ಆ್ಯಪ್ನಗರ

ಬೋಳುತಲೆ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್‌ ಕೊಟ್ಟ 'ಮೆಗಾಸ್ಟಾರ್‌' ಚಿರಂಜೀವಿ!

ಟಾಲಿವುಡ್‌ನ 'ಮೆಗಾಸ್ಟಾರ್‌' ಚಿರಂಜೀವಿ ಅವರ ಒಂದು ಹೊಸ ಲುಕ್‌ ವೈರಲ್‌ ಆಗಿದೆ. ಬೋಳುತಲೆ ಅವತಾರದಲ್ಲಿ ಕಾಣಿಸಿಕೊಂಡಿರುವ ಅವರು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅದರ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌...

Vijaya Karnataka Web 10 Sep 2020, 10:42 pm
65ನೇ ವಯಸ್ಸಿನಲ್ಲೂ ಭರ್ಜರಿ ಡಿಮ್ಯಾಂಡ್‌ ಉಳಿಸಿಕೊಂಡಿದ್ದಾರೆ ನಟ 'ಮೆಗಾಸ್ಟಾರ್‌' ಚಿರಂಜೀವಿ. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಇಂದಿಗೂ ಅವರ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಹಾಗಿದ್ದರೂ, ಸಿನಿಮಾಗಳ ಆಯ್ಕೆಯಲ್ಲಿ ಚಿರಂಜೀವಿ ಸಿಕ್ಕಾಪಟ್ಟೆ ಚ್ಯೂಸಿ. ಪ್ರಸ್ತುತ ಅವರ ಗಮನ 'ಆಚಾರ್ಯ' ಚಿತ್ರದ ಮೇಲಿದೆ. ಈ ನಡುವೆ ಅವರ ಒಂದು ಫೋಟೋ ವೈರಲ್‌ ಆಗಿದೆ.
Vijaya Karnataka Web ಚಿರಂಜೀವಿ


ಲಾಕ್‌ಡೌನ್‌ ಶುರು ಆದಾಗಿನಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಚಿರು. ಯಾವುದೇ ಸಿನಿಮಾ ಕೆಲಸಗಳನ್ನೂ ಅವರು ಕೈಗೆತ್ತಿಕೊಂಡಿಲ್ಲ. ಅವರ ವಯಸ್ಸು 60 ಪ್ಲಸ್‌ ಆಗಿರುವುದರಿಂದ ಕೊರೊನಾ ವೈರಸ್ ವಿಚಾರದಲ್ಲಿ ಅವರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ಹಾಗಾಗಿ ಸಿನಿಮಾ ಶೂಟಿಂಗ್‌ಗಳಿಗೆ ಬ್ರೇಕ್‌ ಹಾಕಿ, ಕುಟುಂಬದವರ ಜೊತೆಯಲ್ಲೇ ಅವರು ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಈ ಗ್ಯಾಪ್‌ನಲ್ಲೇ ಅವರು ಹೊಸ ಲುಕ್‌ ಮೂಲಕ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಚಿರಂಜೀವಿ ಹೆಚ್ಚು ಸಕ್ರಿಯ ಆಗಿದ್ದಾರೆ. ಈಗ ಅವರು ಒಂದು ಫೋಟೋ ಹಂಚಿಕೊಂಡಿದ್ದು, ಅದನ್ನು ಕಂಡವರು ಒಂದು ಕ್ಷಣ ದಂಗಾಗಿದ್ದು ನಿಜ. ಅದಕ್ಕೆ ಕಾರಣ; ಬೋಳುತಲೆ ಅವತಾರ! ಹೌದು, ತಲೆ ಬೋಳಿಸಿಕೊಂಡ ಗೆಟಪ್‌ನಲ್ಲಿರುವ ಫೋಟೋವನ್ನು ಅವರು ಅಪ್‌ಲೋಡ್‌ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ತಿಳಿಸಿಲ್ಲ.

also read: ನಟ ಚಿರಂಜೀವಿ ಕ್ಲಿಕ್ ಮಾಡಿದ 'ಸ್ಟಾರ್' ನಟರೊಬ್ಬರ ಬಾಲ್ಯದ ಫೋಟೋ ಇದು! ಯಾರೆಂದು ಗುರುತಿಸಿ?

ಈ ಫೋಟೋ ಜೊತೆಗೆ #UrbanMonk ಎಂದು ಚಿರು ನೀಡಿರುವ ಕ್ಯಾಪ್ಷನ್‌ ಕುತೂಹಲಕ್ಕೆ ಕಾರಣ ಆಗಿದೆ. 'ನಾನು ಸನ್ಯಾಸಿ ರೀತಿ ಯೋಚಿಸಬಲ್ಲೆನೇ' ಎಂಬ ಪ್ರಶ್ನೆಯನ್ನೂ ಅವರು ಜನರ ಮುಂದಿಟ್ಟಿದ್ದಾರೆ. ಆದರೆ ಅವರು ನಿಜಕ್ಕೂ ತಲೆ ಬೋಳಿಸಿಕೊಂಡಿದ್ದಾರಾ? ಫೋಟೋ ಶಾಪ್‌ ಮೂಲಕ ಈ ರೀತಿ ಮಾಡಲಾಗಿದೆಯಾ? ಪ್ರಾಸ್ತೆಟಿಕ್‌ ಮೇಕಪ್‌ ಸಹಾಯದಿಂದ ಈ ಗೆಟಪ್‌ ಸಿದ್ಧವಾಗಿದೆಯೇ? ಸದ್ಯ ಈ ಯಾವ ಪ್ರಶ್ನೆಗಳಿಗೂ ಚಿರು ಉತ್ತರ ನೀಡಿಲ್ಲ. ಆ ಮೂಲಕ ಅವರು ಕುತೂಹಲ ಕಾಯ್ದುಕೊಂಡಿದ್ದಾರೆ.

also read: 'ಮೆಗಾ ಸ್ಟಾರ್‌' ಚಿರಂಜೀವಿ ಜನ್ಮದಿನಕ್ಕೆ ಮರದ ಬೈಕ್ ಗಿಫ್ಟ್ ನೀಡಿದ ತೆಲುಗಿನ 'ಸ್ಟಾರ್‌' ನಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌