ಆ್ಯಪ್ನಗರ

ಅಗಲಿದ ಅಳಿಯ ಚಿರು ಕುರಿತು ಅರ್ಜುನ್ ಸರ್ಜಾ ಅವರ ನೋವಿನ ನುಡಿ!

ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ಗಾಡ್‌ಫಾದರ್ ಎನಿಸಿಕೊಂಡಿದ್ದವರು, ಅವರ ಮಾವ, ನಟ ಅರ್ಜುನ್‌ ಸರ್ಜಾ. ಚಿರು ಚಿತ್ರರಂಗಕ್ಕೆ ಬರುವುದಕ್ಕೂ ಇವರೇ ಕಾರಣವಾಗಿದ್ದರು. ಆದರೆ, ಇಂದು ಕಣ್ಣಮುಂದೆ ಬೆಳೆದ ಮನೆಯ ಹುಡುಗ ನಿಧನವಾಗಿರುವುದು ಅರ್ಜುನ್‌ಗೆ ತೀವ್ರ ದುಃಖ ತಂದಿದೆ.

Vijaya Karnataka Web 9 Jun 2020, 8:19 pm
ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್.
Vijaya Karnataka Web ಅಗಲಿದ ಅಳಿಯ ಚಿರು ಕುರಿತು ಅರ್ಜುನ್ ಸರ್ಜಾ ಅವರ ನೋವಿನ ನುಡಿ!


ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ ಹುಡುಗ ಉಸಿರು ಚೆಲ್ಲಿ ಮಲಗಿರುವುದನ್ನು ನೋಡುತ್ತಿದ್ದಂತೆಯೇ ಅವರು ತೀವ್ರ ದುಃಖಕ್ಕೆ ಅವರು ಒಳಗಾಗಿದ್ದರು. ಸೋಮವಾರ ಧ್ರುವ ಸರ್ಜಾ ಫಾರ್ಮ್‌ ಹೌಸ್‌ನಲ್ಲಿ ಚಿರು ಅಂತ್ಯಕ್ರಿಯೆ ಮಾಡಲಾಗಿದೆ. ಮಂಗಳವಾರ (ಜೂ.9) ಮೂರನೇ ದಿನದ ಕಾರ್ಯಗಳನ್ನು ಮಾಡಲಾಯಿತು.

ಇದೀಗ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಚಿರು ಕುರಿತು ಒಂದು ಪೋಸ್ಟ್‌ ಹಾಕಿದ್ದಾರೆ. 'ನನ್ನ ಪ್ರೀತಿಯ ಹುಡುಗನೇ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವಿಧಿ ಎಂಬುದು ತುಂಬ ಕ್ರೂರಿ' ಎಂದು ಬರೆದುಕೊಂಡಿರುವ ಅವರು, ಚಿರು ಜೊತೆಗೆ ಬಹಳ ಸಂತೋಷದಿಂದ ಕಳೆದ ಕ್ಷಣವೊಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ 16 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 1 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಬಂದಿವೆ. ಸಾಕಷ್ಟು ಜನ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅನೇಕರು ಕಾಮೆಂಟ್‌ಗಳ ಮೂಲಕ ಚಿರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

'ಅಶೋಕವನ'ದಲ್ಲಿ ರಾಮ-ರಾವಣನಾಗಬೇಕಿತ್ತು ಚಿರು ಸರ್ಜಾ! ಆದ್ರೆ, ವಿಧಿಯಾಟವೇ ಬೇರೆ!

ಅಂದಹಾಗೆ, ಚಿರು ಸಿನಿಮಾಗೆ ಬಂದಿದ್ದೇ ಅರ್ಜುನ್ ಸರ್ಜಾ ಮಾರ್ಗದರ್ಶನದಲ್ಲಿ. ಅರ್ಜುನ್ ಸಹೋದರ, ನಿರ್ದೇಶಕ ಕಿಶೋರ್ ಸರ್ಜಾ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಚಿರು ಕೆಲಸ ಮಾಡಿದ್ದರು. ಆನಂತರ ಅವರೇ ನಿರ್ದೇಶನದ 'ವಾಯುಪುತ್ರ' ಸಿನಿಮಾಕ್ಕೆ ಹೀರೋ ಆಗಿದ್ದರು. ಇದರ ನಿರ್ಮಾಣದ ಹೊಣೆ ಅರ್ಜುನ್ ಸರ್ಜಾ ಅವರದ್ದು. ಅದರ ಒಂದು ಹಾಡಿನಲ್ಲೂ ಅವರು ಕಾಣಿಸಿಕೊಂಡು, ಅಳಿಯನ ಚೊಚ್ಚಲ ಸಿನಿಮಾಗೆ ಸಾಥ್‌ ನೀಡಿದ್ದರು. ಆದರೆ, ಇಂದು ಚಿರು ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಇಡೀ ಸರ್ಜಾ ಕುಟುಂಬ ಚಿರು ಅಗಲಿಕೆಯ ನೋವಿನಲ್ಲಿದೆ.

ಚಿರು ಸರ್ಜಾ ಕೈಯಲ್ಲಿದ್ದವು ಹಲವಾರು ಸಿನಿಮಾಗಳು! ಅದರ ನಿರ್ದೇಶಕರು ಏನ್‌ ಹೇಳ್ತಾರೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌