಳನ್ನು ನೋಡಿದ್ರಾ?

ಇಲ್ಲ. ಯಾವುದನ್ನು ನೋಡಿಲ್ಲ. ನೋಡಿದರೆ ಆ ಪಾತ್ರಗಳ ಪ್ರಭಾವ ನನ್ನ ಮೇಲೆ ಆಗಿಬಿಡುತ್ತಿತ್ತು. ನಾನು ಯಾವತ್ತು ಕಾಪಿ ಮಾಡಲು ಹೋಗುವುದಿಲ್ಲ. ಸುಮನ್‌ ರಂಗನಾಥ್‌ ಎಂದರೆ ಒಬ್ಬ ಒಳ್ಳೆಯ ನಟಿ ಎಂದು ಜನರು ಕರೆಯುತ್ತಾರೆ. ಅದು ನನ್ನ ವಿಶಿಷ್ಟ ಅಭಿನಯದಿಂದ ಮಾತ್ರ ಸಾಧ್ಯವಾಗಿದ್ದು. ದಂಡುಪಾಳ್ಯ-4ರಲ್ಲಿನಾನು ನಿರ್ವಹಿಸಿರುವ ಸುಂದ್ರಿ ಪಾತ್ರಕ್ಕೆ ಯಾವುದೇ ಹೋಲಿಕೆ ಇಲ್ಲ. ಕಂಪ್ಲೀಟ್‌ ಹೊಸ ಪಾತ್ರ.

ಬೀಡಿ ಸೇದುತ್ತಾ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡ 'ದಂಡುಪಾಳ್ಯ'

*ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ನೀವು ಇಂತಹ ಪಾತ್ರ ಒಪ್ಪಿಕೊಂಡಿದ್ದೇಕೆ?

ಒಬ್ಬ ಕಲಾವಿದೆಯಾಗಿ ಎಲ್ಲರೀತಿಯ ಪಾತ್ರಗಳನ್ನು ಮಾಡಲೇಬೇಕು. ನನ್ನನ್ನು ನಿರ್ದೇಶಕರು ಅಪ್ರೋಚ್‌ ಮಾಡಿದಾಗ ಒಮ್ಮೆ ಯೋಚನೆ ಮಾಡಬೇಕಾಯಿತು. ಈ ಪಾತ್ರ ಹೀಗೆದೆಯಲ್ಲಎಂದು ಆಮೇಲೆ ನನಗೆ ಇದು ಚಾಲೆಂಜಿಂಗ್‌ ಎನಿಸ್ತು. ಹಾಗಾಗಿ ಒಪ್ಪಿಕೊಂಡು ಮಾಡಿದೆ.

*ಇತ್ತೀಚೆಗೆ ಮದುವೆಯಾಗಿದ್ದೀರಾ. ಅದರ ಬಗ್ಗೆ?

ತುಂಬಾ ಚೆನ್ನಾಗಿದ್ದೇನೆ, ನನ್ನ ಎಲ್ಲಕೆಲಸಗಳಿಗೂ ನನ್ನ ಪತಿ ಸಪೋರ್ಟಿವ್‌ ಆಗಿದ್ದಾರೆ. ಮೊದಲ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದೇವೆ.

*ಯಾವ್ಯಾವ ಸಿನಿಮಾಗಳಲ್ಲಿನಟಿಸುತ್ತಿದ್ದೀರಾ?

'ಕವಲುದಾರಿ'ಯಲ್ಲಿ ಸೊಂಟ ಬಳುಕಿಸಿದ ಸುಮನ್‌ ರಂಗನಾಥ್‌

ಸದ್ಯ ತೋತಾತಪುರಿ, ಪರಿಮಳ ಲಾಡ್ಜ್‌ ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಇದರ ಜತೆ ಒಂದೆರೆಡು ಸ್ಕ್ರಿಪ್ಟ್‌ಗಳು ಬಂದಿವೆ ನೋಡಬೇಕು.

*ಈ ಸಿನಿಮಾ ಬಿಡುಗಡೆಯಾದ ಮೇಲೆ ಇಂಥದ್ದೇ ಪಾತ್ರಗಳು ಹುಡುಕಿ ಬರಬಹುದು?

ಬರಬಹುದು. ಆದರೆ, ನನಗೆ ಚಾಲೆಂಜಿಂಗ್‌ ಎನಿಸಿದರೆ ಮಾತ್ರ ಮಾಡುತ್ತೇನೆ. ಸುಖಾ ಸುಮ್ಮನೆ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌